Garlic Remedy For Rahu Dosha: ರಾಹು ಹಾಗೂ ಕೇತು ಎಂದರೆ ತಕ್ಷಣ ಯಾವುದೋ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಅನಿಸುತ್ತದೆ. ಈ ರಾಹುವಿನ ಕಾರಣದಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಆದರೆ ಅದರ ಪರಿಣಾಮ ಕಡಿಮೆ ಮಾಡಲು ಬೆಳ್ಳುಳ್ಳಿ ಬಳಸಿ ಕೆಲ ಪರಿಹಾರವನ್ನು ಪಡೆಯಬಹುದು. ಅದು ಹೇಗೆ ಎಂಬುದು ಇಲ್ಲಿದೆ.
•ಶನಿವಾರದ ದಿನ ನೀವು ನಿಮ್ಮ ಪರ್ಸ್ನಲ್ಲಿ ಬೆಳ್ಳುಳ್ಳಿನ್ನು ಇಟ್ಟುಕೊಳ್ಳುವುದರಿಂದ ರಾಹು ಕಾಟದಿಂದ ಉಂಟಾಗುವ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಹಣದ ಲಾಭ ಸಹ ಹೆಚ್ಚಾಗುತ್ತದೆ. ನೀವು ವಾರಕ್ಕೆ ಒಮ್ಮೆ ಬೆಳ್ಳುಳ್ಳಿ ಬದಲಾವಣೆ ಮಾಡಬೇಕು.
2/ 8
ಬೆಳ್ಳುಳ್ಳಿಯ 4 ರಿಂದ 5 ಎಸಳುಗಳನ್ನು ತೆಗೆದುಕೊಳ್ಳಿ. ಅದನ್ನು ಒಂದು ಉದ್ದವಾದ ಕೋಲಿಗೆ ಕಟ್ಟಿ. ನಂತರ ಮನೆಯ ಛಾವಣಿ ಮೇಲೆ ಇದನ್ನು ಶನಿವಾರ ಇಡಿ. ಇದರಿಂದ ಕುಟುಂಬದಲ್ಲಿ ಉಂಟಾಗುವ ವೈಮನಸ್ಸು ದೂರವಾಗುತ್ತದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆ ಬರದಂತೆ ತಡೆಯುತ್ತದೆ.
3/ 8
ಹಾಗೆಯೇ ರಾಹು ಸಮಸ್ಯೆ ಇರುವವರಿಗೆ ಉದ್ಯೋಗ ಸಮಸ್ಯೆ ಕಾಡುತ್ತದೆ, ಆ ಸಮಯದಲ್ಲಿ ನಿಮ್ಮ ಆಫೀಸ್ ಡೆಸ್ಕ್ ನಲ್ಲಿ 5 ಬೆಳ್ಳುಳ್ಳಿ ಎಸಳನ್ನು ಇಟ್ಟುಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಒತ್ತಡ ಸಹ ಇರುವುದಿಲ್ಲ.
4/ 8
ಇನ್ನು ರಾಹು ಕಾಟ ಇದ್ದರೆ ವ್ಯಾಪಾರದಲ್ಲಿ ಸಹ ನಷ್ಟವಾಗುತ್ತದೆ. ಅದಕ್ಕೆ ಪರಿಹಾರ ಎಂದರೆ ನಿಮ್ಮ ಅಂಗಡಿ ಅಥವಾ ವ್ಯವಹಾರದ ಸ್ಥಳದಲ್ಲಿ ಹಣ ಇಡುವ ಲಾಕರ್ನಲ್ಲಿ ಬೆಳ್ಳುಳ್ಳಿ ಎಸಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಇಡಿ.
5/ 8
ಇನ್ನು ಶನಿವಾರ ಒಂದು ಕಪ್ಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ 5 ಬೆಳ್ಳುಳ್ಳಿ ಎಸಳನ್ನು ಇಡಿ. ನಂತರ ಅದನ್ನು ಕಟ್ಟಿ ಅರಳಿ ಮರದ ಕೆಳಗೆ ಇಟ್ಟರೆ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ.
6/ 8
ನಿಮ್ಮ ಮನೆಯ ಸುತ್ತ-ಮುತ್ತ ಯಾವುದಾದರೂ ಕೆರೆ ಅಥವಾ ನದಿ ಇದ್ದರೆ, 4 ಬೆಳ್ಳುಳ್ಳಿಯನ್ನು ಪುಡಿ ಮಾಡಿ, ಅದನ್ನು ಆ ನೀರಿನಲ್ಲಿ ಬಿಟ್ಟರೆ ನಿಮ್ಮ ಜೀವನದಲ್ಲಿರುವ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿ ಸಿಗುತ್ತದೆ.
7/ 8
ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯಲ್ಲಿ ನೆನೆಸಿ ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಶನಿವಾರ ಇಡುವುದರಿಂದ ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆ ಇರುವುದಿಲ್ಲ ಹಾಗೂ ಮನೆಯಲ್ಲಿ ನೆಮ್ಮದಿ ಇರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)