ಮೇಷ: ಇಂದು ನಿಮ್ಮ ದಿನ ಸಾಮಾನ್ಯವಾಗಿರುತ್ತದೆ. ವಿಶೇಷವಾಗಿ ಏನೂ ಇರುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಮಾಮೂಲಿ ದಿನಚರಿ. ಆರೋಗ್ಯ ಎಂದಿನಂತಿದ್ದು ಏರುಪೇರು ಉಂಟಾಗುವುದಿಲ್ಲ. ಆದರೆ, ಅತ್ಯಂತ ಉತ್ಸಾಹದಿಂದಲೂ ಇರುವುದಿಲ್ಲ. ಏರುತ್ತಿರುವ ವೆಚ್ಚಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಅದರ ಚಲನವಲನಗಳ ಮೇಲೆ ಗಮನವಿಟ್ಟಿರಿ ಆದರೆ ಅದು ಒಂದು ಅಂಕೆ ಮೀರಿ ನಿಮಗೆ ತೊಂದರೆ ಕೊಡದಂತೆ ನೋಡಿಕೊಳ್ಳಿ. ಹಣಕಾಸು ಪರಿಸ್ಥಿತಿಯಲ್ಲಿ ಇನ್ನೂ ಕುಸಿತ ಉಂಟಾಗುವುದಿಲ್ಲ.
ಮಿಥುನ: ದಿನದ ಉತ್ತರಾರ್ಧವು ಸ್ವಲ್ಪ ಕಷ್ಟಕರವೆನಿಸಬಹುದು . ದಿನದ ಅಂತ್ಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ನಿಮ್ಮ ಮಗನೊಂದಿಗೆ ವಾಗ್ವಾದ ನಡೆಸುವ ಸಾಧ್ಯತೆಯಿದೆ. ನಿಮಗೆ ಮಾತ್ರವೇ ಗೊತ್ತಿರುವ ಕಾರಣಕ್ಕೆ ನೀವು ಅಸಹನೆಗೊಳ್ಳಬಹುದು ಮತ್ತು ಕೋಪಗೊಳ್ಳಬಹುದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಪ್ರೀತಿಪಾತ್ರರ ಮನಸ್ಸನ್ನು ನೋಯಿಸುವಿರಿ. ಈ ಸಿಟ್ಟು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಕಣ್ಣು ಅಥವಾ ಕಿವಿಗಳಲ್ಲಿ ಸ್ವಲ್ಪ ನೋವಿನ ಅನುಭವ ಉಂಟಾಗಬಹುದು.
ಸಿಂಹ: ನಿಮ್ಮ ವೃತ್ತಿ ಪ್ರಭಾವ ಮತ್ತು ಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗಲಿದೆ. ನಿಮ್ಮ ಸಾಮರ್ಥ್ಯ ಮತ್ತು ವ್ಯವಹಾರ ಕೌಶಲ್ಯವು ಪುರಸ್ಕರಿಸಲ್ಪಡುತ್ತದೆ. ಅತ್ಯುನ್ನತ ಆತ್ಮವಿಶ್ವಾಸದೊಂದಿಗೆ ನೀವು ವ್ಯವಹಾರಗಳನ್ನು ನಿರ್ವಹಿಸುತ್ತೀರಿ. ವಿಶೇಷವಾಗಿ ನಿಮ್ಮ ತಂದೆ ಆರೋಗ್ಯದಿಂದಿರುತ್ತಾರೆ. ಸ್ಥಿರ ಹಾಗೂ ಚರ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಕೈಗೆತ್ತಿಕೊಳ್ಳಲು ಇದು ಸೂಕ್ತ ಸಮಯ.
ಕುಂಭ: ಇಂದು ನೀವು ಅತ್ಯಂತ ಭಾವಪರವಶರಾಗುತ್ತೀರಿ ಮತ್ತು ದುರ್ಬಲರಾಗಿರುತ್ತೀರಿ. ಮಾನಸಿಕ ಸ್ಥಿರತೆ ಹಾಗೂ ಶಾಂತಿಯ ಕೊರತೆಯು ನಿಮ್ಮನ್ನು ತೊಂದರೆಗೀಡುಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಎಲ್ಲಾ ಯೋಜಿತ ಕಾರ್ಯಗಳು ಸೂಕ್ತ ಸಮಯದಲ್ಲಿಯೇ ಪೂರ್ಣಗೊಳ್ಳಲಿದೆ. ಆದರೆ ಅವರ ಖರ್ಚಿನ ಬಗ್ಗೆ ಗಮನ ಇಡುವುದು ಅಗತ್ಯ.
ಮೀನ: ಸಾಮೂಹಿಕ ನಿರ್ಧಾರ ಕೈಗೊಳ್ಳಲು ಇದು ಸಕಾಲ. ನಿಮಗೆ ಹೊಸ ಹೊಸ ವಿಚಾರಗಳು ಹೊಳೆಯಬಹುದು. ಈಗ ನಿಮ್ಮ ಸುತ್ತಲಿರುವ ಉತ್ತೇಜನಕಾರಿ ಆಲೋಚನೆಗಳಿಂದ ನಿಮ್ಮ ಸೃಜನಶೀಲತೆ ಲಾಭವಾಗಿ ಪರಿಣಮಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ ಮತ್ತು ನಿಮ್ಮ ಸ್ಥಿರತೆ ಮತ್ತು ಆತ್ಮವಿಶ್ವಾಸವು ಮುಂದೆಯೂ ನಿಮಗೆ ಪ್ರಚೋದನೆ ನೀಡುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಹೆಚ್ಚಿನ ಸಹಕಾರ ದೊರೆಯಲಿದೆ ಮತ್ತು ಇದು ನಿಮಗೆ ಸಂತಸವನ್ನುಂಟುಮಾಡುತ್ತದೆ.