ಮಿಥುನ: ಗುರು ಮಿಥುನ ರಾಶಿಯ 11ನೇ ಮನೆಯಲ್ಲಿದ್ದು, ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದ್ದು, ಬಹಳ ಉತ್ತಮ ಸಮಯ ಇದು ಎನ್ನಬಹುದು. ಇಷ್ಟೇ ಅಲ್ಲದೇ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುವುದರಿಂದ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗುತ್ತದೆ.