TTD News: ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್ ನೀಡಿದ ಟಿಟಿಡಿ
Good News: ತಿರುಮಲ ತಿರುಪತಿಗೆ ದಾಖಲೆ ಮಟ್ಟದಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಅದರಲ್ಲೂ ಇದೀಗ ಶಾಲೆಗಳಿಗೆ ರಜೆ ನೀಡಿರುವುದರಿಂದ ಭಕ್ತರ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ದೇವರ ದರ್ಶನ ಪಡೆಯಲು ಭಕ್ತರು 12 ಗಂಟೆ ಕಾದು ಕುಳಿತುಕೊಳ್ಳುಬ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ಟಿಟಿಡಿ ಭಕ್ತರಿಗೆ ಗುಡ್ನ್ಯೂಸ್ ನೀಡಿದೆ.
Good News: ಕಳೆದ ವರ್ಷ ಕೋವಿಡ್ ಹಿನ್ನಲೆ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಎರಡು ವರ್ಷಗಳಿಂದ ಅನೇಕರು ದೇವರ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಈಗ ಸಹಜ ಸ್ಥಿತಿ ನಿರ್ಮಾಣವಾಗಿದ್ದು, ತಿಮ್ಮಪ್ಪನ ಕಣ್ತುಂಬಿಕೊಳ್ಳಲು ಭಕ್ತರ ದಂಡು ಹರಿದು ಬರುತ್ತಿದೆ.
2/ 8
ತಿರುಮಲ ತಿರುಪತಿ ದೇವಸ್ಥಾನವು ಆಗಸ್ಟ್ ತಿಂಗಳ ಎಲ್ಲಾ ಟಿಕೆಟ್ಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಎಲ್ಲಾ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ಗೆ ಭಾರಿ ಬೇಡಿಕೆಯಿದ್ದು, ಕೆಲವೇ ನಿಮಿಷಗಳಲ್ಲಿ ಟಿಕೆಟ್ಗಳು ಬುಕ್ ಆಗುತ್ತಿವೆ..
3/ 8
ತಿರುಮಲ ತಿರುಪತಿ ದೇವಸ್ಥಾನವು ಆಗಸ್ಟ್ ತಿಂಗಳ ಇತ್ತೀಚಿನ ಸೇವಾ ಟಿಕೆಟ್ಗಳನ್ನು ನಾಳೆ ಬೆಳಿಗ್ಗೆ 9 ಗಂಟೆಗೆ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತವಾಗಿ ಪ್ರಕಟಿಸಿದೆ. ನಾಳೆ ಕಲ್ಯಾಣೋತ್ಸವ, ಆರ್ಜಿತ ಬ್ರಹ್ಮೋತ್ಸವ, ಉಂಜುಲ ಸೇವೆ ಮತ್ತು ಸಹಸ್ರ ದೀಪಾಲಂಕಾರ ಸೇವೆಯ ಟಿಕೆಟ್ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ.
4/ 8
ಅಲ್ಲದೆ, ಲಕ್ಕಿ ಡಿಪ್ ಮೂಲಕ ಸುಪ್ರಭಾತ, ತೋಮಾಲ, ಅರ್ಚನೆ, ಆರ್ಜಿತ ಸೇವಾ ಟಿಕೆಟ್ ಪಡೆಯಲು. ಭಕ್ತರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಲು ಟಿಟಿಡಿ ಅವಕಾಶ ಕಲ್ಪಿಸಿದೆ. ಲಕ್ಕಿ ಡಿಪ್ ಮೂಲಕ ಭಕ್ತರು ಆಗಸ್ಟ್ ಕೋಟಾವನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
5/ 8
ಮತ್ತೊಂದೆಡೆ, ಎಳ್ಳುಂಡಿಯಿಂದ ವರ್ಚುವಲ್ ಸೇವಾ ಟಿಕೆಟ್ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ವರ್ಚುವಲ್ ಸೇವಾ ಟಿಕೆಟ್ಗಳನ್ನು ಎಳ್ಳುಂಡಿಯಿಂದ ಭಕ್ತರಿಗೆ ಲಭ್ಯವಾಗುವಂತೆ ಮಾಡಲು ಟಿಟಿಡಿ ನಿರ್ಧರಿಸಿದೆ.
6/ 8
ಇತ್ತೀಚೆಗಷ್ಟೇ ಜೂನ್ ತಿಂಗಳಿಗೆ ಬಿಡುಗಡೆಯಾಗಿದ್ದ ಶ್ರೀವಾರಿಯ ಮುನ್ನೂರು ರೂಪಾಯಿ ವಿಶೇಷ ಪ್ರವೇಶ ಟಿಕೆಟ್ ಗಳು ದಾಖಲೆ ಮಟ್ಟದಲ್ಲಿ ಬುಕ್ ಆಗಿದ್ದವು. ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀವಾರಿ ದರ್ಶನಕ್ಕಾಗಿ ವಿಶೇಷ ಪ್ರವೇಶ ದರ್ಶನ ಟಿಕೆಟ್ ಕಾಯ್ದಿರಿಸಿದ್ದಾರೆ.
7/ 8
ಆನ್ಲೈನ್ನಲ್ಲಿ ಟಿಕೆಟ್ ಲಭ್ಯವಾದ ಎರಡು ಗಂಟೆಗಳಲ್ಲಿ ಮೂರು ಲಕ್ಷ 50 ಸಾವಿರ ಟಿಕೆಟ್ಗಳು ಬುಕ್ ಆಗಿವೆ. ಟಿಟಿಡಿ ದಿನಕ್ಕೆ 25,000 ಟಿಕೆಟ್ಗಳನ್ನು ಲಭ್ಯಗೊಳಿಸಿದೆ.
8/ 8
ಮೊದಲ ಎರಡು ಗಂಟೆಗಳಲ್ಲಿ ದಾಖಲೆ ಮಟ್ಟದಲ್ಲಿ ಒಟ್ಟು 13.35 ಲಕ್ಷ ಟಿಕೆಟ್ಗಳು ಬುಕ್ ಆಗಿವೆ. ನಾಳೆಯಿಂದ ಬಿಡುಗಡೆಯಾಗಲಿರುವ ಸೇವೆಗಳಿಗೆ ಯಾವ ರೀತಿಯ ಬೇಡಿಕೆ ಇದೆ ಎಂಬುದನ್ನು ಕಾದು ನೋಡಬೇಕು.