ಮೇಷ: ಹೊಸ ಯೋಜನೆಗಳನ್ನು ಮತ್ತು ಕಾರ್ಯಗಳನ್ನು ಪ್ರಾರಂಭಿಸಲು ಇಂದು ಉತ್ತಮ ದಿನ . ಏನೇ ಆದರೂ, ಮಧ್ಯಾಹ್ನದ ಬಳಿಕ ಯಶಸ್ಸಿನ ಸಾಧ್ಯತೆಯು ಇನ್ನಷ್ಟು ದಟ್ಟವಾಗಲಿದೆ. ದಿನದ ಪೂರ್ವಾರ್ಧದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು, ಆದರೆ, ನಿಮ್ಮನ್ನು ನಿಯಂತ್ರಿಸಿಕೊಳ್ಳಿ, ದ್ವಿತೀಯಾರ್ಧವು ಸಮಾಧಾನ ಹಾಗೂ ಸಂತಸದಿಂದ ಕೂಡಿರುತ್ತದೆ. ಧ್ಯಾನ ಮತ್ತು ಯೋಗ ಮಾಡಿ. ಇದು ನಿಮಗೆ ಧೈರ್ಯ ನೀಡುತ್ತದೆ. ಹಾಳುಮೂಳು ತಿಂಡಿಗಳ ಸೇವನೆಯನ್ನು ಆದಷ್ಟು ತಪ್ಪಿಸಿ.
ವೃಷಭ: ಇಂದು ನೀವು ನಿಮ್ಮ ದಿನವನ್ನು ನಿಶ್ಚಿಂತೆಯಿಂದ ಪ್ರಾರಂಭಿಸುವಿರಿ ಆದರೂ,ಇದು ದಿನವಿಡೀ ಸಾಧ್ಯವಾಗಲಾರದು . ಆದ್ದರಿಂದ ಮುಂಜಾನೆಯ ವೇಳೆಗೆ ಗ್ರಹಗತಿಗಳಿಂದ ದೊರೆಯಲ್ಪಡುವ ಅನುಗ್ರಹದ ಗರಿಷ್ಟ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ವಿಹಾರಕ್ಕೆ ತೆರಳಿ. ಮಧ್ಯಾಹ್ನದ ಬಳಿಕ ನೀವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳೊಂದಿಗಿನ ಅರ್ಥರಹಿತ ಚರ್ಚೆ ಹಾಗೂ ವಾಗ್ವಾದಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ.
ವೃಶ್ಚಿಕ: ಈ ದಿನವು ನಿಮಗೆ ಸಾಮಾನ್ಯ ದಿನವಾಗಿದೆ ಈ ದಿನದ ಎಲ್ಲಾ ಲಾಭಗಳನ್ನು ಪಡೆಯಲು ನೀವು ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ ಮತ್ತು ದೃಢ ನಿಲುವನ್ನು ಹೊಂದಬೇಕಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ಅರ್ಥಹೀನ ಚರ್ಚೆಗಳನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಮತ್ತು ಕಾಳಜಿವಹಿಸುವ ಅಗತ್ಯವಿದೆ. ಅದರ ಮೇಲೆ ಕಣ್ಣಿಟ್ಟಿರಿ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನವಿರಲಿ.
ಧನಸ್ಸು: ತೊಂದರೆಯುಕ್ತ ದಿನವು ಸಂಜೆಯ ವೇಳೆಗೆ ಅನುಕೂಲಕರ ದಿನವಾಗಿ ಪರಿವರ್ತನೆಗೊಳ್ಳುವ ಭರವಸೆಯನ್ನು ಗ್ರಹಗತಿಗಳು ನೀಡುತ್ತವೆ. ವಾಹನ ಚಾಲನೆಯ ವೇಳೆ ವೇಗದಲ್ಲಿ ನಿಯಂತ್ರಣವಿರಲಿ, ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಮನರಂಜನೆಗಾಗಿ ನೀವು ಮಾಡುವ ವೆಚ್ಚವು ಮಿತಿಮೀರಬಹುದು. ಅವುಗಳ ಬಗ್ಗೆ ಗಮನವಿರಲಿ ಇಲ್ಲವಾದಲ್ಲಿ ನಿಮ್ಮ ಬೊಕ್ಕಸ ಖಾಲಿಯಾಗಬಹುದು. ಮನೆಯ ವಾತಾವರಣವು ಪ್ರತಿಕೂಲವಾಗಿರುವ ಸಾಧ್ಯತೆಯಿರುವುದರಿಂದ ವಾಗ್ವಾದ ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ತಾಳ್ಮೆಯಿಂದಿರಲು ಪ್ರಯತ್ನಿಸಿ.
ಮಕರ: ಈ ದಿನವು ವಿಶೇಷವಾಗಿ ವೃತ್ತಿಪರರಿಗೆ ಹಾಗೂ ಉದ್ಯಮಿಗಳಿಗೆ ಫಲಪ್ರದವಾಗಿರುತ್ತದೆ. ಮನೆಯಲ್ಲಿನ ವಾತಾವರಣವು ಮುಂಜಾನೆಯ ವೇಳೆ ಲವಲವಿಕೆಯಿಂದಿರುತ್ತದೆ ಮತ್ತು ಇದು ನಿಮ್ಮನ್ನು ಮಧ್ಯಾಹ್ನದವರೆಗೆ ಉಲ್ಲಾಸ ಹಾಗೂ ಉತ್ಸಾಹದಲ್ಲಿರಿಸುತ್ತದೆ. ಮಧ್ಯಾಹ್ನದ ಬಳಿಕ ಸ್ವಲ್ಪ ಅಡೆತಡೆಗಳು ಉಂಟಾಗುವ ಸಾಧ್ಯತೆಯಿದೆ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸಿ.