Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

Ganga jal: ನಮ್ಮ ದೇಶದ ಜನರು ಗಂಗಾಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ನಂಬಿಕೆಗಳ ಪ್ರಕಾರ ಈ ನೀರು ಎಂದಿಗೂ ಕೆಡುವುದಿಲ್ಲ. ಎಷ್ಟೇ ಅನಪೇಕ್ಷಿತ ಪದಾರ್ಥಗಳನ್ನು ಸೇರಿಸಿದರೂ ಗಂಗಾಜಲ ಕೆಡುವುದಿಲ್ಲ ಎನ್ನಲಾಗುತ್ತದೆ. ಸಾಮಾನ್ಯವಾಗಿ ಕಾಶಿಗೆ ಹೋದಾಗ ಗಂಗಾಜಲ ತರುತ್ತಾರೆ. ಆದರೆ ಈಗ ಬಾಟಲಿಯಲ್ಲಿ ಸಹ ಗಂಗಾಜಲ ಸಿಗಲಿದೆ.

First published:

  • 17

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ಹಿಂದೂಗಳ ನಂಬಿಕೆಯ ಪ್ರಕಾರ ಗಂಗಾಜಲ ಬಹಳ ಪವಿತ್ರ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಜೀವನದ ಎಲ್ಲಾ ಪಾಪಗಳು ತೊಲಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹಲವರು ನಂಬುತ್ತಾರೆ. ಅದಕ್ಕಾಗಿಯೇ ಗಂಗಾನದಿಯಲ್ಲಿ ಸ್ನಾನ ಮಾಡುವ ಪ್ರತಿಯೊಬ್ಬ ಭಕ್ತರು ಆ ನೀರನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ.

    MORE
    GALLERIES

  • 27

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ಇನ್ನು ಹಲವಾರು ಜನರಿಗೆ ಕಾಶಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹೋದವರ ಬಳಿ ಸ್ವಲ್ಪ ನೀರನ್ನು ತರಿಸುತ್ತಾರೆ.ಅ ದು ಅದು ಹೆಚ್ಚು ಸಮಯ ಬರುವುದಿಲ್ಲ. ಖಾಲಿ ಆಗುತ್ತದೆ. ಆದರೆ ಇನ್ನು ಮುಂದೆ ಈ ಚಿಂತೆ ನಿಮಗೆ ಇರುವುದಿಲ್ಲ. ಕಾಶಿಗೆ ಹೋಗಲು ಸಾಧ್ಯವಾಗದವರಿಗೆ ಗುಡ್ ನ್ಯೂಸ್ ನೀಡಿದ ಉತ್ತರ ಪ್ರದೇಶ ಸರ್ಕಾರ. ಹೌದು, ಗಂಗಾಜಲ ಇನ್ನು ಮುಂದೆ ಲೀಟರ್ ಬಾಟಲಿ ರೂಪದಲ್ಲಿ ಸಿಗಲಿದೆ.

    MORE
    GALLERIES

  • 37

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ಸಂಗಮದಲ್ಲಿರುವ ಪವಿತ್ರ ಗಂಗಾನದಿಯ ನೀರು ಈಗ ಜಗತ್ತಿನ ಮೂಲೆ ಮೂಲೆಗೆ ಸುಲಭವಾಗಿ ತಲುಪಲಿದೆ. ಪ್ರಯಾಗ್ ರಾಜ್‌ನಲ್ಲಿರುವ ಸ್ವಸಹಾಯ ಸಂಘಗಳ ಮಹಿಳೆಯರು ಇದಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಉಸ್ತುವಾರಿ ಹಾಗೂ ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಅವರು ಈ ಬಾಟಲ್ ಗಂಗಾಜಲ ಯೋಜನೆಯನ್ನು ಉದ್ಘಾಟಿಸಿದ್ದು, ನಿಜಕ್ಕೂ ಇದು ಸಂತಸದ ಸುದ್ದಿಯಾಗಿದೆ.

    MORE
    GALLERIES

  • 47

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ವಿಶೇಷವೆಂದರೆ ಈ ಗಂಗಾಜಲವನ್ನು ಲೀಟರ್ ಬಾಟಲಿಯಲ್ಲಿ ಪ್ಯಾಕ್ ಮಾಡಿ ಪ್ರಥಮ ಬಾರಿಗೆ ಬಿಸ್ಲೇರಿ ನೀರಿನ ಬಾಟಲಿಯಂತೆ ತಯಾರಿಸಲಾಗಿದೆ. ಈ ಒಂದು ಲೀಟರ್ ನದಿ ನೀರಿನ ಬೆಲೆ 20 ರೂ ಆಗಿದ್ದು, ತ್ರಿವೇಣಿ ಪ್ರೇರಣಾ ಮಹಿಳಾ ಸಂಕುಲ ಸಮಿತಿ ಈ ಅಭಿಯಾನ ಆರಂಭಿಸಿದೆ. ಒಂದೆಡೆ ಗಂಗಾಜಲ ಜನರಿಗೆ ಸುಲಭವಾಗಿ ತಲುಪಿದರೆ, ಇನ್ನೊಂದೆಡೆ ಮಹಿಳೆಯರಿಗೆ ಉದ್ಯೋಗವೂ ಸಿಗುತ್ತದೆ

    MORE
    GALLERIES

  • 57

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳು ಸೇರಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಇದು ಲಭ್ಯವಿದೆ. ಸ್ವಸಹಾಯ ಸಂಘಗಳಿಗೆ ಸೇರಿದ ಸುಮಾರು 24 ಮಹಿಳೆಯರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲಾ ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಗಂಗಾಜಲವನ್ನು ಒದಗಿಸಲಾಗುತ್ತಿದೆ.

    MORE
    GALLERIES

  • 67

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಪ್ರಯಾಗ್ ರಾಜ್ ಸಂಗಮದಲ್ಲಿ ಸೇರುತ್ತವೆ. ಹಾಗಾಗಿ ಇಲ್ಲಿ ನೀರಿನ ಪ್ರಾಮುಖ್ಯತೆ ಹೆಚ್ಚು. ಮಾಘಮೇಳ ಮತ್ತು ಕುಂಭಮೇಳದ ಸಮಯದಲ್ಲಿ ಪ್ರಪಂಚದಾದ್ಯಂತದ ಜನರು ಸ್ನಾನ ಮಾಡಲು ಮತ್ತು ಸಂಗಮ್ ನೀರಿಗಾಗಿ ಇಲ್ಲಿಗೆ ಬರುತ್ತಾರೆ.

    MORE
    GALLERIES

  • 77

    Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ

    ವಿದೇಶಿ ಭಕ್ತರು ಇಲ್ಲಿನ ನೀರನ್ನು ಅಮೆರಿಕ, ಸ್ವಿಟ್ಜರ್ಲೆಂಡ್, ಕೆನಡಾ ಸೇರಿದಂತೆ ಎಲ್ಲ ವಿದೇಶಗಳಿಗೂ ತೆಗೆದುಕೊಂಡು ಹೋಗುತ್ತಾರೆ. ಈಗ ಪ್ರಪಂಚದಾದ್ಯಂತ ಲೀಟರ್ ಬಾಟಲಿಗಳ ರೂಪದಲ್ಲಿ ಇವುಗಳು ಬರುತ್ತಿದ್ದು, ಎಲ್ಲರಿಗೂ ಇದು ಸಿಗುವಂತಾಗಿದೆ.

    MORE
    GALLERIES