Astrology: 12 ವರ್ಷಗಳ ನಂತರ ಅಪರೂಪದ ಕ್ಷಣ, ನಿಮಗಿಂತ ಪುಣ್ಯವಂತರು ಬೇರಾರೂ ಇಲ್ಲ
Guru Jupiter Entry: 12 ವರ್ಷಗಳ ನಂತರ ಗುರುವು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಹಾಗಾಗಿ ಈ ಬದಲಾವಣೆಯಿಂದ ಯಾವ ರಾಶಿಗೆ ಲಾಭ ಹಾಗೂ ಯಾವ ರಾಶಿಗೆ ನಷ್ಟ ಎಂಬುದು ಇಲ್ಲಿದೆ.
ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿರ್ದಿಷ್ಟ ಸಮಯದಲ್ಲಿ ಪ್ರವೇಶಿಸುತ್ತದೆ. ಇದರ ಪ್ರಭಾವವು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಹ ಹಲವಾರು ಬದಲಾವಣೆಗಳು ಆಗುತ್ತದೆ.
2/ 7
12 ವರ್ಷಗಳ ನಂತರ ಗುರುವು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಆದರೆ 3 ರಾಶಿಗಳಿಗೆ ಈ ಸಮಯದಲ್ಲಿ ಬಹಳ ಲಾಭವಂತೆ.
3/ 7
ಮೇಷ ರಾಶಿ: ಈ ರಾಶಿಯಲ್ಲಿ ಗುರುವಿನ ಸಂಚಾರವು ಮಂಗಳಕರವಾಗಿರಲಿದೆ. ಈ ಸಮಯದಲ್ಲಿ ಗುರುವು ಲಗ್ನದಲ್ಲಿ ನಿಮ್ಮ ರಾಶಿಯಿಂದ ಸಾಗಲಿದ್ದಾನೆ. ಅದಕ್ಕಾಗಿಯೇ ಈ ಸಮಯದಲ್ಲಿ ಆಫೀಸ್ನಲ್ಲಿ ನಿಮ್ಮ ಶಕ್ತಿಯು ಹೆಚ್ಚಾಗುತ್ತದೆ. ಅಲ್ಲದೆ, ಸಂಗಾತಿಯೊಂದಿಗಿನ ಸಂಬಂಧ ಸಹ ಗಟ್ಟಿಯಾಗುತ್ತದೆ.
4/ 7
ಈ ಸಮಯದಲ್ಲಿ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಅಲ್ಲದೆ, ಅವಿವಾಹಿತರಿಗೆ ಸಂಬಂಧ ಫಿಕ್ಸ್ ಆಗಬಹುದು. ಉದ್ಯಮಿಗಳು ಸಹ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆ ಇದ್ದು, ಬಹಳ ಒಳ್ಳೆಯ ದಿನಗಳು ಕಾದಿದೆ ಎನ್ನಬಹುದು.
5/ 7
ಕರ್ಕಾಟಕ: ಗುರುವಿನ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ ಎನ್ನಲಾಗುತ್ತಿದೆ. ಗುರುವಿನ ಸಂಚಾರವು ಜಾತಕದ ಕರ್ಮದ ಅಂಶದಲ್ಲಿ ಸಂಚರಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಅನೇಕ ಆರ್ಥಿಕ ಲಾಭ ಗಳಿಸಬಹುದು. ಒಳ್ಳೆಯ ಕೆಲಸದ ಆಫರ್ ಸಹ ಬರಬಹುದು.
6/ 7
ಮೀನ: ಈ ರಾಶಿಯಲ್ಲಿ ಗುರುವಿನ ಸಂಚಾರ ಲಾಭಗಳನ್ನು ನೀಡುತ್ತದೆ ಎನ್ನಬಹುದು. ಗುರುವು ನಿಮ್ಮ ರಾಶಿಯಿಂದ ಎರಡನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಆರ್ಥಿಕವಾಗಿ ಬಹಳಷ್ಟು ಲಾಭ ಸಿಗಲಿದೆ. ಆಸ್ತಿ ವಿಚಾರದಲ್ಲಿ ಸಹ ನಿಮಗೆ ಲಾಭ ಸಿಗುತ್ತದೆ ಎನ್ನಬಹುದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)