Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ಹಿಂದೂ ನಂಬಿಕೆಯನ್ನು ಅನುಸರಿಸುವ ಜನರು, ಹೊಸ ಕಾರ್ಯ ಅಥವಾ ಯೋಜನೆಯನ್ನು ಪ್ರಾರಂಭಿಸುವಾಗ ತಮ್ಮ ಮೊದಲ ಪ್ರಾರ್ಥನೆಯನ್ನು ಗಣೇಶನಿಗೆ ಅರ್ಪಿಸುತ್ತಾರೆ. ಪ್ರಥಮ ಪೂಜ್ಯ, ಗಣೇಶನು ಅಡೆತಡೆಗಳನ್ನು ನಿವಾರಿಸುವವನು ಎಂದು ಹೇಳಲಾಗುತ್ತದೆ. ಆದ್ದರಿಂದ, ಭಕ್ತರು ಗಣೇಶನನ್ನು ಪೂಜಿಸುತ್ತಾರೆ. ಭಾದ್ರಪದದಲ್ಲಿ ಗಣೇಶ ಚತುರ್ಥಿಯನ್ನು ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿಸಲಾಗಿದೆ. ಈ ವರ್ಷ ಹಬ್ಬ ಎಂದು? ಪೂಜೆ ಯಾವಾಗ ಮಾಡಬೇಕು ಅನ್ನೋದರ ವಿವರಣೆ ಇಲ್ಲಿದೆ ನೋಡಿ.

First published:

  • 18

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಗಣೇಶ ಹಬ್ಬ ದೇಶದಾದ್ಯಂತ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನೂ ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ. ಇದು ಆಗಸ್ಟ್ ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ಅಂತ್ಯದ ನಡುವೆ ಬರುತ್ತದೆ. ಗಣೇಶ ಚತುರ್ಥಿಯು ಶಿವ ಮತ್ತು ಪಾರ್ವತಿ ದೇವಿಯ ಪುತ್ರನಾದ ಗಣೇಶನ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

    MORE
    GALLERIES

  • 28

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಆನೆ ದೇವರು ಎಂದೂ ಕರೆಯಲ್ಪಡುವ ಗಣೇಶನು ಸಂಪತ್ತು, ವಿಜ್ಞಾನ, ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು. ಎಲ್ಲಾ ಹೊಸ ಆರಂಭಗಳು ಗಣೇಶನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತವೆ ಏಕೆಂದರೆ ಅವನು ಅಡೆತಡೆಗಳನ್ನು ನಿವಾರಿಸುವವನು ಎಂದು ಕರೆಯಲಾಗುತ್ತದೆ.

    MORE
    GALLERIES

  • 38

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಈ ಗಣೇಶ ಹಬ್ಬವು, ಈ ವರ್ಷ ಆಗಸ್ಟ್ 31 ರಂದು ಆಚರಿಸಲಾಗುವುದು. ಗಣೇಶ ಚತುರ್ಥಿಯ ಹಬ್ಬವು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರಾರಂಭವಾಗುತ್ತದೆ ಮತ್ತು ಚತುರ್ದಶಿಯಂದು ಕೊನೆಗೊಳ್ಳುತ್ತದೆ.

    MORE
    GALLERIES

  • 48

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಉತ್ಸವವು 10 ದಿನಗಳವರೆಗೆ ಇರುತ್ತದೆ. ಆಚರಣೆಯ ನಂತರ 'ವಿಸರ್ಜನ' ಅಂಗವಾಗಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಈ ಹಬ್ಬವು ಗಣೇಶನು ತನ್ನ ತಾಯಿ ಪಾರ್ವರ್ತಿ/ಗೌರಿ ದೇವತೆಯೊಂದಿಗೆ 'ಕೈಲಾಸ ಪರ್ವತ'ದಿಂದ ಇಳಿಯುವುದನ್ನು ಸೂಚಿಸುತ್ತದೆ.

    MORE
    GALLERIES

  • 58

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಗಣೇಶ ಚತುರ್ಥಿ 2022 ತಿಥಿ ಸಮಯಗಳು- ಚತುರ್ಥಿ ತಿಥಿಯು ಆಗಸ್ಟ್ 30 ರಂದು ಮಧ್ಯಾಹ್ನ 3:33 ರಿಂದ ಆಗಸ್ಟ್ 31 ರಂದು ಮಧ್ಯಾಹ್ನ 3:22 ರವರೆಗೆ ಜಾರಿಯಲ್ಲಿರುತ್ತದೆ.

    MORE
    GALLERIES

  • 68

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಗಣೇಶ ಚತುರ್ಥಿ 2022 ಪೂಜೆ ಶುಭ ಮುಹೂರ್ತ- ಗಣೇಶ ಚತುರ್ಥಿ 2022 ಮಧ್ಯಾನ ಪೂಜೆ ಶುಭ ಮುಹೂರ್ತವು ಬೆಳಗ್ಗೆ 11:05 ರಿಂದ ಮಧ್ಯಾಹ್ನ 01:38 ರವರೆಗೆ ಇರುತ್ತದೆ. ಆ ಸಮಯದಲ್ಲಿ ಪೂಜೆ ಮಾಡಿದ್ರೆ ಒಳ್ಳೆಯದು.

    MORE
    GALLERIES

  • 78

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಚಂದ್ರನ ದರ್ಶನವನ್ನು ತಪ್ಪಿಸಲು ಗಣೇಶ ಚತುರ್ಥಿ 2022 ಸಮಯ- ಆಗಸ್ಟ್ 30 ರಂದು ಮಧ್ಯಾಹ್ನ 3:33 ರಿಂದ ರಾತ್ರಿ 8:40 ರವರೆಗೆ ಮತ್ತು ಆಗಸ್ಟ್ 31 ರಂದು ರಾತ್ರಿ 9:26 ರಿಂದ ರಾತ್ರಿ 9:11 ರವರೆಗೆ ಚಂದ್ರನ ದರ್ಶನವನ್ನು ತಪ್ಪಿಸಬೇಕು.

    MORE
    GALLERIES

  • 88

    Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ಓಂ ಗಣ ಗಣಪತಯೇ ನಮಃ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತಿ ಪಡೆಯ ಬೇಕಾದರೆ ಈ ಮಂತ್ರವನ್ನು ಪಠಿಸಬೇಕು. ಗಣೇಶನ ಈ ಮಂತ್ರ ಪಠಣೆಯಿಂದ ಜೀವನದಲ್ಲಿ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳನ್ನು ನಿವಾರಣೆ ಆಗುತ್ತದೆ.

    MORE
    GALLERIES