Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

Gajakesari Yoga: ಮೇ 17 ರಂದು ರಾತ್ರಿ 7.39 ಕ್ಕೆ ಚಂದ್ರ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಬಹಳ ವಿಶೇಷವಾದ ಯೋಗ ರೂಪುಗೊಳ್ಳುವುದರಿಂದ ಕೆಲ ರಾಶಿಯವರ ಜೀವನವೇ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    ಜ್ಯೋತಿಷ್ಯದ ಪ್ರಕಾರ, ಗ್ರಹಗಳು ರಾಶಿ ಬದಲಾಯಿಸಿದಾಗ ಅದರಿಂದ ಉಂಟಾಗುವ ಯೋಗಗಳು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಆ ಯೋಗಗಳು ಶುಭ ಅಥವಾ ಅಶುಭ ಫಲಗಳನ್ನು ನೀಡುತ್ತದೆ. ಇದರಿಂದ ಕೆಲವರಿಗೆ ಬಹಳ ಲಾಭವಾದರೆ, ಇನ್ನೂ ಕೆಲವರಿಗೆ ಸಮಸ್ಯೆಗಳು ಹೆಚ್ಚಾಗುತ್ತದೆ.

    MORE
    GALLERIES

  • 27

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    ಮೇ 17ರಂದು ಚಂದ್ರ ಮೇಷ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈಗಾಗಲೇ ಗುರು ಸಹ ಅದೇ ರಾಶಿಯಲ್ಲಿ ಇರುವುದರಿಂದ ಗುರು ಮತ್ತು ಚಂದ್ರನ ಸಂಯೋಗ ನಡೆಯಲಿದೆ. ಈ ಸಂಯೋಗದಿಂದ ಗಜಕೇಸರಿ ರಾಜಯೋಗ ಸೃಷ್ಟಿಯಾಗುತ್ತದೆ. ಈ ರಾಜಯೋಗದ ಕಾರಣದಿಂದ ಅನೇಕ ಭವಿಷ್ಯ ಉಜ್ವಲವಾಗುತ್ತದೆ.

    MORE
    GALLERIES

  • 37

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಗುರು ಮತ್ತು ಚಂದ್ರರು ಯಾವುದೇ ರಾಶಿಯಲ್ಲಿ ಸೇರಿದರೆ ಗಜಕೇಸರಿ ಯೋಗ ಉಂಟಾಗುತ್ತದೆ. ಜಾತಕದಲ್ಲಿ ಗುರುವು ಚಂದ್ರನಿಂದ ಕೇಂದ್ರ ಮನೆಯಲ್ಲಿ (1, 4, 7 ಮತ್ತು 10 ನೇ ಮನೆ) ಇರುವ ರಾಶಿಗಳಿಗೆ ಗಜಕೇಸರಿ ಯೋಗವು ಲಾಭದಾಯಕವಾಗಿರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    ಮೇಷ: ಈ ರಾಶಿಯವರಿಗೆ ಗಜಕೇಸರಿ ಯೋಗದಿಂದ ಭರ್ಜರಿ ಲಾಭ ಆಗುತ್ತದೆ. ಈ ಯೋಗವು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸ ಆರಂಭವಾಗಿ, ಅದರಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ನಿಮ್ಮ ಆದಾಯದಲ್ಲಿ ಸಹ ಹೆಚ್ಚಳವಾಗುತ್ತದೆ.

    MORE
    GALLERIES

  • 57

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    ಮಿಥುನ ರಾಶಿ: ಗಜಕೇಸರಿ ರಾಜಯೋಗವು ಮಿಥುನ ರಾಶಿಯವರ ಬದುಕನ್ನ ಬದಲಾಯಿಸಲಿದೆ. ಈ ಯೋಗದಿಂದ ಸಮಾಜದಲ್ಲಿ ಗೌರವ, ಸ್ಥಾನ, ಪ್ರತಿಷ್ಠೆ ಹೆಚ್ಚುತ್ತದೆ. ಅಲ್ಲದೇ, ಈ ಸಮಯದಲ್ಲಿ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಇನ್ನು ನೀವು ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ಅದರಲ್ಲಿ ಲಾಭ ಸಿಗುತ್ತದೆ.

    MORE
    GALLERIES

  • 67

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    ತುಲಾ: ಈ ಯೋಗದ ಕಾರಣದಿಂದ ತುಲಾ ರಾಶಿಯವರ ಪ್ರತಿ ಕನಸು ನನಸಾಗುತ್ತದೆ. ಅಲ್ಲದೇ, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿಮ್ಮದೇ ರಾಜ್ಯಭಾರ ಇರುತ್ತದೆ. ಯಾವುದೇ ಹೊಸ ವ್ಯವಹಾರ ಆರಂಭಿಸಿದರೂ ಸಹ ಅದರಿಂದ ಭವಿಷ್ಯದಲ್ಲಿ ದೊಡ್ಡ ಲಾಭ ಸಿಗುತ್ತದೆ. ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ.

    MORE
    GALLERIES

  • 77

    Gajakesari Yoga: ಈ 3 ರಾಶಿಯವರಿಗೆ ಗಜಕೇಸರಿ ರಾಜಯೋಗ, 1 ದಿನದಲ್ಲಿ ಇವರ ಬದುಕೇ ಬದಲಾಗಲಿದೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES