Ghati Subramanya: ಅದ್ಧೂರಿಯಾಗಿ ನಡೆದ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು
Ghati Subramanya Brahmarathotsava: ನಾಗಾರಾಧನೆಗೆ ಪ್ರಸಿದ್ಧವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರನ್ನು ಕಣ್ತುಂಬಿಕೊಂಡಿದ್ದಾರೆ.
ಇತಿಹಾಸ ಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ಸಂಭ್ರಮದಿಂದ ಜರುಗಿದ್ದು, ಪುಷ್ಪ ಶುದ್ದ ಷಷ್ಟಿ ಹಿನ್ನಲೆ ಬ್ರಹ್ಮರಥೋತ್ಸವಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. 12 ಗಂಟೆಗೆ ಸುಭ್ರಹ್ಮಣ್ಯ ರಥವನ್ನ ಭಕ್ತಾದಿಗಳು ಎಳೆಯುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು.
2/ 8
ಈ ಬಾರಿ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದು, ಕೊರೊನಾ ರೂಲ್ಸ್ ಮರೆತು ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು. ಬೆಳಗ್ಗೆಯಿಂದ ಸಾವಿರಾರು ಭಕ್ತರು ಆಗಮನದ ಹಿನ್ನಲೆ ಘಾಟಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
3/ 8
ಕಾರು ಬೈಕ್ ಸೇರಿ ಬಸ್ಗಳಲ್ಲಿ ಅಪಾರ ಪ್ರಮಾಣದ ಭಕ್ತರ ಆಗಮನವಾಗಿದ್ದು, ಸರತಿ ಸಾಲಿನಲ್ಲಿ ನಿಂತು ನರಸಿಂಹ ಸಮೇತ ಘಾಟಿ ಸುಬ್ರಮಣ್ಯನ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ದರ್ಶನಕ್ಕೆ ವಿಶೇಷ ಸಾಲಿನ ವ್ಯವಸ್ಥೆ ಸಹ ಮಾಡಲಾಗಿದೆ.
4/ 8
ಬೆಳಗ್ಗೆ 2 ಗಂಟೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಆರಂಭವಾಗಿದ್ದು, ವಿಶೇಷ ಅಲಂಕಾರದ ಮೂಲಕ ಭಕ್ತರಿಗೆ ನರಸಿಂಹ ಸಮೇತ ಸುಬ್ರಮಣ್ಯನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
5/ 8
ದೇವಾಲಯದ ಮುಂಭಾಗ ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಯ ದೀಪಾಲಂಕಾರ ನಿಲ್ಲಿಸಲಾಗಿದ್ದು, ಜೊತೆಗೆ ದೇವಾಲಯವನ್ನು ಸಹ ಸುಂದರ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಹಾಗೆಯೇ ಸುತ್ತ-ಮುತ್ತ ಪಾರ್ಕಿಂಗ್ ಮಾಡದಂತೆ ಸಹ ನಿಷೇಧ ಮಾಡಲಾಗಿದೆ.
6/ 8
ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಭಿಷೇಕ, ಗಂಧ, ವಿಭೂತಿ ಹಾಗೂ ರುದ್ರಾಭಿಷೇಕ ಮಾಡಲಾಗಿದ್ದು, ನಂತರ ಹೂವಿನ ಅಲಂಕಾರ ಮಾಡಲಾಗಿದೆ.
7/ 8
ಕಳೆದ ವರ್ಷ ಕೊರೊನಾ ಕಾರಣದಿಂದ ಬ್ರಹ್ಮರಥೋತ್ಸವವನ್ನು ಬಹಳ ಸರಳವಾಗಿ ನಡೆಸಲಾಗಿತ್ತು, ಆದರೆ ಈ ಬಾರಿ ಅದ್ಧೂರಿಯಾಗಿ ರಥೋತ್ಸವ ನಡೆಸಲಾಗಿದ್ದು, ರಾಜ್ಯದ ಮೂಲೆ ಮೂಲೆಯಿಂದ ಭಕ್ತಾಧಿಗಳು ಆಗಮಿಸಿದ್ದಾರೆ.
8/ 8
ಈ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಸರ್ಪ ದೋಷ ಪರಿಹಾರ ಸೇರಿದಂತೆ ವಿವಿಧ ರೀತಿಯ ನಾಗಾರಾಧನೆಗೆ ಇದು ಪ್ರಸಿದ್ದವಾಗಿದೆ.