ಕರ್ಕಾಟಕ: ಶನಿ ಸಂಚಾರವು ಕರ್ಕಾಟಕ ರಾಶಿಯವರಿಗೆ ವೃತ್ತಿ, ಆರೋಗ್ಯ ಮತ್ತು ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳನ್ನು ತರುತ್ತದೆ ಎನ್ನಲಾಗುತ್ತದೆ. ಹಾಗಾಗಿ ನೀವು ಎಚ್ಚರಿಕೆವಹಿಸುವುದು ಬಹಳ ಅಗತ್ಯವಾಗುತ್ತದೆ. .ನೀವು ಸ್ವಂತ ವ್ಯಾಪಾರವನ್ನು ಮಾಡುತ್ತಿದ್ದರೆ ಅಥವಾ ಉದ್ಯೋಗ ಮಾಡುತ್ತಿದ್ದರೆ, ಹೂಡಿಕೆ ವಿಚಾರದಲ್ಲಿ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಈ ಅವಧಿಯಲ್ಲಿ ಹಣಕಾಸಿನ ನಷ್ಟದ ಸಾಧ್ಯತೆಯಿರುವುದರಿಂದ, ಕೆಲಸವನ್ನೂ ಎಚ್ಚರಿಕೆಯಿಂದ ಮಾಡಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ನಿಮ್ಮ ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಮಾನಸಿಕ ಒತ್ತಡದಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.