ಮೇಷ: ಮೇಷ ರಾಶಿಯವರಿಗೆ ಇದು ಅತ್ಯಂತ ಸೂಕ್ಷ್ಮ ಸಮಯ. ಎಲ್ಲಾ ರೀತಿಯ ಉದ್ವಿಗ್ನತೆಗಳು ಉಕ್ಕಿ ಹರಿದು ನಿಮ್ಮನ್ನು ಅವಮಾನದಲ್ಲಿರುವಂತೆ ಮಾಡುತ್ತದೆ ಎಂಬುಗಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಮುಟ್ಟಿದರೆ ಮುನಿ' ಎಂಬಂತೆ ವರ್ತಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸ್ನೇಹಿತರ ಅನಿರೀಕ್ಷಿತ ಪ್ರತಿಕ್ರಿಯೆಗಳಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ವಿಚಾರಾಸಕ್ತರಾಗಿರುವುದು ಸೂಕ್ತ. ಆಸ್ತಿ ಅಥವಾ ಭೂ ವಿವಾದಗಳಿಂದ ಆದಷ್ಟು ದೂರವಿರಿ.
ವೃಷಭ: ನಿನ್ನೆಯ ಗ್ರಹಗತಿಗಳ ಭಾವನಾತ್ಮಕ ಪ್ರಭಾವವವು ಇನ್ನೂ ಮುಂದುವರಿಯಲಿವೆ. ಪುಣ್ಯಕ್ಕೆ, ಅವುಗಳು ನಿಮ್ಮ ಗ್ರಹಸ್ಥಾನದಲ್ಲಿ ಉತ್ತಮವಾಗಿಯೇ ಫಲವನ್ನು ನೀಡುತ್ತದೆ. ಸುತ್ತಲಿರುವ ದೈನಂದಿನ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮದೇ ಲೋಕದಲ್ಲಿ ಕಳೆದುಹೋಗಿರಬಹುದುಸೃಜನಾತ್ಮಕ ಉತ್ತೇಜನಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರಿಗಾಗಿ ಅಡುಗೆ ತಯಾರಿಸಿ.
ಮಿಥುನ: ಸಂಬಂಧಿಕರು, ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗಿನ ಪೂರ್ತಿ ಖುಷಿ, ನಲಿವು ಮತ್ತು ಆನಂದಭರಿತ ಸಮಾಗಮದೊಂದಿಗೆ, ಅದ್ಭುತ ದಿನವು ನಿಮಗಾಗಿ ಕಾದಿದೆ. ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭಗಳಿಗೆ ಆಮಂತ್ರಣವಿದ್ದರೆ, ಅದನ್ನು ತಪ್ಪಿಸಬೇಡಿ. ಆರ್ಥಿಕ ಯೋಜನೆಯಲ್ಲಿನ ತೊಂದರೆಯಿಂದಾಗಿ ಸಂಜೆಗಾಗಿ ನೀವು ಗೊತ್ತುಪಡಿಸಿದ್ದ ಯೋಜನೆಗಳಿಗೆ ತಡೆಯಾಗಬಹುದು.ಪ್ರಾರಂಭದಲ್ಲಿ ನೀವು ತೊಂದರೆ ಅನುಭವಿಸಬಹುದು. ಆದರೆ, ಚಿಂತಿಸಬೇಡಿ. ಎಲ್ಲವೂ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿದು ನಿಮ್ಮ ಮನಸ್ಸಿಗೆ ನಿರಾಳವಾಗಿ ಖುಷಿಯಾಗುವುದರಿಂದ ಈ ಚಿಂತೆಗಳು ಕೇವಲ ತಾತ್ಕಾಲಿಕ
ಸಿಂಹ: ಗೊಂದಲಭರಿತ ದಿನವು ನಿಮಗಾಗಿ ಕಾದಿದೆ. ನೀವು ಅತ್ಯಂತ ತುಮುಲಕ್ಕೆ ಒಳಗಾಗಬಹುದು. ಹೃದಯದ ವಿಚಾರಗಳು ಮತ್ತು ಗೊತ್ತುಗುರಿಯಿಲ್ಲದ ದೈನಂದಿನ ಕಾರ್ಯಗಳು ನಿಮ್ಮನ್ನು ಕಂಗಾಲಾಗಿಸುತ್ತದೆ. ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಇಂದು ಎಂದಿಗಿಂತ ಪ್ರಬಲವಾಗಿರುವ ಸಾಧ್ಯತೆಯಿದೆ. ಜಾಗ್ರತೆ ವಹಿಸಿಕೊಳ್ಳಿ, ನಿಮ್ಮ ಮಾತು ಮತ್ತು ಸಿಟ್ಟು ಸ್ತಿಮಿತದಲ್ಲಿರಲಿ ಮತ್ತು ಕಾನೂನು ವ್ಯವಹಾರಗಳ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಲು ಅಭ್ಯಾಸ ಮಾಡಿ.
ಕನ್ಯಾ: ಅದೃಷ್ಟದ ದಿನವು ನಿಮಗಾಗಿ ಕಾದಿದೆ. ಗೌರವಗಳು, ಪ್ರಯೋಜನಗಳು, ಲಾಭಗಳು, ಸೌಲಭ್ಯಗಳು ಇವುಗಳಲ್ಲಿ ನಿಮ್ಮ ಹೆಸರಿರುತ್ತದೆ ಮತ್ತು ಇವೆಲ್ಲವನ್ನೂ ನೀವು ಪಡೆದುಕೊಳ್ಳುವಿರಿ. ಮತ್ತು ಇವೆಲ್ಲವೂ ಮನೆ, ಕುಟುಂಬ, ವ್ಯಾಪಾರ ಹೀಗೆ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿರುತ್ತದೆ. ಈ ಸಮಯದಲ್ಲಿ ಪ್ರಯಾಣ ಬೆಳೆಸುವುದು ನಿಜಕ್ಕೂ ಆನಂದದಾಯಕವಾಗಿರುತ್ತದೆ. ಮತ್ತು ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೀವು ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ.
ತುಲಾ: ಈ ಸೂಕ್ಷ್ಮ, ಅತಿ ಭಾವನೆಯ ದಿನವು ನಿಮ್ಮನ್ನು ಸಂತೋಷ ಹಾಗೂ ಆನಂದದಿಂದಿರಿಸುತ್ತದೆ. ಅಂತರವು ಅಷ್ಟೊಂದು ಪ್ರಾಮುಖ್ಯವಲ್ಲ. ಇಂದು ನಿಮ್ಮ ಸಂಗಾತಿಯನ್ನು ನೋಡುವಾಗ ಮತ್ತು ಭೇಟಿ ಮಾಡುವಾಗ ನೀವು ದೃಢಸಂಕಲ್ಪದಿಂದಿರಬೇಕು. ನೀವು ಒಟ್ಟಿಗಿರಲು ಸಾಕಷ್ಟು ಅದೃಷ್ಟವಂತರಾಗಿದ್ದರೆ, ನೀವು ಇನ್ನೂ ಮನಸ್ಸಿಗೆ ಹತ್ತಿರವಾಗುತ್ತೀರಿ. ತಾಯಿಯ ಕಡೆಯಿಂದ ವಿಶೇಷ ಸಹಕಾರ ದೊರೆಯಲಿದೆ. ವೃತ್ತಿ ಹಾಗೂ ಹಣಕಾಸು ವಿಚಾರಗಳಿಗೆ ಉತ್ತಮ ಸಮಯ.
ಧನಸ್ಸು: ಕಾರ್ಯತಃ ಕಳೆದ ಕೆಲವು ದಿನಗಳಿಂದ ನೀವು ಏಳುಬೀಳು ಸ್ಥಿತಿಯಲ್ಲಿದ್ದಿರಿ. ಈಗ ನಿಮ್ಮ ಕಾರ್ಯವನ್ನು ನಿಧಾನೀಕರಿಸಲು ಉತ್ತಮ ಸಮಯ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಉತ್ತಮ ಚಿಂತನಗೆಳತ್ತ ನಿಮ್ಮ ಮನಸ್ಸನ್ನು ಕೊಂಡೊಯ್ಯಿರಿ. ಈಗಾಗಲೇ ದಣಿದ ನಿಮ್ಮ ದೇಹ ಹಾಗೂ ಮನಸ್ಸಿಗೆ ಇನ್ನಷ್ಟು ಒತ್ತಡವನ್ನು ನೀಡಬೇಡಿ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ.
ಕುಂಭ: ಗೃಹಗತಿಗಳ ಇಂದಿನ ಪ್ರೋತ್ಸಾಹಭರಿತ ಮತ್ತು ಉತ್ತಮ ಹೊಂದಾಣಿಕೆಯಿಂದ ನಿಮ್ಮ ಕೀರ್ತಿ, ಗೌರವ, ಮತ್ತು ಸಾಮಾಜಿಕ ನಿಲುವು ಇಂದಿನಿಂದ ಇನ್ನಷ್ಟು ವೃದ್ಧಿಗೊಳ್ಳಲು ಸಿದ್ಧವಾಗಿದೆ. ಹೆಚ್ಚೆಚ್ಚು ಯೋಜನೆಗಳ ಆಗಮನ, ನಿರೀಕ್ಷೆಗೂ ಮೀರಿ ಸಹೋದ್ಯೋಗಿಗಳ ಸಹಕಾರ, ಕಾರ್ಯತಃ ನಿಮ್ಮನ್ನು ಸ್ಥಾನದಿಂದ ತೆಗೆದುಹಾಕಿದವರಿಂದ ಪ್ರಶಂಸೆಗಳು ಸಿಗಲಿವೆ. ಇತರರ ಬಗ್ಗೆ ನೀವು ತುಂಬಾ ಕರುಣೆ ಹಾಗೂ ಸೂಕ್ಷ್ಮ ಸ್ವಭಾವದವರು ಮತ್ತು ಇದಕ್ಕಾಗಿ ನೀವು ಶ್ಲಾಘನೆಗೊಳಗಾಗುತ್ತೀರಿ. ತಾಯಿಯ ಕಡೆಯಿಂದ ನಿಮಗೆ ಶುಭಸುದ್ದಿ ಬರಲಿದೆ.