ಮೇಷ: ನಿಮ್ಮ ವಾರ್ಡ್‌ರೋಬ್ ಮತ್ತು ಆಭರಣ ಪೆಟ್ಟಿಗೆಯು ಇಂದು ಬದಲಾವಣೆಗೊಳ್ಳುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಶಾಪಿಂಗ್ ತೆರಳುವಿರಿ. ಆದರೆ, ಮಧ್ಯಾಹ್ನದ ವರೆಗೆ ಶಾಪಿಂಗ್ ಮಾಡಿದ ನಂತರ, ನಿಮ್ಮ ವೆಚ್ಚವು ಮಿತಿಮೀರಿದೆ ಎಂದು ನಿಮಗೆ ಅನಿಸಬಹುದು. ಸಾಮಾಜಿಕ ಘನತೆ ಮತ್ತು ಸ್ಥಾನಮಾನದಲ್ಲಿ ವೃದ್ಧಿಯಾಗಲಿದೆ. ನೀವು ಭೇಟಿ ಮಾಡುವ ಹೊಸ ವ್ಯಕ್ತಿಗಳೊಂದಿಗೆ ಸ್ನೇಹ ಸಂಪಾದಿಸುವ ಮುನ್ನ ಎರಡೆರಡು ಬಾರಿ ಯೋಚಿಸಿ.
ಕಟಕ: ಇಂದು ನೀವು ತೀವ್ರ ಒತ್ತಡಕ್ಕೆ ಒಳಗಾಗುವಿರಿ ಮತ್ತು ಕಿರಿಕಿರಿ ಹಾಗೂ ನಿರುತ್ಸಾಹವು ನಿಮ್ಮ ಸುತ್ತಲೂ ಆವರಿಸಲಿದೆ. ನಿಮ್ಮ ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿರಿಸಿ. ನಿಮ್ಮ ಈ ದಿನವು ಕಚೇರಿ ಕೆಲಸಗಳಿಗೆ ಲಾಭದಾಯಕವಲ್ಲದ ಕಾರಣ ನಿಮ್ಮ ಪ್ರಯಾಣ ಯೋಜನೆಗಳನ್ನು ಮರುನಿಗದಿಪಡಿಸಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿದೆ. ಅವರ ಬಗ್ಗೆ ತುಂಬಾ ಕಾಳಜಿವಹಿಸಿ. ಇಂದು ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಿದರೆ ಅದು ಯಶಸ್ವಿಯಾಗುವುದಿಲ್ಲ.
ಸಿಂಹ: ಹೊಸ ಯೋಜನೆಗಳನ್ನು ಪ್ರಾರಂಭಿಸುವ ಆಲೋಚನೆಯಿದ್ದಲ್ಲಿ, ಅದು ಇಂದು ಪ್ರಾರಂಭಗೊಳ್ಳಲೇಬೇಕು. ಇದೇ ಸಮಯಕ್ಕೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಅನುಕೂಲಕರ ದಿನ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಅಥವಾ ದೇವಾಲಯಗಳಿಗೆ ತೆರಳಬಹುದು. ಮಧ್ಯಾಹ್ನದ ವೇಳೆಗೆ ನೀವು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗಬಹುದು. ಇಂದು ನಿಮ್ಮ ತಾಯಿಯ ಆರೋಗ್ಯವು ಉತ್ತಮವಾಗಿರುವುದಿಲ್ಲ. ಮನೆ ಅಥವಾ ಆಸ್ತಿಗೆ ಸಂಬಂಧಿಸಿ ವ್ಯವಹಾರವನ್ನು ಅಂತಿಮಗೊಳಿಸಲು ಈ ದಿನವನ್ನು ಆಯ್ದುಕೊಳ್ಳಬೇಡಿ.
ವೃಶ್ಚಿಕ: ನಿಮ್ಮ ಗ್ರಹಗತಿಗಳು ಇಂದು ನಿಷ್ಕ್ರಿಯವಾಗಿರುವ ಸಾಧ್ಯತೆಯಿದೆ. ನಿಮ್ಮ ನಿರಾಶಾವಾದದ ವರ್ತನೆಯನ್ನು ದೂರವಿರಿಸಿ. ಕಾನೂನು ನ್ಯಾಯಾಲಯ ವಿಚಾರಗಳು ಅದರದೇ ಹಂತದಲ್ಲಿ ಸಾಗಲಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾದ್ಯತೆಯಿರುವುದರಿಂದ ಅದರ ಬಗ್ಗೆ ಕಾಳಜಿ ವಹಿಸಿ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಸುಧಾರಿಸಲು ಪ್ರಾರಂಭಿಸುತ್ತವೆ.
ಕುಂಭ: ವೃತ್ತಿಪರರು ತಮ್ಮ ದಿನ ಪ್ರಾರಂಭಗೊಳ್ಳುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳೊಂದಿಗೆ ವರ್ತಿಸುವಾಗ ಉದ್ವೇಗರಹಿತರಾಗಿರಿ. ಇದು ನಿಮಗೆ ಪ್ರಯೋಜನವನ್ನು ನೀಡಬಹುದು. ಏನೇ ಆದರೂ, ಮಧ್ಯಾಹ್ನದ ಬಳಿಕ ಕಚೇರಿಯಲ್ಲಿನ ವಾತಾವರಣವು ಹೆಚ್ಚು ಅನುಕೂಲಕರ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಮನೆಯಲ್ಲಿಯೂ ಹಾಗೆನೇ. ಶಾಂತಿಯುತ ವಾತಾವರಣವು ನಿಮ್ಮನ್ನು ಉತ್ಸಾಹ ಮತ್ತು ಲವಲವಿಕೆಯಿಂದಿರಿಸುತ್ತದೆ.