Ganesh Jayanti 2023: ನಾಳೆ ರೂಪುಗೊಳ್ಳಲಿದೆ 3 ಯೋಗ, ಈ ಕೆಲಸ ಮಾಡಿದ್ರೆ ನಿಮ್ಮ ಲಕ್ ಚೇಂಜ್ ಆಗುತ್ತೆ
Ganesh Jayanti 2023: 2023 ರಲ್ಲಿ ಗಣೇಶ ಜಯಂತಿ ಜನವರಿ 25 ಬುಧವಾರ ಬಂದಿದೆ. ಇದನ್ನು ಮಾಘಮಾಸ ಶುಕ್ಲ ಪಕ್ಷ ಚತುರ್ಥಿ ಎಂದೂ ಸಹ ಆಚರಿಸಲಾಗುತ್ತದೆ. ಈ ಬಾರಿ ಈ ದಿನ ಬುಧವಾರವೇ ಬಂದಿರುವುದು ಕಾಕತಾಳೀಯ ಎನ್ನಬಹುದು. ಇನ್ನು ಈ ವಿಶೇಷ ದಿನದಂದು ಕೆಲ ಕೆಲಸಗಳನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಈ ದಿನ ಏನು ಮಾಡಬೇಕು ಎಂಬುದು ಇಲ್ಲಿದೆ.
ಗಣೇಶ ಜಯಂತಿಯಂದು ರವಿ ಯೋಗ, ಪರಿಘ ಯೋಗ ಮತ್ತು ಶಿವಯೋಗಗಳು ರೂಪುಗೊಳ್ಳುತ್ತವೆ. ಈ ಬಾರಿಯ ಗಣೇಶ ಜಯಂತಿಯಂದು ಗಣಪತಿಗೆ ಅವನಿಷ್ಟದ ನೈವೇದ್ಯ ಅರ್ಪಿಸಿದರೆ ನಿಮ್ಮ ಜೀವನದ ಅದೃಷ್ಟದ ಬಾಗಿಲು ತೆರೆಯುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವೂ ನಿಮಗೆ ದೊರೆಯುತ್ತದೆ
2/ 7
ಬುಧವಾರದ ಗಣೇಶ ಪೂಜೆಯ ಮಹತ್ವ: ಬುಧವಾರದಂದು ಉಪವಾಸವಿದ್ದು ಗಣೇಶನನ್ನು ಪೂಜಿಸುವುದರಿಂದ ಬುಧಗ್ರಹಕ್ಕೆ ಸಂಬಂಧಿಸಿದ ದೋಷಗಳು ದೂರವಾಗುತ್ತವೆ ಹಾಗೂ ಗಣೇಶನ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.
3/ 7
ಗಣೇಶ ಜಯಂತಿಯಂದು ರವಿ ಯೋಗವು ರೂಪುಗೊಳ್ಳುತ್ತದೆ. ರವಿ ಯೋಗವು ಬೆಳಗ್ಗೆ 07:13 ರಿಂದ ರಾತ್ರಿ 08:05 ರವರೆಗೆ ಇರಲಿದ್ದು, ಈ ದಿನ ಗಣೇಶನ ಪೂಜೆಯ ಸಮಯವು ಬೆಳಗ್ಗೆ 11:29 ರಿಂದ ಮಧ್ಯಾಹ್ನ 12:34 ರವರೆಗೆ ಇರುತ್ತದೆ.
4/ 7
ಪುರಾಣಗಳ ಪ್ರಕಾರ, ಲಕ್ಷ್ಮಿಯು ಗಣೇಶನನ್ನು ತನ್ನ ಮಗನೆಂದು ಪರಿಗಣಿಸಿದ್ದಾಳೆ. ಹಾಗಾಗಿ ಗಣಪತಿಯನ್ನು ಪೂಜಿಸುವ ಕಡೆ ತಾನೂ ಇರುತ್ತೇನೆ ಎಂದು ಮಾತು ಕೊಟ್ಟಿರುತ್ತಾಳೆ. ಈ ಕಾರಣದಿಂದ ಗಣೇಶ ಜಯಂತಿಯ ದಿನ ಪೂಜೆ ಮಾಡಿ, ದಾನ ಮಾಡುವುದರಿಂದ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು.
5/ 7
ಗಣೇಶನಿಗೆ ಮೋದಕ ಎಂದರೆ ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಈ ದಿನ ಮೋದಕವನ್ನು ನೈವೇದ್ಯ ಮಾಡಿ. ಈ ರೀತಿ ಮೋದಕ ನೈವೇದ್ಯ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗಿ, ಇಷ್ಟಾರ್ಥ ಸಿದ್ಧಿಯಾಗುತ್ತದೆ.
6/ 7
ಗಣೇಶನಿಗೆ ಈ ದಿನ ಬಾಳೆಹಣ್ಣನ್ನು ಅರ್ಪಿಸಿ. ಇದು ಗಣಪತಿಗೆ ಇಷ್ಟವಾದ ಹಣ್ಣಾಗಿದ್ದು, ಇದರಿಂದ ಗಣೇಶನಿಗೆ ತೃಪ್ತಿ ಆಗಲಿದೆ ಎನ್ನಲಾಗುತ್ತದೆ. ಆದರೆ ನೈವೇದ್ಯ ಮಾಡುವಾಗ ಬಾಳೆಹಣ್ಣುಗಳನ್ನು ಜೋಡಿಯಾಗಿ ಕೊಡಬೇಕು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)