Guru Gochar: ಗುರು ಸ್ಥಾನ ಬದಲಾವಣೆಯಿಂದ ಹೆಚ್ಚಾಗಲಿದೆ ಈ ರಾಶಿಗಳಿಗೆ ಸಂಕಷ್ಟ
Guru Gochar: ಗುರು ಶೀಘ್ರದಲ್ಲೇ ಸ್ಥಾನ ಬದಲಾವಣೆ ಮಾಡುತ್ತಿದ್ದು, ಈ ಬೆಳವಣಿಗೆಯಿಂದಾಗಿ, ಅನೇಕ ರಾಶಿಗಳಿಗೆ ತೊಂದರೆ ಹೆಚ್ಚಾಗುತ್ತವೆ. ಈ ಸಮಯದಲ್ಲಿ ಅನಿರೀಕ್ಷಿತ ತೊಂದರೆಗಳು ಬರುತ್ತವೆ. ಯಾವ ರಾಶಿಗೆ ಸಮಸ್ಯೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರದ ಜೊತೆಗೆ ಸೂರ್ಯಾಸ್ತ ಮತ್ತು ಸೂರ್ಯೋದಯ ಕೂಡ ಬಹಳ ಮುಖ್ಯ. ಯಾವುದೇ ಗ್ರಹವಾಗಲಿ ಅವು ಒಮ್ಮೆ ಏಳುತ್ತವೆ ಹಾಗೂ ಮುಳುಗತ್ತವೆ. ಇದರ ಪರಿಣಾಮ ಅನೇಕ ರಾಶಿಗಳ ಮೇಲೆ ಬೀಳುತ್ತವೆ. ಕೆಲವರಿಗೆ ಒಳ್ಳೆಯದಾದರೆ ಇನ್ನು ಕೆಲವರಿಗೆ ಕೆಟ್ಟ ಫಲಿತಾಂಶ ಸಿಗುತ್ತದೆ.
2/ 7
ಗುರು ಗ್ರಹವು ಏಪ್ರಿಲ್ 1, 2023 ರಂದು ಸಂಜೆ 07:12 ಕ್ಕೆ ಮೀನ ರಾಶಿಯಲ್ಲಿ ಅಸ್ತಮಿಸಲಿದೆ. ಮತ್ತೆ ಮೇ ಮೊದಲ ವಾರದಲ್ಲಿ ಏರುತ್ತದೆ. ಆದರೆಈ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಕಷ್ಟಗಳು ಆರಂಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 7
ಮಕರ ರಾಶಿ: ಗುರುವು ಮಕರ ರಾಶಿಯ ಮೂರನೇ ಮತ್ತು 12 ನೇ ಮನೆಗೆ ಅಧಿಪತಿ. ಗುರುವಿನ ಸೂರ್ಯಾಸ್ತದ ಸಮಯದಲ್ಲಿ ಈ ರಾಶಿಯವರಿಗೆ ಉದ್ಯೋಗದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಕಚೇರಿಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಹಾಗೂ ಆರ್ಥಿಕ ನಷ್ಟವಾಗುವ ಸಂಭವವಿದೆ
4/ 7
ತುಲಾ ರಾಶಿ: ತುಲಾ ರಾಶಿಯ ಜಾತಕದಲ್ಲಿ ಮೂರು ಮತ್ತು ಆರನೇ ಮನೆಗಳ ಅಧಿಪತಿ ಗುರು ಗುರು. ಹಾಗಾಗಿ ಗುರುವಿನ ಈ ಬದಲಾವಣೆಯಿಂದ ಕಚೇರಿಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಹಿರಿಯರೊಂದಿಗಿನ ಸಂಬಂಧಗಳು ಹಾಳಾಗುತ್ತವೆ. ನಿಮ್ಮ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು. ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ.
5/ 7
ವೃಷಭ ರಾಶಿ: ಗುರುವು ವೃಷಭ ರಾಶಿಯ ಎಂಟು ಮತ್ತು ಹನ್ನೊಂದನೇ ಮನೆಗಳಿಗೆ ಅಧಿಪತಿ. ಹಾಗಾಗಿ ಈ ಸಮಯದಲ್ಲಿ ಕೆಲಸದಲ್ಲಿ ಯಶಸ್ಸು ಸಿಗಬೇಕು ಎಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಕಚೇರಿಯಲ್ಲಿ ಕೆಲಸದ ಹೊರೆಯಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ಕುಟುಂಬದಿಂದ ದೂರ ಉಳಿಯಬೇಕಾಗಬಹುದು.
6/ 7
ಮೇಷ: ಮೇಷ ರಾಶಿಯಲ್ಲಿ ಒಂಬತ್ತನೇ ಮತ್ತು 12ನೇ ಮನೆಗಳಿಗೆ ಗುರುವು ಅಧಿಪತಿ. ಹಾಗಾಗಿ ಈ ಸಮಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ಆಫೀಸ್ನಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ದೂರದ ಊರುಗಳಿಗೆ ಹೋಗಬೇಕಾಗಬಹುದು. ಕುಟುಂಬದಲ್ಲಿ ಅಶಾಂತಿ ಇರುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)