Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

  • 112

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಮೇಷ: ಹಗುರ, ಸಂತೋಷ ಹಾಗೂ ಉಲ್ಲಾಸಕರ ದಿನವು ನಿಮಗಾಗಿ ಕಾದಿದೆ. ವೃತ್ತಿ, ವ್ಯವಹಾರ ಮತ್ತು ಕಾರ್ಯಗಳನ್ನು ಫಲಪ್ರದವಾಗಿಸುತ್ತದೆ. ಮನೆಯ ವಾತಾವರಣವು ಅತ್ಯಂತ ಸ್ನೇಹಪರವಾಗಿರುತ್ತದೆ ಮತ್ತು ಇದು ಉತ್ತಮ ಆರೋಗ್ಯ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಅಥವಾ ಹಣಕಾಸಿನ ಲಾಭ ಸಿಗಲಿದೆ.

    MORE
    GALLERIES

  • 212

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ವೃಷಭ: ಇಂದು ನೀವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲಾ ದೃಷ್ಟಿಕೋನಗಳನ್ನು ಗಮನಿಸಿ, ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ಅರ್ಧ ಆಲೋಚನೆಗಳು, ಅರೆಬರೆ ನಿರ್ಧಾರಗಳು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದು. ಇದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ.

    MORE
    GALLERIES

  • 312

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಮಿಥುನ: ಇಂದು ಎಲ್ಲಾ ಕ್ಷೇತ್ರಗಳಲ್ಲೂ ಲಾಭ ಇರುತ್ತದೆ. ಸಂತೋಷವಾಗಿರಿ. ನೀವು ನಿಮ್ಮ ಮಕ್ಕಳಿಂದ ಅಥವಾ ಕಿರಿಯ ಸಂಬಂಧಿಗಳಿಂದ ಸಿಹಿ ಸುದ್ದಿಯನ್ನು ಪಡೆಯುವಿರಿ. ಷೇರು ಮಾರುಕಟ್ಟೆಯಲ್ಲಿ ಮಾಡಿದ ಹೂಡಿಕೆ ಲಾಭ ನೀಡುತ್ತದೆ. ಅವಿವಾಹಿತರಿಗೆ ಇದು ಉತ್ತಮ ಸಮಯ.

    MORE
    GALLERIES

  • 412

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಕಟಕ: ಫಲಭರಿತ ದಿನವು ಕರ್ಕಾಟಕ ರಾಶಿಯವರಿಗೆ ಕಾದಿದೆ. ವೃತ್ತಿನಿರತರು ಮತ್ತು ಉದ್ಯಮಿಗಳು ಕ್ರಮವಾಗಿ ಬಡ್ತಿ ಹಾಗೂ ಉತ್ತಮ ವ್ಯವಹಾರವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ತಾಯಿಯಿಂದ ಸಹಾಯ ಸಿಗುವ ಕಾರಣ ನೀವು ಹೆಚ್ಚು ಉತ್ಸಾಹ ಮತ್ತು ಲವಲವಿಕೆಯಿಂದ ಕೂಡಿರುವಿರಿ. ಇಂದು ಧನಲಾಭದ ಯೋಗವಿದೆ.

    MORE
    GALLERIES

  • 512

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಸಿಂಹ: ಆಲಸ್ಯ ಮತ್ತು ನಿರುತ್ಸಾಹವು ಇಂದು ನಿಮ್ಮನ್ನು ಕಾಡಬಹುದು. ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಿಸಿ. ಬಹುಶಃ ಚಿಂತೆ ಮತ್ತು ತೊಂದರೆಯನ್ನುಂಟುಮಾಡುವ ಪರಿಸ್ಥಿತಿಗಳಿಂದ ದೂರವಿರಿ. ಯಶಸ್ಸನ್ನು ಸಾಧಿಸಲು ನೀವು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಮಿತಿಮೀರಿದ ಆಹಾರ ಸೇವನೆಯನ್ನು ತಪ್ಪಿಸಿ.

    MORE
    GALLERIES

  • 612

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಕನ್ಯಾ: ಅಹಿತಕರ ದಿನವು ನಿಮಗಾಗಿ ಕಾದಿದೆ. ಆದ್ದರಿಂದ, ಶಾಂತಿ ಮತ್ತು ಸಮಾಧಾನ ಅಗತ್ಯ. ಆಹಾರ ವಿಧಾನದಲ್ಲಿ ತೊಂದರೆಯನ್ನುಂಟುಮಾಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ. ಹೆಚ್ಚು ಖರ್ಚುವೆಚ್ಚಗಳಾಗುವ ಸಾಧ್ಯತೆಯಿರುವುದರಿಂದ ನಿಮ್ಮ ಹಣದ ಲೆಕ್ಕಾಚಾರದ ಮೇಲೆ ಗಮನವಿರಲಿ.

    MORE
    GALLERIES

  • 712

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ತುಲಾ: ತುಲಾ ರಾಶಿಯವರಿಗೆ ಮತ್ತೊಂದು ಒಳ್ಳೆಯ ದಿನ ಕಾದಿದೆ. ಸಾಮಾಜಿಕ ಸಮಾರಂಭಗಳತ್ತ ಗಮನಹರಿಸುವುದರಿಂದ ನಿಮ್ಮ ಮನಸ್ಥಿತ ಉತ್ಸಾಹ ಮತ್ತು ಉಲ್ಲಾಸದಿಂದಿರುತ್ತದೆ. ಗೌರವ ಮತ್ತು ಕೀರ್ತಿ ಸಿಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ವೃದ್ಧಿ ಕಾಣಬಹುದು. ಅನಿರೀಕ್ಷಿತ ಧನಲಾಭದಿಂದ ನೀವು ಶ್ರೀಮಂತರಾಗಬಹುದು. ನಿಜಕ್ಕೂ ವಿಶೇಷ ದಿನವಾಗಿದೆ.

    MORE
    GALLERIES

  • 812

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಹಿತಕರ ಮತ್ತು ಹರ್ಷದಾಯಕ ದಿನ ಕಾದಿದೆ. ನಿಮ್ಮ ತಾಯಿಯ ಕಡೆಯಿಂದ ಬರುವ ಶುಭ ಸುದ್ದಿಯು ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸಬಹುದು. ಅಪೂರ್ಣಗೊಂಡಿರುವ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ. ಅಲ್ಲದೆ, ಧನಲಾಭದ ಯೋಗವೂ ಇದೆ.

    MORE
    GALLERIES

  • 912

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಧನಸ್ಸು: ನೀವು ಯಶಸ್ಸು ಗಳಿಸುವವರೆಗೆ ನಿಮ್ಮ ಶ್ರಮ ಮುಂದುವರಿಯಲಿ. ತೊಂದರೆಗಳು ಉಂಟಾದಲ್ಲಿ ಇಂದು ನಿಮ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ತಾಳ್ಮೆಯಿಂದಿರಿ. ಪ್ರೀತಿಪಾತ್ರರ ಜೀವನ ಮತ್ತು ವೃತ್ತಿಯ ಕುರಿತಾಗಿ ನೀವು ಕೂಡಾ ಚಿಂತೆಗೊಳಗಾಗಬಹುದು. ಪ್ರಯಾಣ ಯೋಜನೆಗಳನ್ನು ತಪ್ಪಿಸಿ.

    MORE
    GALLERIES

  • 1012

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಮಕರ: ನಿನ್ನೆಯ ಉತ್ಸಾಹಯುತ ಶಕ್ತಿ, ಮಕ್ಕು ಉಲ್ಲಾಸಕರ ವಿನಿಮಯ ಇಂದು ಬರಿದಾಗಿರುವಂತೆ ಕಂಡುಬರುತ್ತದೆ. ದೈಹಿಕವಾಗಿ ನೀವು ಚೈತನ್ಯದಿಂದ ಕೂಡಿರುವುದಿಲ್ಲ ಮತ್ತು ನಿಮ್ಮ ಮನಸ್ಸೂ ಇದನ್ನೇ ಅನುಸರಿಸುತ್ತದೆ. ನಿನ್ನೆ ನಡೆದ ಏನೋ ಒಂದು ಘಟನೆ ಇನ್ನೂ ನಿಮ್ಮನ್ನು ಕಾಡುತ್ತಿರಬಹುದು. ನಿಮಗೆ ಅಹಿತಕರ ಭಾವನೆಯನ್ನು ಉಂಟುಮಾಡುತ್ತಿರಬಹುದು. ಎದೆ ನೋವು, ಆಸಿಡಿಟಿ ಮುಂತಾದ ಸಣ್ಣ ಕಾಯಿಲೆಗಳು ಕಾಡಬಹುದು, ಎಚ್ಚರಿಕೆಯಿಂದಿರಿ.

    MORE
    GALLERIES

  • 1112

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಕುಂಭ: ನಿಮ್ಮ ಸುತ್ತಲೂ ಮಸುಕನ್ನು ತುಂಬಿದ್ದ ಕೆಟ್ಟ ಮೋಡಗಳು ಇಂದು ದೂರ ಸರಿಯಲಿವೆ. ಜೊತೆಗೆ ಕೆಲವು ಸಮಸ್ಯೆಗಳು ಕೂಡ. ಮನೆಮಂದಿಯವರ, ಒಡಹುಟ್ಟಿದವರ, ಸ್ನೇಹಿತರ ಮತ್ತು ಪ್ರೀತಿಪಾತ್ರರ ಜೊತೆಯು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ.

    MORE
    GALLERIES

  • 1212

    Know Your Horoscope: ಈ 3 ರಾಶಿಗೆ ಇಂದು ಲಕ್ಕಿ ಡೇ, ಕಷ್ಟವೆಲ್ಲಾ ಮಾಯವಾಗುತ್ತೆ!

    ಮೀನ: ನೀವು ಏನು ಮಾತನಾಡುತ್ತೀರಿ ಮತ್ತು ಯಾರೊಂದಿಗೆ ಮಾತನಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕತೆಯಿಂದಿರಿ.ಭಿನ್ನಾಭಿಪ್ರಾಯ ಅಥವಾ ವಾಗ್ವಾದಗಳು ನಡೆಯಲಿವೆ. ನಿಮ್ಮ ಎಲ್ಲಾ ವ್ಯವಹಾರಗಳಲ್ಲೂ ಜಾಗರೂಕರಾಗಿರಿ. ಖರ್ಚುವೆಚ್ಚಗಳ ಬಗ್ಗೆ ಗಮನವಿರಲಿ.

    MORE
    GALLERIES