ಮೇಷ: ಕವನ ಬರೆಯಲು ಅಥವಾ ಕಲಾಕೃತಿ ರಚಿಸಲು ಇದು ಉತ್ತಮ ಸಮಯ. ಮನೆಯಲ್ಲಿನ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಲವಲವಿಕೆಯಿಂದಿರುತ್ತದೆ. ಹಳೆಯ ಸ್ನೇಹಿತರ ಭೇಟಿಯು ನಿಮ್ಮ ಶಾಲಾದಿನಗಳ ಸಂತಸಭರಿತ ನೆನಪುಗಳನ್ನು ಮತ್ತೆ ತರುತ್ತದೆ. ಅದನ್ನು ಸಂಪೂರ್ಣವಾಗಿ ಆನಂದಿಸಿ. ನಿಮ್ಮ ಮೇಲಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುವಾಗ ಎಚ್ಚರದಿಂದಿರಿ. ಅವರಿಗೆ ನೀಡುವ ಅಗೌರವವು ನಿಮ್ಮ ಮೇಲೆ ಗಂಭೀರ ರೀತಿಯ ತೊಂದರೆಯನ್ನುಂಟುಮಾಡಬಹುದು.