ಮೇಷ: ಲೌಕಿಕ ವಿಷಯಗಳ ಬಗ್ಗೆ ನೀವು ಆಸಕ್ತಿಯನ್ನು ಹೊಂದಿರುವುದಿಲ್ಲ. ನಿಮ್ಮದೇ ಆಧ್ಯಾತ್ಮಿಕ ಮತ್ತು ಬೌದ್ಧಿಕ ಪ್ರಪಂಚದಲ್ಲಿ ನೀವು ಸಂಪೂರ್ಣವಾಗಿ ಕಳೆದುಹೋಗುವಿರಿ. ಇದು ಖಂಡಿತವಾಗಿಯೂ ಕೆಟ್ಟ ವಿಚಾರವಲ್ಲ. ಬದಲಾಗಿ ಈ ಆಳವಾದ ಆಲೋಚನೆಗಳಿಂದ ನಿಮಗೆ ಪ್ರಯೋಜನ ಸಿಗಲಿದೆ. ಸ್ವಯಂ ಸಾಧನೆಯ ಮೊದಲ ಹೆಜ್ಜೆಯಲ್ಲಿ ನಿಮ್ಮ ಉತ್ಸಾಹವನ್ನು ನಿಯಂತ್ರಿಸಿಕೊಳ್ಳಲು ಮರೆಯದಿರಿ, ಕೋಪ, ಒರಟು ವರ್ತನೆ, ಸಂಘರ್ಷ ಮತ್ತು ವಿರೋಧಿಗಳಿಂದ ದೂರವಿರಿ. ಅನಿರೀಕ್ಷಿತ ಐಶ್ವರ್ಯ ಪ್ರಾಪ್ತಿಯ ಯೋಗವಿದೆ.
ವೃಷಭ: ಅದೃಷ್ಟ ಶಾಲಿ ವೃಷಭ ರಾಶಿಯವರು ದಿನಪೂರ್ತಿ ಸಂತಸ ಹಾಗೂ ಖುಷಿಯಿಂದ ತುಂಬಿರುತ್ತಾರೆ. ನಿಮ್ಮತ್ತ ಬರುವ ಎಲ್ಲಾ ಲವಲವಿಕೆ ಮತ್ತು ಮೋಜನ್ನು ಆನಂದಿಸಿ. ಸಂತಸಭರಿತ ಪ್ರಯಾಣವನ್ನು ಪ್ರಾರಂಭಿಸಬಹುದು ಅಥವಾ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ವಿಹಾರಕ್ಕೆ ತೆರಳಬಹುದು. ನೀವು ಒಮ್ಮೆಲೇ ಪಿತ್ರಾರ್ಜಿತ ಆಸ್ತಿ ಪಡೆಯಬಹುದು ಅಥವಾ ಬಹುಶಃ ಲಾಟರಿಯಲ್ಲಿಯೂ ಗೆಲುವು ಸಿಗಬಹುದು. ಅನಿರೀಕ್ಷಿತ ಧನಲಾಭದ ಯೋಗವು ಖಂಡಿತವಾಗಿಯೂ ಇದೆ.
ಮಿಥುನ: ಮಿಥುನ ರಾಶಿಯವರಿಗೆ ಅದ್ಭುತ ದಿನವು ಕಾದಿದೆ. ಇಂದು ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಕಾರ್ಯ, ಶೈಕ್ಷಣಿಕ, ವ್ಯವಹಾರ, ರಂಗ ನಿರ್ವಹಣೆ ಮತ್ತು ಸಂಬಂಧಗಳಲ್ಲಿ ನೀವು ಯಶಸ್ಸು ಕಾಣುವಿರಿ. ಹಣಕಾಸು ಲಾಭ ಉಂಟಾಗಲಿದೆ ಆದ್ದರಿಂದ ಅಗತ್ಯ ಖರ್ಚುವೆಚ್ಚಗಳನ್ನು ಮಾಡಿ. ನೀವು ನಿಮ್ಮ ಪ್ರೀತಿಪಾತ್ರರ ಅಥವಾ ನಿಮ್ಮದೇ ಮನಸ್ಸನ್ನು ನೋಯಿಸಬಹುದು. ಸಹೋದ್ಯೋಗಿಗಳ ಸಹಕಾರ, ಮೇಲಾಧಿಕಾರಿಗಳ ಪ್ರಶಂಸೆ ಸಿಗಲಿದೆ.
ಸಿಂಹ: ಇಂದು ಜಾಗರೂಕಾರಾಗಿ ಮತ್ತು ಸಂಯಮದಿಂದಿರಿ. ಎಲ್ಲಾ ವಿಷಯಗಳಲ್ಲೂ ಎಚ್ಚರಿಕೆಯಿಂದಿರಿ ಮತ್ತು ಸಾಧ್ಯವಿದ್ದರೆ ಶಾಂತವಾಗಿ ಪ್ರಯಾಣ ಮಾಡಬೇಡಿ. ನಿಮ್ಮ ಮಾತು, ಕೋಪ ಮತ್ತು ಚರ್ಚೆಯ ಮೇಲಿನ ಸ್ಥಿರ ಮತ್ತು ಕಟ್ಟುನಿಟ್ಟಿನ ನಿಯಂತ್ರಣವು ನಿಮ್ಮನ್ನು ಸಂಘರ್ಷ, ವಾಗ್ವಾದ ಮತ್ತು ವ್ಯಾಜ್ಯಗಳಲ್ಲಿ ಸಿಲುಕಿಸದಂತೆ ನೋಡಿಕೊಳ್ಳುತ್ತದೆ. ನಿಮ್ಮ ತಾಯಿಯೊಂದಿಗೆ ನೀವು ಅಸಮಾಧಾಮವನ್ನು ಹೊಂದಿದ್ದಲ್ಲಿ, ಚರ್ಚೆಯನ್ನು ಮುಂದೂಡಿ.
ಧನಸ್ಸು: ಧನುರಾಶಿಯವರಿಗೆ ಈ ದಿನವು ವಿಶೇಷವಾಗಿ ಸಿಡುಕಿನಿಂದ ಕೂಡಿರುವ ಸಾಧ್ಯತೆಯಿದೆ. ಇತರರತ್ತ ಬಾಣ ಎಸೆಯುವಾಗ ಜಾಗರೂಕರಾಗಿರಿ. ನೀವು ಇತರರತ್ತ ವ್ಯಂಗ್ಯದ ಮಾತುಗಳನ್ನು ಆಡುವುದರಿಂದ ಜಗಳ ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ. ಪ್ರಾರ್ಥನೆ, ಧ್ಯಾನ, ಆಧ್ಯಾತ್ಮದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ. ಹಣವನ್ನು ಮತ್ತು ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಳ್ಳಿ.
ಮೀನ: ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದ ಹಗೆತನ ಉಂಟಾಗಲಿದೆ. ಮೇಲಾಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಳೊಂದಿಗೆ ಮತ್ತು ವೃತ್ತಿಯಲ್ಲಿ ಮತ್ತು ವ್ಯವಹಾರದಲ್ಲಿನ ವೈರಿಗಳೊಂದಿಗೆ ಸಮಾಲೋಚನೆ ನಡೆಸುವಾಗ ಜಾಗರೂಕರಾಗಿರಿ. ಇದು ಕೆರಳಿಸುವಂತಹ ವಿಚಾರವಾಗಿರಬಹುದು ಮತ್ತು ನೀವು ಉದ್ದೇಶರಹಿತವಾಗಿ ಹೇಳುವ ಯಾವುದೋ ಒಂದು ಮಾತು ಸಮಸ್ಯೆಯನ್ನು ಹೆಚ್ಚಿಸಬಹುದು. ಪ್ರತಿ ಮಾತನ್ನು ಆಡುವಾಗಲೂ ಎರಡೆರಡು ಬಾರಿ ಯೋಚಿಸಿ ಇಲ್ಲದಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ.