Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

Astrology: ಗಜಕೇಸರಿ ಯೋಗ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಜಾತಕದಲ್ಲಿ ಈ ಯೋಗ ಇದ್ದರೆ ಬದುಕಿನಲ್ಲಿ ಸೋಲು ಎನ್ನುವುದು ಇರುವುದಿಲ್ಲ. ಮಾಡಿದ ಕೆಲಸಗಳು ಯಶಸ್ವಿಯಾಗುತ್ತದೆ. ಸದ್ಯದಲ್ಲಿ ಈ ಯೋಗ ರೂಪುಗೊಳ್ಳಲಿದ್ದು, ಇದರಿಂದ ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.

First published:

  • 17

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ತಮ್ಮ ರಾಶಿಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ಉಂಟು ಮಾಡುತ್ತವೆ. ಹಾಗೆಯೇ ಗುರುವು ಮೀನ ರಾಶಿಯಲ್ಲಿ ಕುಳಿತಿದ್ದಾನೆ ಮತ್ತು ಚಂದ್ರನು ಜನವರಿ 25 ರ ಅಂದರೆ ನಿನ್ನೆ ರಾತ್ರಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ.

    MORE
    GALLERIES

  • 27

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    ಈ ಸ್ಥಾನ ಬದಲಾವಣೆಯಿಂದ ಗಜಕೇಸರಿ ಯೋಗ ಉಂಟಾಗುತ್ತದೆ ಎನ್ನಲಾಗುತ್ತದೆ. ಇದರ ಪ್ರಭಾವವನ್ನು ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ 3 ರಾಶಿಯ ಜನರು ಈ ಸಮಯದಲ್ಲಿ ವೃತ್ತಿಯಲ್ಲಿ ಉತ್ತಮ ಲಾಭ ಮತ್ತು ಪ್ರಗತಿ ಹೊಂದುತ್ತಾರೆ.

    MORE
    GALLERIES

  • 37

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    ವೃಷಭ: ಗಜಕೇಸರಿ ರಾಜಯೋಗವು ನಿಮಗೆ ಲಾಭದಾಯಕವಾಗಿರುತ್ತದೆ. ಏಕೆಂದರೆ ಈ ರಾಜಯೋಗವು ನಿಮ್ಮ ರಾಶಿಯ ಕರ್ಮದ ಸ್ಥಳದಲ್ಲಿ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಲಿದೆ. ಅಲ್ಲದೇ ವೃತ್ತಿ ಜೀವನದಲ್ಲಿ ಲಾಭ ಸಿಗಲಿದೆ.

    MORE
    GALLERIES

  • 47

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    ಈ ಸಮಯದಲ್ಲಿ ಧನ ಮತ್ತು ಧಾನ್ಯಗಳಲ್ಲಿ ವೃದ್ಧಿಯಾಗಲಿದೆ. ಇದರ ಜೊತೆ ಮಕ್ಕಳ ಕಡೆಯಿಂದ ಒಂದಿಷ್ಟು ಒಳ್ಳೆಯ ಸುದ್ದಿ ಸಿಗಬಹುದು. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಹೊಸ ಕಾಮಗಾರಿಗಳನ್ನು ಆರಂಭಿಸಬಹುದು.

    MORE
    GALLERIES

  • 57

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    ಕರ್ಕಾಟಕ: ಗಜಕೇಸರಿ ರಾಜಯೋಗವು ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದನ್ನು ತ್ರಿಕೋನ ಮನೆ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ನಿಮಗೆ ಈ ಸಮಯದಲ್ಲಿ ಅದೃಷ್ಟ ಹೆಚ್ಚಾಗಲಿದೆ. ರಾಜಕೀಯದ ನಂಟು ಹೊಂದಿರುವವರು ಒಂದಿಷ್ಟು ಸ್ಥಾನ ಪಡೆದು ಚುನಾವಣೆಯಲ್ಲೂ ಗೆಲ್ಲಬಹುದು. ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಹೊಸ ಉದ್ಯೋಗ ದೊರೆಯಲಿದೆ.

    MORE
    GALLERIES

  • 67

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    ಕನ್ಯಾ ರಾಶಿ: ಗಜಕೇಸರಿ ರಾಜಯೋಗವು ಕನ್ಯಾರಾಶಿಯವರಿಗೆ ಮಂಗಳಕರ ಮತ್ತು ಫಲದಾಯಕ ಎನ್ನಲಾಗುತ್ತದೆ. ಈ ರಾಜಯೋಗವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಮನೆ ಎನ್ನಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮದುವೆ ಆಗಬಹುದು ಹಾಗೂ ಹೊಸ ಕೆಲಸ ಆರಂಭಿಸಬಹುದು.

    MORE
    GALLERIES

  • 77

    Gajakesari Yoga: ಗಜಕೇಸರಿ ಯೋಗದಿಂದ ಈ ರಾಶಿಗಳ ಲಕ್ ಚೇಂಜ್, ನಿಮಗಿಂತ ಅದೃಷ್ಟವಂತರು ಯಾರೂ ಇಲ್ಲ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES