Gangajal: ಮನೆಯಲ್ಲಿ ಗಂಗಾಜಲ ಇರಿಸಿದರೆ ಈ ತಪ್ಪು ಮಾಡಬೇಡಿ
ಸನಾತನ ಧರ್ಮದಲ್ಲಿ ಗಂಗಾಜಲವನ್ನು (Gangajal) ಅತ್ಯಂತ ಪವಿತ್ರ ಮತ್ತು ಸದ್ಗುಣವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಸನಾತನ ಧರ್ಮದ ಯಾವುದೇ ಪೂಜೆಯನ್ನು ಗಂಗಾಜಲವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಅದರ ಆಚಮನ ಅಥವಾ ಸಿಂಪಡಣೆಯು ದುಃಖ, ದುರದೃಷ್ಟ ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
ಶ್ರಾವಣ ಮಾಸದಲ್ಲಿ ಗಂಗಾಜಲದಿಂದ ಮಹಾದೇವನ ಅಭಿಷೇಕಕ್ಕೆ ಹೆಚ್ಚಿನ ಮಹತ್ವವಿದೆ. ಪ್ರತಿ ವರ್ಷ, ಶಿವಸಾಧಕರು ಮಹಾದೇವನ ಆಶೀರ್ವಾದವನ್ನು ಪಡೆಯಲು ಪವಿತ್ರ ಗಂಗಾಜಲ ತೆಗೆದುಕೊಂಡು ಹೋಗುತ್ತಾರೆ. ಆಯಾ ಶಿವಧಾಮಗಳಿಗೆ ಹೋಗಿ ಮಹಾದೇವನಿಗೆ ಗಂಗಾಜಲದಿಂದ ಅಭಿಷೇಕಿಸುತ್ತಾರೆ.
2/ 5
ಗಂಗಾಜಲವನ್ನು ಅಶುದ್ಧ ಸ್ಥಳದಲ್ಲಿ ಇಡಬಾರದು. ಪೂಜಾ ಸ್ಥಳದ ಬಳಿ ಯಾವಾಗಲೂ ಗಂಗಾಜಲವನ್ನು ಇರಿಸಿ. ಅಂತೆಯೇ, ಯಾವಾಗಲೂ ಪವಿತ್ರ ಗಂಗಾಜಲವನ್ನು ಲೋಹದ ಪಾತ್ರೆಯಲ್ಲಿ ಸಂಗ್ರಹಿಸಿ. ಗಂಗಾಜಲವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಬಾರದು,
3/ 5
ಕರೋನಾ ಮಹಾಮಾರಿಯಲ್ಲಿ ಯಾವುದೋ ಕಾರಣದಿಂದ ಗಂಗಾ ನದಿಯ ದಡವನ್ನು ತಲುಪಲು ನಿಮಗೆ ಸಾಧ್ಯವಾಗದಿದ್ದರೆ, ವಿಶೇಷ ಸಂದರ್ಭದಲ್ಲಿ ಮನೆಯಲ್ಲಿ ಇರಿಸಲಾಗಿರುವ ನೀರಿನಲ್ಲಿ ಸ್ವಲ್ಪ ಗಂಗಾಜಲದಿಂದ ಸ್ನಾನ ಮಾಡಿ. ಭಕ್ತಿಯಿಂದ ಮಾಡುವುದರಿಂದ ಗಂಗಾಸ್ನಾನ ಮಾಡಿದ ಪುಣ್ಯ ಪೂರ್ಣವಾಗುತ್ತದೆ
4/ 5
ನಕಾರಾತ್ಮಕ ಶಕ್ತಿಗಳನ್ನು ತಪ್ಪಿಸಲುನಿಮ್ಮ ಮನೆಯಲ್ಲಿ ಕಾಲ ಕಾಲಕ್ಕೆ ಗಂಗಾಜಲವನ್ನು ಸಿಂಪಡಿಸಬೇಕು. ಗಂಗಾಜಲದ ಪ್ರೋಕ್ಷಣೆಯಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂತೋಷ ಸಮೃದ್ದಿ ಹೆಚ್ಚುತ್ತದೆ
5/ 5
ಗಂಗಾ ನೀರಿನಿಂದ ಸ್ನಾನ ಮಾಡುವುದರಿಂದ ಅಥವಾ ಈ ಪವಿತ್ರ ನೀರನ್ನು ಕುಡಿಯುವುದರಿಂದ ರೋಗಗಳು ದೂರಾಗುತ್ತದೆ. ಅಷ್ಟು ಮಾತ್ರವಲ್ಲ, ಗಂಗಾಜಲವು ಒಬ್ಬ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆ