Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

Guru Belssings: ನಮ್ಮ ಜೀವನದಲ್ಲಿ ಗುರು ಗ್ರಹ ಬಹಳ ಪ್ರಮುಖವಾದ ಸ್ಥಾನವನ್ನು ಹೊಂದಿದೆ. ಗುರು ಬಲ ಇದ್ದರೆ ಯಾವುದೇ ಕೆಲಸವನ್ನು ಸಹ ನಾವು ಸರಾಗವಾಗಿ ಮಾಡಬಹುದು. ಹಾಗೆಯೇ ಗುರು ಸಂಚಾರ ಮಾಡುವಾಗ ಶುಭ ಸ್ಥಾನದಲ್ಲಿ ಇದ್ದರೆ ಅದರಿಂದ ಕೆಲ ರಾಶಿಯವರ ಬದುಕು ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಯಾರ ಜಾತಕದಲ್ಲಿ ಗುರು ದುರ್ಬಲನಾಗಿರುತ್ತಾನೆಯೋ ಆ ವ್ಯಕ್ತಿಯ ಜೀವನದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಗುರು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಪ್ರತೀ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ. ಗುರು ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿ ಇರುತ್ತದೆ.

    MORE
    GALLERIES

  • 27

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಗುರು ಗ್ರಹ ಎಂದರೆ ಎಲ್ಲರಿಗೂ ಬಹಳ ಮುಖ್ಯವಾಗುತ್ತದೆ. ಯಾವುದೇ ಒಳ್ಳೆಯ ಕೆಲಸ ಮಾಡಬೇಕು ಎಂದರೂ ಅದಕ್ಕೆ ಗುರು ಗ್ರಹದ ಶಕ್ತಿ ಬೇಕು. ಮದುವೆಗೆ ಸಹ ಗುರು ಬಲ ಇರಬೇಕು ಎನ್ನಲಾಗುತ್ತದೆ. ಒಟ್ಟಾರೆ ನಮ್ಮ ಬದುಕಿನಲ್ಲಿ ಗುರು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಗುರುಗ್ರಹದ ಚಲನೆಯಲ್ಲಿನ ಸಣ್ಣ ಬದಲಾವಣೆ ಕೂಡ ಎಲ್ಲಾ ಜನರ ಮೇಲೆ ಪರಿಣಾಮ ಬೀರುತ್ತದೆ

    MORE
    GALLERIES

  • 37

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಗುರುವನ್ನು ಅದೃಷ್ಟ ಮತ್ತು ಸಂಪತ್ತಿನ ಗ್ರಹ ಎನ್ನಲಾಗುತ್ತದೆ. ಈ ಗುರು ಸಂಚಾರ ಮಾಡುವಾಗ ಶುಭ ಸ್ಥಾನದಲ್ಲಿ ಇದ್ದರೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು. ಈ ಗುರು ಗ್ರಹ ಸದ್ಯ ಶುಭ ಸ್ಥಾನದಲ್ಲಿದ್ದು, ಅದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಧನಸ್ಸು ರಾಶಿ: ಗುರುವಿನ ಕಾರಣದಿಂದ ಧನಸ್ಸು ರಾಶಿಯವರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ. ಅವರು ಯಾವುದೇ ಕೆಲಸ ಆರಂಭಿಸಿದರೂ ಸಹ ಅದರಲ್ಲಿ ಅವರಿಗೆ ಯಶಸ್ಸು ಸಿಗುತ್ತದೆ. ಇದರ ಜೊತೆಗೆ ಬಹಳ ದಿನಗಳಿಂದ ಕಾಡಿದ್ದ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಸಂತೋಷ ಹಾಗೂ ಸಮೃದ್ಧಿ ಸಹ ಈ ಸಮಯದಲ್ಲಿ ಹೆಚ್ಚಾಗುತ್ತದೆ.

    MORE
    GALLERIES

  • 57

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಇಷ್ಟೇ ಅಲ್ಲದೇ, ಅನಿರೀಕ್ಷಿತ ಆರ್ಥಿಕ ಲಾಭವಾಗಲಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ಅದರಿಂದ ದೊಡ್ಡ ಲಾಭ ಸಿಗುತ್ತದೆ. ಅಲ್ಲದೇ, ಸಾಲದ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ.  ಸಮಾಜದಲ್ಲಿ ನಿಮ್ಮ ಗೌರವ ಕೂಡ ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೇ,  ವೃತ್ತಿ ಜೀವನದಲ್ಲಿ ಪ್ರಗತಿ ಆಗುತ್ತದೆ

    MORE
    GALLERIES

  • 67

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಮೀನ ರಾಶಿ: ಈ ಗುರುವಿನ ಕಾರಣದಿಂದ ಮೀನ ರಾಶಿಯವರ ಅದೃಷ್ಟ ಬದಲಾಗುತ್ತದೆ. ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೇ, ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರಲಿದ್ದು, ಸಂತಾನಕ್ಕಾಗಿ ಕಾಯುತ್ತಿದ್ದರೆ ಸದ್ಯದಲ್ಲಿ ಗುಡ್​ ನ್ಯೂಸ್​ ಸಿಗಲಿದೆ.

    MORE
    GALLERIES

  • 77

    Guru Blessings: ಈ 2 ರಾಶಿಯವರಿಗೆ ರಾಜಯೋಗ, ಗುರು ಬಲದಿಂದ ಹಣ ಲಾಭ

    ಇದರ ಜೊತೆಗೆ ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸಲಿದ್ದು, ಕಷ್ಟಗಳಿಂದ ಸಹ ಮುಕ್ತಿ ಸಿಗುತ್ತದೆ. ಹಾಗೆಯೇ ಇದು ಹೊಸ ಯೋಜನೆ ಆರಂಭಿಸಲು ಉತ್ತಮ ಸಮಯವಾಗಿದ್ದು, ಯಶಸ್ಸು ಸುಲಭವಾಗಿ ಸಿಗುತ್ತದೆ. ಇದರ ಜೊತೆಗೆ ಆರ್ಥಿಕವಾಗಿ ಸಹ ದೊಡ್ಡ ಲಾಭವಾಗುತ್ತದೆ.

    MORE
    GALLERIES