Dream Meaning: ಕನಸಿನಲ್ಲಿ ಹಾವು ಕಚ್ಚಿದ್ರೆ ಲೈಫ್ನಲ್ಲಿ ಹೀಗೆಲ್ಲಾ ಬದಲಾವಣೆ ಆಗುತ್ತಂತೆ
Snake Dream: ನಿದ್ದೆ ಮಾಡುವಾಗ ಚಿತ್ರ-ವಿಚಿತ್ರ ಕನಸು ಬೀಳುವುದು ಸಾಮಾನ್ಯ. ಆದರೆ ಆ ಕನಸುಗಳಿಗೆ ಅರ್ಥ ಇದೆ ಎಂಬುದರ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ನಿಮ್ಮ ಕನಸಿನಲ್ಲಿ ಪದೇ ಪದೇ ಹಾವು ಬರುತ್ತಿದ್ದರೆ ಅದರ ಅರ್ಥವೇನು ಎಂಬುದು ಇಲ್ಲಿದೆ.
ಹಾವು ಎಂದರೆ ಸಾಕು ಯಾರಿಗಾದರೂ ಭಯ ಆಗುವುದು ಸಹಜವೇ ಸರಿ. ಅದರ ಬಾಲ ಕಂಡರೂ ಸಾಕು ನಾವು ಬೆಚ್ಚಿ ಬೇಳುತ್ತೇವೆ. ಆದರೆ ಕನಸಿನಲ್ಲಿ ಹಾವು ಕಂಡರೆ ಅದಕ್ಕೆ ವಿಭಿನ್ನವಾದ ಅರ್ಥವಿದೆ. ಕನಸಿನಲ್ಲಿ ಪದೇ ಪದೇ ಹಾವು ಕಾಣಿಸುವುದು ಭಯ ಹುಟ್ಟಿಸುತ್ತದೆ.
2/ 8
ಆದರೆ ನಾವು ನಾಗರ ಹಾವನ್ನು ದೇವರ ರೂಪ ಎಂದು ಭಾವಿಸುತ್ತೇವೆ. ಹಾಗೆಯೇ ಕನಸಿನಲ್ಲಿ ನಾಗರ ಹಾವು ಅಥವಾ ಇತರ ಯಾವುದೇ ಹಾವು ಕಂಡರೂ ಸಹ ಏನೂ ಸೂಚನೆ ಕೊಡುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ. ಆದರೂ ಸಹ ಕನಸಿನಲ್ಲಿ ಹಾವು ಬಂದರೆ ಭಯದಿಂದ ಮಧ್ಯೆಕ್ಕೆ ಏಳುತ್ತೇವೆ.
3/ 8
ಕನಸಿನಲ್ಲಿ ಕಪ್ಪು ಹಾವು ಕಚ್ಚಿದರೆ: ನಿಮಗೆ ಗೊತ್ತಾ ಕನಸಿನಲ್ಲಿ ಕಪ್ಪು ಹಾವು ಕಂಡರೆ ಅದು ಅಶುಭದ ಸಂಕೇತವಂತೆ. ಪುರಾಣಗಳ ಪ್ರಕಾರ ಕನಸಿನಲ್ಲಿ ಕಪ್ಪು ಹಾವು ಹಚ್ಚಿದರೆ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಇದು ನಿಮಗೆ ಕಾಡುವ ದೊಡ್ಡ ಸಮಸ್ಯೆಯ ಸೂಚನೆ ಎನ್ನಬಹುದು.
4/ 8
ಕನಸಿನಲ್ಲಿ ಕಪ್ಪು ಹಾವನ್ನು ಕೊಲ್ಲುವುದು: ಕನಸಿನಲ್ಲಿ ನೀವು ಹಾವನ್ನು ಸಾಯಿಸುವುದು ಒಳ್ಳೆಯದರ ಲಕ್ಷಣವಂತೆ. ಈ ರೀತಿ ಕನಸು ಬಿದ್ದರೆ ನಿಮಗೆ ಶತ್ರುಗಳ ಕಾಟ ಇರುವುದಿಲ್ಲ ಎನ್ನಲಾಗುತ್ತದೆ. ಇದರಿಂದ ನಿಮಗೆ ಜಯ ಸಹ ಸಿಗುತ್ತದೆ ಎನ್ನಬಹುದು.
5/ 8
ಕಪ್ಪು ಹಾವು ಮತ್ತು ಮುಂಗುಸಿಯ ಜಗಳ: ನಿಮಗೆ ಕನಸಿನಲ್ಲಿ ಹಾವು ಮತ್ತು ಮುಂಗಿಸಿಯ ಜಗಳ ನೋಡಿದರೆ ಇದು ಸಹ ಕೆಟ್ಟದರ ಸಂಕೇತ ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಈ ರೀತಿ ಕನಸು ಬಿದ್ದರೆ ನಿಮಗೆ ಕಾನೂನಿನ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಹೊರಬರುವುದು ಕಷ್ಟ ಸಹ ಎನ್ನಲಾಗುತ್ತದೆ.
6/ 8
ಕನಸಿನಲ್ಲಿ ಹಾವನ್ನು ಹಿಡಿಯುವುದು: ನಿಮಗೆ ಕನಸಿನಲ್ಲಿ ಹಾವನ್ನು ಹಿಡಿಯುತ್ತಿರುವ ರೀತಿ ಕಂಡರೆ ಇದು ಮಂಗಳಕರ ಎನ್ನಲಾಗುತ್ತದೆ. ಈ ಸಮಯದಲ್ಲಿ ಆರ್ಥಿಕವಾಗಿ ನಿಮಗೆ ಲಾಭಗಳು ಜಾಸ್ತಿ ಎನ್ನಲಾಗುತ್ತದೆ. ಹಾಗೆಯೇ ಬಹಳ ದಿನಗಳಿಂದ ಕಾಡಿದ್ದ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
7/ 8
ಕನಸಿನಲ್ಲಿ ಹಾವು ಕಚ್ಚಿದರೆ: ನಿಮಗೆ ಕನಸಿನಲ್ಲಿ ಯಾವುದೇ ಹಾವು ಕಚ್ಚಿದರೂ ಸಹ ಅದು ಕೆಟ್ಟ ವಿಚಾರದ ಸೂಚನೆ ಎನ್ನಲಾಗುತ್ತದೆ. ಈ ರೀತಿ ಕನಸು ಬಿದ್ದರೆ ನಿಮಗೆ ಉದ್ಯೋಗ ಹಾಗೂ ವ್ಯವಹಾರದಲ್ಲಿ ಸಮಸ್ಯೆಗಳು ಕಾಡಬಹುದು ಎನ್ನುವ ನಂಬಿಕೆ ಇದೆ.
8/ 8
ಇನ್ನು ಕನಸಿನಲ್ಲಿ ಪದೇ ಪದೇ ಹಾವು ಬರುತ್ತಿದ್ದರೆ ಅದು ಪಿತೃ ದೋಷದ ಸಂಕೇತ ಎಂದು ಹೇಳಲಾಗುತ್ತದೆ. ನಿಮಗೆ ಪಿತೃದೋಷ ಇದ್ದರೆ ಕನಸಿನಲ್ಲಿ ಹಾವು ಬರುತ್ತದೆ ಎನ್ನಲಾಗುತ್ತದೆ. ಹಾಗಾಗಿ ಇದಕ್ಕೆ ಪರಿಹಾರ ಪಡೆಯುವುದು ಮುಕ್ತಿ ನೀಡುತ್ತದೆ.