Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

Guru Chandal Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಗುರು ರಾಹುವಿನ ಸಂಯೋಗದಿಂದ ಗುರು ಚಂಡಾಲ ಯೋಗ ಉಂಟಾಗುತ್ತದೆ. ಆದರೆ ಈ ಯೋಗದಿಂದ ಕೆಲವು ರಾಶಿಯವರಿಗೆ ಸಮಸ್ಯೆ ಆಗುತ್ತದೆ. ಯಾವೆಲ್ಲಾ ರಾಶಿಗೆ ಸಮಸ್ಯೆಗಳಾಗುತ್ತದೆ? ನಿಮ್ಮ ರಾಶಿಯೂ ಅದರಲ್ಲಿ ಇದೆಯಾ? ಇಲ್ಲಿದೆ ನೋಡಿ ಮಾಹಿತಿ.

First published:

  • 19

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ಯೋಗಗಳು ಸಹ ಬಹಳ ಮುಖ್ಯವಾಗುತ್ತದೆ, ಕೆಲವೊಂದು ಯೋಗಗಳು ಬರೀ ಒಳ್ಳೆಯದನ್ನ ಮಾತ್ರ ಮಾಡುವುದಿಲ್ಲ. ಅದರಿಂದ ಸಮಸ್ಯೆಗಳು ಸಹ ಬರುತ್ತದೆ. ಆ ರೀತಿಯ ಯೋಗಗಳಲ್ಲಿ ಗುರು ಚಂಡಾಲ ಯೋಗ ಕೂಡ ಒಂದು.

    MORE
    GALLERIES

  • 29

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಇನ್ನು ಮೇಷ ರಾಶಿಯಲ್ಲಿ ಗುರು ರಾಹುವಿನ ಸಂಯೋಗದಿಂದಾಗಿ ಗುರು ಚಂಡಾಲ ಯೋಗ ಉಂಟಾಗುತ್ತದೆ ಎನ್ನಲಾಗುತ್ತದೆ. ಈ ಯೋಗದಿಂದ ಕೆಲ ರಾಶಿಯವರ ಜೀವನದಲ್ಲಿ ಕೆಟ್ಟ ಕಾಲ ಆರಂಭವಾಗುತ್ತದೆ. ಆ ರಾಶಿಯವರು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 39

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಈ ಗುರು ಚಂಡಾಲ ಯೋಗವು ಮೇಷ ರಾಶಿಯಲ್ಲಿ ಏಪ್ರಿಲ್ 22 ರಂದು ಉಂಟಾಗುತ್ತದೆ. ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಅಂದು ಪ್ರವೇಶ ಮಾಡುತ್ತಾನೆ. ಈ ಯೋಗದಿಂದ ಒಳ್ಳೆಯದಾಗುವುದಕ್ಕಿಂತ ಕೆಟ್ಟದ್ದಾಗುವುದೇ ಹೆಚ್ಚು. ಹಾಗಾಗಿ ಈ ಗುರುಚಂಡಾಲ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ.

    MORE
    GALLERIES

  • 49

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಮಕರ: ಈ ರಾಶಿಯವರ ಚತುರ್ಥ ಸ್ಥಾನದಿಂದ ಗುರು ಚಂಡಾಲ ಯೋಗವು ರೂಪುಗೊಳ್ಳಲಿದೆ. ಹಾಗಾಗಿ ಈ ಸಮಯದಲ್ಲಿ ಹಳೆಯ ವಿಷಯಗಳು ಪತಿ-ಪತ್ನಿಯರ ನಡುವೆ ಜಗಳಕ್ಕೆ ಕಾರಣವಾಗುತ್ತವೆ. ನೀವು ಕೆಲವು ಗೊಂದಲಗಳ ಕಾರಣದಿಂದ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಹೆಚ್ಚು ಅಶಾಂತಿ ಉಂಟಾಗಬಹುದು

    MORE
    GALLERIES

  • 59

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಕನ್ಯಾ: ಈ ರಾಶಿಯವರು ಚಂಡಾಲ ಯೋಗದಿಂದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಕಚೇರಿಯಲ್ಲಿಯೂ ಸಮಸ್ಯೆಗಳಾಗುತ್ತದೆ.

    MORE
    GALLERIES

  • 69

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಮಿಥುನ: ಗುರು ಚಂಡಾಲ ಯೋಗದ ಸಮಯದಲ್ಲಿ ಈ ರಾಶಿಯವರು ತುಂಬಾ ಜಾಗೃತರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಕೆಲವು ಕೆಟ್ಟ ಸುದ್ದಿಗಳನ್ನು ಕೇಳುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ಜಗಳ ಆಗಬಹುದು. ಅಲ್ಲದೇ ಆರೋಗ್ಯ ಮತ್ತು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು. ನಿಮ್ಮ ಕೆಲಸದಲ್ಲಿ ಅಡಚಣೆಗಳು ಉಂಟಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

    MORE
    GALLERIES

  • 79

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಮೇಷ: ಗುರು ಚಾಂಡಾಲ ಯೋಗದಿಂದ 6 ತಿಂಗಳ ಕಾಲ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ವ್ಯಾಪಾರಿಗಳು ಇದರಿಂದ ನಷ್ಟವನ್ನು ಅನುಭವಿಸಬಹುದು. ಅಲ್ಲದೇ, ನಿಮ್ಮ ಆರೋಗ್ಯವೂ ಹಾಳಾಗಬಹುದು. ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಜೀವನದಲ್ಲಿ ಅನೇಕ ಸಮಸ್ಯೆಗಳು ಬರಬಹುದು.

    MORE
    GALLERIES

  • 89

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    ಧನು: ಈ ರಾಶಿಯವರು ಗುರು ಚಂಡಾಲ ಯೋಗದಿಂದ ಕಷ್ಟಗಳು ಎದುರಾಗಲಿದೆ. ಚಾಲನೆ ಮಾಡುವಾಗ ನೀವು ಜಾಗರೂಕರಾಗಿರಬೇಕು. ವ್ಯಾಪಾರಿಗಳು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಹಣಕಾಸಿನ ತೊಂದರೆ ಇರುತ್ತದೆ. ನಿಮ್ಮ ಬಜೆಟ್ ಸ್ವಲ್ಪ ನಿಯಂತ್ರಣದಿಂದ ಹೊರಬರಬಹುದು. ನೀವು ಕೆಲಸ ಮಾಡುವ ಕಚೇರಿಯಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 99

    Guru Chandal Yoga: 7 ತಿಂಗಳು ಈ ರಾಶಿಯವರಿಗೆ ಕಷ್ಟಕಾಲ, ಒಂದೇ ಒಂದು ಯೋಗದಿಂದ ಬರಲಿದೆ ಸಾಲು ಸಾಲು ತೊಂದರೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES