Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

  • 112

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಮೇಷ: ಇಂದು, ನಿಮ್ಮ ದೈನಂದಿನ ಕಾರ್ಯದಿಂದ ಸ್ವಲ್ಪ ಆಯಾಸವಾಗಲಿದೆ. ಆಧ್ಯಾತ್ಮ ಮತ್ತು ಧಾರ್ಮಿಕ ವಿಷಯಗಳಲ್ಲಿ ತೊಡಗಿಕೊಂಡರೆ ಉತ್ತಮ. ಯಾವುದೇ ವ್ಯಕ್ತಿಗಳ ಜೊತೆ ಮಾತನಾಡುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ಮಾತು ಉತ್ತಮ ಸಂಬಂಧಗಳನ್ನು ಹಾಳು ಮಾಡುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

    MORE
    GALLERIES

  • 212

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ವೃಷಭ: ನಗುತುಂಬಿದ ಮುಖದೊಂದಿಗೆ ನಿಮ್ಮ ಈ ದಿನವನ್ನು ಪ್ರಾರಂಭಿಸಿ.. ಸ್ನೇಹಿತರ ಹೊರತಾಗಿ, ಹೊಸ ವ್ಯಕ್ತಿಗಳನ್ನು ಇಂದು ಭೇಟಿ ಮಾಡುವ ಸಂಭವವಿದೆ. ದಿನದ ಉತ್ತರಾರ್ಧದಲ್ಲಿ ನಿಮ್ಮ ಗ್ರಹಗತಿಗಳು ಸ್ವಲ್ಪ ಮಂದವಾಗಿರುವಂತೆ ಅನಿಸುತ್ತದೆ. ನಿಮ್ಮ ಮಾತುಗಳ ಮೇಲೆ ಹಿಡಿತವಿರಲಿ. ನಿಮ್ಮ ಶತ್ರುಗಳಿಗೆ ನಿಮ್ಮತ್ತ ಕಣ್ಣಿರುವುದರಿಂದ ಅವರ ಕುರಿತು ಜಾಗರೂಕತೆಯಿಂದಿರಿ.

    MORE
    GALLERIES

  • 312

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಮಿಥುನ: ನಿಮ್ಮ ದಿನವನ್ನು ವಿನೋದ ಅಥವಾ ಮನರಂಜನಾ ಚಟುವಟಿಕೆಗಳೊಂದಿಗೆ ಪ್ರಾರಂಭಿಸಿ. ಜಾಗಿಂಗ್ ತೆರಳಿ, ವ್ಯಾಯಾಮ ಮಾಡಿ, ಇದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದಿರಿಸುತ್ತದೆ. ಉತ್ತಮ ದಿನದ ಹೆಚ್ಚಿನ ಪ್ರಯೋಜನ ಪಡೆಯಿರಿ.

    MORE
    GALLERIES

  • 412

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಕಟಕ: ದಿನದ ಪೂರ್ವಾರ್ಧವು ಸ್ವಲ್ಪ ಕಷ್ಟಕರವಾಗಿರುವಂತೆ ಅನಿಸುತ್ತದೆ. ಏನೇ ಆದರೂ, ವಿರೋಧಗಳ ಹೊರತಾಗಿಯೂ ನಿಮ್ಮ ಪ್ರಯತ್ನ ಮತ್ತು ಪರಿಶ್ರಮವು ನಿಮಗೆ ಫಲಭರಿತ ಫಲಿತಾಂಶವನ್ನು ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸನ್ನು ಆನಂದಿಸುತ್ತಾರೆ. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ. ವಿಶೇಷವಾಗಿ ನಿಮ್ಮ ಉದರ ವ್ಯಾಧಿಯು ನಿಮಗೆ ಕಷ್ಟವನ್ನು ನೀಡಲಿದೆ.

    MORE
    GALLERIES

  • 512

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಸಿಂಹ: ಇಂದು ನೀವು ಎಚ್ಚರಿಕೆಯಿಂದಿರಬೇಕು. ನೀವು ಹೆಚ್ಚು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗುವಿರಿ ಇದು ದಿನವಿಡೀ ನಿಮ್ಮನ್ನು ಬಿಡುವಿಲ್ಲದಂತೆ ಮಾಡಲಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ವಾಗ್ವಾದ ಅಥವಾ ಸಂಘರ್ಷದ ಸಂದರ್ಭಗಳಲ್ಲಿ ಮೌನವಾಗಿರಿ. ನಿಮಗೆ ಆರ್ಥಿಕ ನಷ್ಟ ಉಂಟಾಗಬಹುದು.

    MORE
    GALLERIES

  • 612

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಕನ್ಯಾ: ಅದೃಷ್ಟಕಾರಕ ಗೃಹಗತಿಗಳು ನಿಮ್ಮನ್ನು ಇನ್ನಷ್ಟು ಮೆರುಗುಗೊಳಿಸುತ್ತಿದೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಂದ ಲಾಭ ಉಂಟಾಗಲಿದೆ. ಮಧ್ಯಾಹ್ನದ ಬಳಿಕ ನಿಮ್ಮ ಗ್ರಹಗತಿಗಳು ನಿಶ್ಚೇಷ್ಟವಾಗಿರುವ ಸಾಧ್ಯತೆಯಿದ್ದು, ನೀವು ಚಿಂತೆಗೊಳಗಾಗುವ ಸಾಧ್ಯತೆಯಿದೆ.

    MORE
    GALLERIES

  • 712

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ತುಲಾ: ಕೆಲ ವಿಚಾರಗಳು ನಿಮಗೆ ಲಾಭವನ್ನು ತರುವ ಸಾಧ್ಯತೆಯಿದೆ. ಮನೆಯಲ್ಲಿನ ಯಾವುದೇ ಕಲಹ ಆಗದಂತೆ ನೋಡಿಕೊಳ್ಳಿ. ನಿಮ್ಮ ಸುತ್ತಲೂ ಸಂತೋಷ ನೆಲೆಸಿರುತ್ತದೆ. ಹೊಸ ಯೋಜನೆಗಳನ್ನು ನಿರ್ವಹಿಸಲು ನೀವು ಆಸಕ್ತಿ ತೋರಿಸುತ್ತೀರಿ.

    MORE
    GALLERIES

  • 812

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ವೃಶ್ಚಿಕ: ಇಂದು ನೀವು ಹುಮ್ಮಸ್ಸಿನಿಂದ ಎದ್ದು ಆರೋಗ್ಯವಾಗಿ ಮತ್ತು ಉಲ್ಲಾಸವಾಗಿ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ. ಮಧ್ಯಾಹ್ನದ ಬಳಿಕ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಆಕಸ್ಮಿಕ ಇಳಿಮುಖ ಆಗಬಹುದು.

    MORE
    GALLERIES

  • 912

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಧನಸ್ಸು: ಇಂದಿನ ಸೂರ್ಯೋದಯವು ನಿಮಗೆ ಸಂತಸದ ದಿನವನ್ನು ಸೂಚಿಸುತ್ತದೆ. ಇಂದು ನೀವು ಕೈಗೊಂಡ ಎಲ್ಲಾ ಕಾರ್ಯಗಳನ್ನು ಮತ್ತು ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಇಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ. ಕುಟುಂಬ ಜೀವನವು ಸಂಭ್ರಮದಿಂದ ಕೂಡಿರುತ್ತದೆ.

    MORE
    GALLERIES

  • 1012

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಮಕರ: ಇತರರೊಂದಿಗಿನ ನಿಮ್ಮ ಸಂಬಂಧಗಳು ಸಂಭ್ರಮದಿಂದ ಕೂಡಿರುತ್ತದೆ ಮತ್ತು ಸಾಮಾನ್ಯವಾಗಿ ನೀವು ಉತ್ತಮ ಆರೋಗ್ಯವನ್ನೇ ಹೊಂದುವಿರಿ. ಇಂದು ಹೊರಗಡೆ ಏನನ್ನೂ ತಿನ್ನಬೇಡಿ. ಮಧ್ಯಾಹ್ನದ ಬಳಿಕ ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅನಾರೋಗ್ಯದಿಂದ ನರಳುತ್ತಿರುವವರು ಮಧ್ಯಾಹ್ನದ ಬಳಿಕ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ಹಣಕಾಸು ಲಾಭ ಉಂಟಾಗಬಹುದು.

    MORE
    GALLERIES

  • 1112

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಕುಂಭ: ಈ ದಿನವು ನಿಮಗೆ ಲಾಭದಾಯಕವಾಗುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಮತ್ತು ವೃತ್ತಿಪರರಿಗೆ ಈ ದಿನವು ಲಾಭದಾಯಕವಾಗಿದ್ದು, ಜೊತೆಗೆ ಗಳಿಕೆ ಮತ್ತು ಬಡ್ತಿಗಳೂ ಕೂಡ ಉಂಟಾಗುವ ಸಾಧ್ಯತೆಯಿದೆ. ಉದ್ಯಮಿಗಳು ಬಾಕಿ ಹಣವನ್ನು ಮರುಪಡೆಯುವುದರಿಂದ ನಿಮ್ಮ ಹೂಡಿಕೆಯನ್ನು ವೃದ್ಧಿಸಬಹುದು.

    MORE
    GALLERIES

  • 1212

    Know Your Horoscope: ನಿಮ್ಮ ಕೆಲಸದ ಮೇಲೆ ಬೇರೆಯವರ ಕಣ್ಣಿದೆ, ಯಾರನ್ನೂ ನಂಬಲೇಬೇಡಿ

    ಮೀನ: ಇಂದು ನಿಮಗೆ ಆಯಾಸದಲ್ಲಿರುವಂತೆ ಅನಿಸಬಹುದು, ಆದರೆ, ಬಹಳ ಸಮಯದ ನಂತರ ನಿಮ್ಮಲ್ಲಿಗೆ ಬರುವ ನಿಮ್ಮ ಕುಟುಂಬ ಸದಸ್ಯರು ಮತ್ತು ಒಡನಾಡಿಗಳನ್ನು ನೀವು ಭೇಟಿಯಾಗಲಿದ್ದೀರಿ ಮತ್ತು ಇದು ನಿಮ್ಮನ್ನು ಗೆಲುವಾಗಿಸುವ ಸಾಧ್ಯತೆಯಿದೆ. ಸಾಹಿತ್ಯ ಮತ್ತು ಬರಹ ಮುಂತಾದ ಹೊಸ ಹವ್ಯಾಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ.

    MORE
    GALLERIES