ನಿನ್ನೆ ಅಂದರೆ ಶುಕ್ರವಾರ 300 ರೂಪಾಯಿಯ ವಿಶೇಷ ದರ್ಶನ ಟಿಕೆಟ್ ಅನ್ನು ಡಿಟಿಡಿ ಬಿಡುಗಡೆ ಮಾಡಿತು. ಈ ಟಿಕೆಟ್ 40 ನಿಮಿಷಗಳಲ್ಲಿ ಪೂರ್ಣಗೊಂಡಿದೆ. ಈ ಟಿಕೆಟ್ ಅಡಿ ದಿನಕ್ಕೆ 12 ಸಾವಿರದಂತೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ 40 ನಿಮಿಷಗಳಲ್ಲಿ 3 ಲಕ್ಷದ 36 ಸಾವಿರ ಟಿಕೆಟ್ಗಳು ಬುಕ್ ಆಗಿವೆ. ಇನ್ನು ಇಂದು ಬೆಳಗ್ಗೆ 9 ಗಂಟೆಗೆ ಟಿಟಿಡಿ ಸರ್ವದರ್ಶನ ಟೋಕನ್ಗಳನ್ನು ಬಿಡುಗಡೆ ಮಾಡಿದೆ. ಇವುಗಳು ಕೇವಲ 8 ನಿಮಿಷಗಳಲ್ಲಿ ಬುಕ್ ಆಗಿವೆ.