ಮೇಷ: ನೀರಸ ದಿನವು ನಿಮ್ಮದಾಗಲಿದೆ. ಸಣ್ಣ ಸಮಸ್ಯೆಗಳು ನಿಮಗೆ ಕಿರಿಕಿರಿಯುಂಟುಮಾಡಬಹುದು. ನಿಮ್ಮ ದೈನಂದಿನ ವ್ಯಾಯಾಮವನ್ನು ಇನ್ನಷ್ಟು ಹೆಚ್ಚಿಸಬೇಡಿ. ಬದಲಾಗಿ ವಿಶ್ರಾಂತಿ ಮತ್ತು ವಿರಾಮ ಅಗತ್ಯ. ಪ್ರಯಾಣವನ್ನು ಮುಂದೂಡಿ ಮತ್ತು ಕೆಲಸವನ್ನು ಪೂರ್ಣಗೊಳಿಸಲು ಅತ್ತಿಂದಿತ್ತ ಓಡಾಡುವ ಬದಲು ವಿಶ್ರಾಂತಿ ತೆಗೆದುಕೊಳ್ಳಿ. ಕೆಲಸ ಎಂದೂ ಮುಗಿಯುವುದಿಲ್ಲ. ಮನೆಯಲ್ಲಿ ಪ್ರೀತಪಾತ್ರರೊಂದಿಗಿನ ಸಣ್ಣ ಜಗಳವು ನಿಮಗೆ ಕಿರಿಕಿರಿಯನ್ನುಂಟುಮಾಡಬಹುದು.
ವೃಷಭ: ಈ ದಿನ ಉತ್ತಮವಾಗಿರುತ್ತದೆ. ಆದರೆ ಒಳ್ಳೆಯ ವಿಚಾರವೆಂದರೆ ನೀವು ಎಷ್ಟು ಉತ್ತಮವಾಗಿಸುತ್ತೀರೋ ಅಷ್ಟು ಉತ್ತಮವಾಗಿರುತ್ತದೆ. ನಿಮ್ಮ ಹಠಮಾರಿತನ, ತೀವ್ರ ದೃಢತೆಯಿಂದ ಯಾವುದೇ ಕೆಲಸ ಕಷ್ಟಕರವೆನಿಸುವುದಿಲ್ಲ. ನೀವು ಹೆಚ್ಚು ಪ್ರಯತ್ನಪಟ್ಟಲ್ಲಿ ಹೆಚ್ಚು ಪ್ರತಿಫಲ ಪಡೆಯುವಿರಿ. ಕನಿಷ್ಟಪಕ್ಷ ಗುರಿಯಿಲ್ಲದೆ ಕೆಲಸ ಮಾಡುವುದಕ್ಕಿಂತ ಇದು ಉತ್ತಮ.ದೃಢ ನಿಲುವನ್ನು ತಾಳಿ ಮತ್ತು ಆತ್ಮವಿಶ್ವಾಸದ ಹೆಜ್ಜೆಯಿಡಿ.