Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

Puja Vidhi: ಸಾಮಾನ್ಯವಾಗಿ ದೇವರ ಮುಂದೆ ಎಣ್ಣೆ ಅಥವಾ ತುಪ್ಪದ ದೀಪಗಳನ್ನು ಬೆಳಗಿಸಲಾಗುತ್ತದೆ. ಆದರೆ ದೇವರ ಮುಂದೆ ಯಾವ ದೀಪ ಬೆಳಗಿಸುವುದು ಮಂಗಳಕರ ಎಂಬುದರ ಬಗ್ಗೆ ಗೊಂದಲವಿದೆ, ಅದಕ್ಕೆ ಪರಿಹಾರ ಇಲ್ಲಿದೆ.

First published:

  • 18

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ಹಿಂದೂ ಧರ್ಮದಲ್ಲಿ, ಪ್ರತಿ ಮನೆಯಲ್ಲಿ ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು ಎಂಬ ಸಂಪ್ರದಾಯವಿದೆ. ದೇವಾಲಯದಲ್ಲಿ ಮತ್ತು ಮನೆಯಲ್ಲಿ ಆರತಿ ಸಹ ಮಾಡಲಾಗುತ್ತದೆ. ದೀಪವನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ. ದೀಪವನ್ನು ಹಚ್ಚುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 28

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ಅನೇಕ ಸ್ಥಳಗಳಲ್ಲಿ ದೇವರ ಮುಂದೆ ತುಪ್ಪ ಮತ್ತು ಎಣ್ಣೆ ದೀಪಗಳನ್ನು ಹಚ್ಚಲಾಗುತ್ತದೆ. ಇದು ಸಾಮಾನ್ಯ ಕೂಡ. ಆದರೆ ತುಪ್ಪದ ದೀಪವನ್ನು ಯಾವಾಗ ಹಚ್ಚಬೇಕು ಮತ್ತು ಎಣ್ಣೆ ದೀಪವನ್ನು ಯಾವಾಗ ಹಚ್ಚಬೇಕು ಎಂಬ ಗೊಂದಲ ಇದೆ. ಅದಕ್ಕೆ ಉತ್ತರ ಇಲ್ಲಿದೆ.

    MORE
    GALLERIES

  • 38

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ಯಾವ ದೀಪವನ್ನು ಹಚ್ಚುವುದು ಮಂಗಳಕರ? ಹಿಂದೂ ಧರ್ಮದಲ್ಲಿ, ದೇವರ ಮುಂದೆ ತುಪ್ಪ ಮತ್ತು ಎಣ್ಣೆ ದೀಪಗಳನ್ನು ಹಚ್ಚಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ದೇವರ ಬಲಭಾಗದಲ್ಲಿ ತುಪ್ಪದ ದೀಪ ಮತ್ತು ಎಡಭಾಗದಲ್ಲಿ ಎಣ್ಣೆ ದೀಪವನ್ನು ಬೆಳಗಿಸಬೇಕು. ಸರಳವಾಗಿ ಹೇಳುವುದಾದರೆ, ನೀವು ಎಣ್ಣೆಯ ದೀಪವನ್ನು ಹಚ್ಚುತ್ತಿದ್ದರೆ, ನೀವು ಅದನ್ನು ಯಾವಾಗಲೂ ನಿಮ್ಮ ಬಲಭಾಗದಲ್ಲಿ ಇಡಿ ಮತ್ತು ನೀವು ತುಪ್ಪದ ದೀಪವನ್ನು ಹಚ್ಚುತ್ತಿದ್ದರೆ, ಅದನ್ನು ಯಾವಾಗಲೂ ನಿಮ್ಮ ಎಡಭಾಗದಲ್ಲಿ ಇಡಿ.

    MORE
    GALLERIES

  • 48

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ದೀಪವನ್ನು ಹಚ್ಚುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ: ದೀಪವನ್ನು ಬೆಳಗಿಸುವಾಗ, ಯಾವಾಗಲೂ ದೇವರ ವಿಗ್ರಹ ಅಥವಾ ಫೋಟೋದ ಮುಂದೆ ದೀಪವನ್ನು ಇಡಲು ಮರೆಯದಿರಿ. ದೀಪವನ್ನು ದೂರ ಇಟ್ಟರೆ ಸಮಸ್ಯೆಗಳು ಬರಬಹುದು ಎನ್ನಲಾಗುತ್ತದೆ.

    MORE
    GALLERIES

  • 58

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ಇನ್ನು ದೀಪ ಹಚ್ಚುವಾಗ ತಪ್ಪು ಮಾಡಿದರೆ ನಾವು ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ. ನೀವು ಅಪ್ಪಿ-ತಪ್ಪಿಯೂ ಪಶ್ಚಿಮ ದಿಕ್ಕಿಗೆ ದೀಪ ಹಚ್ಚಬೇಡಿ. ಹೀಗೆ ಹಚ್ಚಿದರೆ ಬಡತನ ಬರುತ್ತದೆ ಮತ್ತು ಸಂಪತ್ತು ನಷ್ಟವಾಗುತ್ತದೆ.

    MORE
    GALLERIES

  • 68

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ಸಂಜೆಯ ಸಮಯದಲ್ಲಿ ಮುಖ್ಯ ಬಾಗಿಲಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗಿ, ಇಷ್ಟಪಟ್ಟ ಬಯಕೆ ಈಡೇರಿಸುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 78

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    ಇನ್ನು ಶಾಸ್ತ್ರಗಳ ಪ್ರಕಾರ ಉತ್ತರ ದಿಕ್ಕಿನಲ್ಲಿ ದೀಪವನ್ನು ಹಚ್ಚಬಹುದು. ಮನೆಯಲ್ಲಿನ ದಾರಿದ್ರ್ಯ ನಿವಾರಣೆಗೆ ಈ ದಿಕ್ಕಿಗೆ ದೀಪ ಹಚ್ಚಿದರೆ ಉತ್ತಮ. ಅದರಲ್ಲೂ ಸಂಜೆ ಈ ದಿಕ್ಕಿನಲ್ಲಿ ತುಪ್ಪದ ದೀಪ ಹಚ್ಚಿದರೆ ಲಾಭ ಜಾಸ್ತಿ ಎನ್ನಲಾಗುತ್ತದೆ.

    MORE
    GALLERIES

  • 88

    Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES