Lucky Girls: ಈ ಹೆಸರಿನ ಹುಡುಗಿಯರು ಗಂಡನ ಮನೆಯ ಅದೃಷ್ಟ ದೇವತೆಯರಂತೆ
Lucky Girls: ಮಕ್ಕಳಿಗೆ ಹೆಸರಿಡುವಾಗ ಜಾತಕ ನೋಡುವುದು, ಅದೃಷ್ಟದ ಹೆಸರು ಯಾವುದು ಎಂದು ಹುಡುಕುವುದು ಸಾಮಾನ್ಯ. ಬಹಳಷ್ಟು ಸರ್ಕಸ್ ಮಾಡಿಯೇ ಪೋಷಕರು ಮಕ್ಕಳಿಗೆ ಹೆಸರನ್ನು ಇಡುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲ ಹೆಸರಿನಿಂದ ಆರಂಭವಾಗುವ ಹೆಣ್ಣು ಮಕ್ಕಳ ಬಹಳ ಅದೃಷ್ಟವಂತರಂತೆ. ಯಾವ ಹೆಸರಿನ ಹುಡುಗಿಯರು ಲಕ್ಕಿ ಎಂಬುದು ಇಲ್ಲಿದೆ.
ಪ್ರತಿಯೊಂದು ಹೆಸರಿಗೂ ಒಂದೊಂದು ಅರ್ಥವಿರುತ್ತದೆ. ಹೆಸರಿನ ಮೊದಲ ಪದ ನಮ್ಮ ಅದೃಷ್ಟ ಹೇಗಿದೆ ಎಂಬುದನ್ನ ತಿಳಿಸುತ್ತದೆಯಂತೆ. ನಮ್ಮ ಜೀವನ ಹೇಗಿರಲಿದೆ ಎಂಬುದನ್ನ ಹೆಸರಿನ ಮೂಲಕ ಸಹ ತಿಳಿದುಕೊಳ್ಳಬಹುದು.
2/ 8
ನಾಮಶಾಸ್ತ್ರದ ಪ್ರಕಾರ ಜಾತಕ ನೋಡಿ ಇಡುವ ಹೆಸರು ಬಹಳ ಒಳ್ಳೆಯದಂತೆ. ಅದರಲ್ಲೂ ಹುಡುಗಿಯರ ಹೆಸರು ಅದೃಷ್ಟವಂತೆ. ಆದರೂ ಅದರಲ್ಲೂ ಮುಖ್ಯವಾಗಿ ಕೆಲ ಅಕ್ಷರಗಳಿದ್ದು, ಆ ಹೆಸರಿನ ಹುಡುಗಿಯರು ಅದೃಷ್ಟ ಲಕ್ಷ್ಮಿಯರಂತೆ.
3/ 8
ಅಕ್ಷರ ಡಿ: ಈ ಅಕ್ಷರದಿಂದ ಆರಂಭವಾಗುವ ಹುಡುಗಿಯರು ಬಹಳ ಧೈರ್ಯಶಾಲಿಗಳಂತೆ. ಅಲ್ಲದೇ ಇವರು ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಮಾಡುತ್ತಾರೆ. ಅಷ್ಟೇ ಅಲ್ಲದೇ, ಈ ಹುಡುಗಿಯರು ಗಂಡನ ಮನೆಗೆ ಬಹಳ ಲಕ್ಕಿಯಂತೆ.
4/ 8
ಅಕ್ಷರ ಕೆ: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ಬಹಳ ಹಠಮಾರಿಗಳಂತೆ. ಹಿಡಿದ ಕೆಲಸವನ್ನು ಬಿಡುವ ಮಾತಿಲ್ಲ ಎನ್ನುವ ಸ್ವಭಾವ ಇವರದ್ದು. ಅಲ್ಲದೇ, ಇವರು ಸಹ ಬಹಳ ಅದೃಷ್ಟವಂತರಂತೆ. ಗಂಡನ ಮನೆಗೆ ಮಾತ್ರವಲ್ಲ, ಹೆತ್ತ ಮನೆಗೆ ಸಹ ಇವರು ಅದೃಷ್ಟ ಎನ್ನಬಹುದು.
5/ 8
ಅಕ್ಷರ ಕೆ: ಈ ಹೆಸರಿನವರಿಗೆ ಲಕ್ಷ್ಮಿ ಕೃಪೆ ಯಾವಾಗಲೂ ಇರುತ್ತದೆಯಂತೆ. ಇವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಹ ಭಾಗ್ಯ ಇವರದ್ದಾಗಿರುತ್ತದೆ ಎಂದರೆ ತಪ್ಪಲ್ಲ. ಅಲ್ಲದೇ, ಇವರು ಗಂಡನ ಮನೆಯ ನಸೀಬು ಬದಲಿಸುವ ಶಕ್ತಿ ಹೊಂದಿದ್ದಾರೆ.
6/ 8
ಅಕ್ಷರ ಎಂ: ಈ ಹೆಸರಿನ ಹುಡುಗಿಯರು ಕಷ್ಟಪಟ್ಟು ಕೆಲಸ ಮಾಡಿ ಐಷಾರಾಮಿ ಜೀವನ ತಮ್ಮದಾಗಿಸಿಕೊಳ್ಳುತ್ತಾರೆ. ಕೆಲಸ ಎಷ್ಟೇ ಕಷ್ಟವಿದ್ದರೂ ಸಹ ಅದನ್ನು ಮುಗಿಸದೇ ಬಿಡುವುದಿಲ್ಲ ಇವರು. ಹಾಗೆಯೇ ಗಂಡನ ಪಾಲಿಗೆ ಬಹಳ ಲಕ್ಕಿಯಂತೆ.
7/ 8
ಅಕ್ಷರ ಪಿ: ಸಾಮಾಜಿಕ ಜೀವನದಲ್ಲಿ ಬಹುಬೇಗ ಪ್ರಸಿದ್ಧಿ ಪಡೆಯುವ ಹುಡುಗಿಯರು ಈ ಅಕ್ಷರದವರು ಎನ್ನಬಹುದು. ಅಲ್ಲದೇ, ಗಂಡನ ಮನೆಗೆ ಹೋದ ನಂತರ ಸಹ ಅವರ ಬದುಕಿನಲ್ಲಿ ಬೆಳಕಾಗಿ ಬೆಳಗುತ್ತಾರೆ ಎನ್ನಬಹುದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)