Ghati Subramanya: ನಾಳೆ ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ, ವರ್ಷಗಳ ಬಳಿಕ ಅದ್ಧೂರಿ ಆಚರಣೆ
Ghati Subramanya Brahmarathotsava: ನಾಗಾರಾಧನೆಗೆ ಪ್ರಸಿದ್ಧವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಳೆ ಬ್ರಹ್ಮರಥೋತ್ಸವ ನಡೆಯಲಿದ್ದು, ಈಗಾಗಲೇ ಇದಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಳೆದ 4 ದಿನಗಳಿಂದ ಇದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯುತ್ತಿವೆ.
ನಾಗಾರಾಧನೆಗೆ ಪ್ರಸಿದ್ಧವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಳೆ ಬ್ರಹ್ಮರಥೋತ್ಸವ ನಡೆಯಲಿದ್ದು , ಈಗಾಗಲೇ ಇದಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಳೆದ 4 ದಿನಗಳಿಂದ ಇದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯುತ್ತಿವೆ.
2/ 7
ಈಗಾಗಲೇ ದೇವಾಲಯ ಸುತ್ತ-ಮುತ್ತ ಹಾಗೂ ಪ್ರಾಂಗಣವನ್ನು ಬಣ್ಣಗಳಿಂದ ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಗರುಡಸ್ತಂಭ ಹಾಗೂ ಮೆಟ್ಟಿಲುಗಳನ್ನು ಸಹ ಸ್ವಚ್ಛ ಮಾಡಲಾಗಿದೆ.
3/ 7
ದೇವಾಲಯದ ಮುಂಭಾಗ ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಯ ದೀಪಾಲಂಕಾರ ನಿಲ್ಲಿಸಲಾಗಿದ್ದು, ಜೊತೆಗೆ ದೇವಾಲಯವನ್ನು ಸಹ ಸುಂದರ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಹಾಗೆಯೇ ಸುತ್ತ-ಮುತ್ತ ಪಾರ್ಕಿಂಗ್ ಮಾಡದಂತೆ ಸಹ ನಿಷೇಧ ಮಾಡಲಾಗಿದೆ.
4/ 7
ಬುಧವಾರ ಬೆಳಗ್ಗೆ 2.30ಕ್ಕೆ ಅಭಿಷೇಕ ಮಾಡಲಾಗುತ್ತದೆ. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಭಿಷೇಕ, ಗಂಧ, ವಿಭೂತಿ ಹಾಗೂ ರುದ್ರಾಭಿಷೇಕ ಮಾಡಲಾಗುತ್ತದೆ. ಈ ಅಭಿಷೇಕದ ನಂತರ ಹೂವಿನ ಅಲಂಕಾರ ಮಾಡಲಾಗುತ್ತದೆ.
5/ 7
ಈ ದಿನ ಬೆಳಗಿನ ಜಾವಾ 4.30ಕ್ಕೆ ಮಹಾಮಂಗಳಾರತಿ ಮಾಡಲಾಗುತ್ತದೆ. ನಂತರ 4,45ಕ್ಕೆ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ದೇವಸ್ಥಾನ ಮಾಹಿತಿ ನೀಡಿದೆ. ಬೆಳಗ್ಗೆ ನಡೆಯುವ 11.50 ರಿಂದ 12ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.
6/ 7
600 ವರ್ಷಗಳ ಇತಿಹಾಸ ಹೊಂದಿರುವ ಈ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹಿಂದೆ ಸಹ ಒಂದು ಕಥೆ ಇದೆ. ಗರುಡ ಹಾಗೂ ಹಾವುಗಳಿಗಿದ್ದ ದ್ವೇಷದ ಕಾರಣದಿಂದ ಸರ್ಪಗಳ ಸಂತತಿ ನಾಶವಾಗುತ್ತಿತ್ತು.
7/ 7
ಹಾಗಾಗಿ ಈ ಸಮಯದಲ್ಲಿ ಸರ್ಪರೂಪಿಯಾಗಿ ಸುಬ್ರಹ್ಮಣ್ಯ ಈ ಕ್ಷೇತ್ರದಲ್ಲಿ ತಪಸ್ಸು ಮಾಡುತ್ಥಾನೆ. ಆಗ ಲಕ್ಷ್ಮಿನರಸಿಂಹಪ್ರತ್ಯೇಕ್ಷನಾಗಿ ರಕ್ಷಣೆ ನೀಡುವುದ್ದಾಗಿ ಭರವಸೆ ನೀಡುತ್ತಾನೆ, ಹಾಗಾಗಿ ಇಲ್ಲಿ ಸಾಲಿಗ್ರಾಮದ ಏಕಶಿಲೆಯಲ್ಲಿ ಲಕ್ಷ್ಮೀನರಸಿಂಹ ಮತ್ತು ಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಇದೆ ಎಂದು ಹೇಳಲಾಗುತ್ತದೆ.