ಮೇಷ: ಈ ದಿನ ಮೇಷರಾಶಿಯವರಿಗೆ ಸಾಮಾನ್ಯ ಪ್ರಭಾವವಿರುತ್ತದೆ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಉತ್ತಮ ದಿನ. ಆದರೂ, ಆತುರದ ನಿರ್ಧಾರದಿಂದಾಗಿ ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ಹಾಳು ಮಾಡಿಕೊಳ್ಳಬೇಡಿ.ಕಚೇರಿಯಲ್ಲಿ ನೀವು ಕಷ್ಟಕರ ಸ್ಪರ್ಧೆಯನ್ನು ಎದುರಿಸಬೇಕಾದೀತು. ಆದರೂ ನೀವು ಎಂದಿನಂತೆಯೇ ಸಾಮಾನ್ಯವಾಗಿರುತ್ತೀರಿ ಮತ್ತು ಉತ್ತಮ ಪ್ರತಿಫಲ ನೀಡಲು ಪ್ರಯತ್ನಿಸುತ್ತೀರಿ.
ಮಿಥುನ: ಸಾಮಾಜಿಕವಾಗಿ ಮತ್ತು ಪ್ರೀತಿಪಾತ್ರರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸಡಗರದಿಂದಿರಲು ಉತ್ತಮ ದಿನ. ಆದ್ದರಿಂದ ನಿಮ್ಮ ಆತ್ಮೀಯ ಸ್ನೇಹಿತರನ್ನು ಔತಣಕ್ಕೆ ಆಹ್ವಾನಿಸಿ ಇಲ್ಲವಾದಲ್ಲಿ ಅವರೊಂದಿಗೆ ತಿರುಗಾಟಕ್ಕೆ ತೆರಳಿ. ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿ, ನೀವು ಸಾಕಷ್ಟು ಲಾಭ ಗಳಿಸಲಿದ್ದೀರಿ. ಆದರೆ, ದುಂದುವೆಚ್ಚಕ್ಕೆ ಆಹ್ವಾನಿಸಬೇಡಿ. ನಿಮ್ಮ ವೆಚ್ಚವನ್ನು ಮಿತದಲ್ಲಿರಿಸಿ ಮತ್ತು ವಿವೇಚನೆಯಿಂದ ಖರ್ಚು ಮಾಡಿ.
ತುಲಾ: ಬೌದ್ಧಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಕೊಳ್ಳುವ ಪ್ರಬಲ ಆಕಾಂಕ್ಷೆಯು ಸಾಹಿತ್ಯ, ಕಲೆ ಮುಂತಾದ ಕಲಾತ್ಮಕ ವಿಚಾರಗಳತ್ತೆ ನಿಮ್ಮ ಗಮನ ಸೆಳೆಯುತ್ತದೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು , ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ದಿನ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಸಮೃದ್ಧವಾಗಿರುತ್ತೀರಿ. ಉದ್ಯಮಿಗಳಿಗೆ ಈ ದಿನವು ಲಾಭದಾಯಕವಾಗಲಿದೆ. ಆದರೂ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ವೃಶ್ಚಿಕ: ಪ್ರತೀ ಹಂತದಲ್ಲೂ ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ನೀವು ಉತ್ತಮ ಸಮಯವನ್ನು ಹಾಳುಮಾಡುವ ಸಾಧ್ಯತೆಯಿದೆ. ನಿಮ್ಮ ಖರ್ಚಿಗೆ ಮಿತಿಯಿರಲಿ. ನಿಮ್ಮ ಹಣ ಬೇಗನೇ ಖಾಲಿಯಾಗಬಹುದು. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಇವು ನಿಮ್ಮನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸಬಹುದು.
ಮಕರ: ಉದ್ಯಮಿಗಳು, ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳು ಜೀವನ ಎಷ್ಟು ಸೌಕರ್ಯಪೂರ್ಣ ಮತ್ತು ನೆಮ್ಮದಿಯಿಂದಿರಲು ಸಾಧ್ಯ. ಹಣಕಾಸಿನ ವಿಚಾರವಿರಲಿ, ಕುಟುಂಬ ಅಥವಾ ವೃತ್ತಿ ಜೀವನವಿರಲಿ ನಿಮ್ಮ ದೋಣಿಯು ಸುಗಮವಾಗಿ ಸಾಗುವುದು. ಸರಕಾರ ಮತ್ತು ಅದರ ಇಲಾಖೆಗಳ ಅಧಿಕಾರಿಗಳಿಂದ ನಿಮಗೆದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸುವಿರಿ. ಆರೋಗ್ಯದ ತೊಂದರೆಗಳು ಉಂಟಾಗುವುದಿಲ್ಲ.