Lucky Fruits: ಈ ಹಣ್ಣುಗಳು ಮನೆಯಲ್ಲಿ ಇದ್ರೆ ಅದೃಷ್ಟವೋ ಅದೃಷ್ಟ!
Lucky Fruits According To Feng Shui: ಫೆಂಗ್ ಶೂಯಿ ನಿಯಮದ ಪ್ರಕಾರ ಕೆಲವೊಂದು ಹಣ್ಣುಗಳನ್ನು ಮನೆಯ ಟೇಬಲ್ ಮೇಲೆ ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆ ಬರುವುದಿಲ್ಲ ಎನ್ನಲಾಗುತ್ತದೆ. ಈ ಹಣ್ಣುಗಳು ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಆ ಹಣ್ಣುಗಳು ಯಾವುವು ಎಂಬುದು ಇಲ್ಲಿದೆ.
ಬಾಳೆಹಣ್ಣು ಬಾಳೆಹಣ್ಣು ಒಗ್ಗಟ್ಟಿನ ಸಂಕೇತವಾಗಿದ್ದು, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಇದು ತಡೆಯುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಹಳದಿ ಬಣ್ಣವು ಸಂತೋಷವನ್ನು ಪ್ರತಿನಿಧಿಸುವುದರಿಂದ, ಮನೆಯಲ್ಲಿ ನೆಮ್ಮದಿ ಇರುತ್ತದೆ.
2/ 8
ಲಿಚ್ಚಿ ಲಿಚ್ಚಿ ಹಣ್ಣು ಸಹ ಮನೆಯಲ್ಲಿ ಇರುವುದು ಬಹಳ ಒಳ್ಳೆಯದು. ಈ ಕೆಂಪು ಬಣ್ಣ ಸಂತೋಷ ಮತ್ತು ಅದೃಷ್ಟದ ಸಂಕೇತವಾಗಿದೆ. ಅಲ್ಲದೇ ಫೆಂಗ್ ಶೂಯಿ ಪ್ರಕಾರ ಇದು ದಂಪತಿಗಳ ನಡುವೆ ಸಂಬಂಧ ಗಟ್ಟಿಗೊಳಿಸುತ್ತದೆ.
3/ 8
ಪೀಚ್ ಫೆಂಗ್ ಶೂಯಿ ಪ್ರಕಾರ ಈ ಪೀಚ್ ಹಣ್ಣು ಅಮರತ್ವದ ಸಂಕೇತವಾಗಿದ್ದು, ಆರೋಗ್ಯ, ಹಣ ಹಾಗೂ ದೀರ್ಘಾಯುಷ್ಯವನ್ನು ನೀಡುತ್ತದೆ. ಇದರ ಜೊತೆಗೆ ಈ ಪೀಚ್ ಹಣ್ಣು ಪ್ರೀತಿ ಮತ್ತು ಮದುವೆಯನ್ನು ಸಹ ಸೂಚಿಸುವುದರಿಂದ ಸಂಬಂಧದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತದೆ.
4/ 8
ಅನಾನಸ್ ಅನಾನಸ್ ಹಣ್ಣು ಸಹ ಆರೋಗ್ಯಕರ ಮಾತ್ರವಲ್ಲದೇ ಅದೃಷ್ಟವನ್ನೂ ಸಹ ತರುತ್ತದೆ. ಈ ಹಣ್ಣು ಸಂಪತ್ತಿನ ಸಂಕೇತವಾಗಿದ್ದು, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.
5/ 8
ಸೇಬುಹಣ್ಣು ಸೇಬುಹಣ್ಣು ಸಹ ಅದೃಷ್ಟದ ಹಣ್ಣು ಎಂದು ಹೆಸರು ಪಡೆದಿದೆ. ಇದು ಐಷಾರಾಮಿ ಆಹಾರದ ಸಂಕೇತವಾಗಿದ್ದು, ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಹಣ್ಣನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.
6/ 8
ದಾಳಿಂಬೆ ಹಣ್ಣು ಫೆಂಗ್ ಶೂಯಿ ಪ್ರಕಾರ ದಾಳಿಂಬೆ ಹಣ್ಣು ಫಲವತ್ತತೆಯನ್ನು ಸೂಚಿಸುತ್ತದೆ. ಮನೆಯಲ್ಲಿ ದಾಳಿಂಬೆ ಇರುವುದರಿಂದ ಯಾವುದೇ ರೀತಿಯ ಫಲವತ್ತತೆ ಸಮಸ್ಯೆ ಇದ್ದರೆ ಇದರಿಂದ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇದು ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ಹೆಚ್ಚು ಮಾಡುತ್ತದೆ.
7/ 8
ಕಿತ್ತಳೆ ಕಿತ್ತಳೆ ಹಣ್ಣು ರಿಫ್ರೆಶ್ ಮಾಡುವುದಕ್ಕೆ ಫೇಮಸ್ ಆಗಿದ್ದು, ಇದರ ಬಣ್ಣವು ಸಮೃದ್ಧಿಯನ್ನು ಸಂಕೇತಿಸುತ್ತದೆ. ಈ ಹಣ್ಣುಗಳು ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಫೆಂಗ್ ಶೂಯಿ ತಜ್ಞರು ಹೇಳುತ್ತಾರೆ.
8/ 8
ದ್ರಾಕ್ಷಿ ದ್ರಾಕ್ಷಿ ಹಣ್ಣು ಆಹಾರ ಮತ್ತು ಹಣದ ಸಮೃದ್ಧಿಯ ಸಂಕೇತವಾಗಿದ್ದು, ಜೀವನದಲ್ಲಿ ನಿಮ್ಮ ಕನಸುಗಳನ್ನು ನನಸು ಮಾಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ, ಆರೋಗ್ಯ ಸಮಸ್ಯೆಗಳು ಸಹ ಬರದಂತೆ ತಡೆಯುತ್ತದೆ.