Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

Holi Astrology: ಹೋಳಿ ಸಮಯದಲ್ಲಿ ಹಾಗೂ ಯುಗಾದಿಗೂ ಮೊದಲು ಕೆಲ ಗ್ರಹಗಳ ಸ್ಥಾನ ಬದಲಾವಣೆ ಇದೆ, ಮಿಥುನದಲ್ಲಿ ಮಂಗಳ, ಮೇಷದಲ್ಲಿ ಶುಕ್ರ, ಮೀನದಲ್ಲಿ ಸೂರ್ಯ ಮತ್ತು ಬುಧ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಗ್ರಹಗಳ ಕಾರಣಗಳ ಕಾರಣದಿಂದ ಅನೇಕ ರಾಶಿಗೆ ಧನಲಾಭ ಇದೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    ಗ್ರಹಗಳ ಬದಲಾವಣೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕೆಲವೊಂದು ಜೀವನದಲ್ಲಿ ಸಂತೋಷ ತಂದರೆ, ಕೆಲವು ಬದಲಾವಣೆ ಕಷ್ಟಗಳನ್ನು ಹೊತ್ತು ತರುತ್ತದೆ. ಹಾಗೆಯೇ, ಹೋಳಿ ಹಾಗೂ ಯುಗಾದಿ ಮಧ್ಯೆ ಕೆಲವು ಗ್ರಹಗಳ ಬದಲಾವಣೆ ಇದ್ದು, ಅವು ಕೆಲ ರಾಶಿಗಳಿಗೆ ಅದೃಷ್ಟ ತರುತ್ತವೆ.

    MORE
    GALLERIES

  • 27

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    ಈ ವರ್ಷ ಮಾರ್ಚ್ 8 ರಂದು ಹೋಳಿ ಬರುತ್ತದೆ, ಯುಗಾದಿ ಮಾರ್ಚ್ 21 ರಂದು ಬರುತ್ತದೆ. ಈ ಸಮಯದಲ್ಲಿ ನಾಲ್ಕು ಗ್ರಹಗಳು ಕೆಲ ರಾಶಿಗಳ ನಡುವೆ ಬದಲಾಗುತ್ತವೆ. ಹಬ್ಬ ಹರಿದಿನಗಳ ನಡುವಿನ ಶುಭ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಅತ್ಯಂತ ಶುಭ ಯೋಗವಿದ್ದು, ಧನಲಾಭ ಆಗಲಿದೆ.

    MORE
    GALLERIES

  • 37

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    ವೃಷಭ ರಾಶಿ: ಮಾರ್ಚ್ ತಿಂಗಳಲ್ಲಿ ವೃಷಭ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಸಹ ಲಾಭ ಸಿಗಲಿದೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಆರೋಗ್ಯ ಸಹ ಸುಧಾರಿಸುತ್ತದೆ. ಇದರ ಜೊತೆಗೆ ಸಂತಾನ ಭಾಗ್ಯವಿದೆ.

    MORE
    GALLERIES

  • 47

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    ಕನ್ಯಾ ರಾಶಿ: ಕನ್ಯಾರಾಶಿಗೆ ಹೊಸ ಉದ್ಯೋಗಾವಕಾಶಗಳು ಈ ಸಮಯದಲ್ಲಿ ಸಿಗಲಿವೆ. ವೇತನ ಹೆಚ್ಚಳ ಮತ್ತು ಬಡ್ತಿಆಗಲಿದೆ. ಈ ಸಮಯದಲ್ಲಿ ಹಣ ಗಳಿಕೆ ಹೆಚ್ಚಾಗುತ್ತದೆ. ಆದರೆ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯ ಬೆಂಬಲ ಸಾಧನೆ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 57

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    ತುಲಾ: ಈ ರಾಶಿಯವರು ಹೋಳಿ ಹಬ್ಬದ ಮೊದಲು ಗುಡ್ ನ್ಯೂಸ್ ಕೇಳುತ್ತಾರೆ. ಮುಖ್ಯವಾಗಿ ಆರ್ಥಿಕ ವಿಚಾರವಾಗಿ ನಿಮಗೆ ಲಾಭ ಆಗಲಿದೆ. ಈ ವಿಶೇಷ ಸಮಯ ನಿಮ್ಮ ಜೀವನದ ಗೊಂದಲಗಳನ್ನು ನಿವಾರಿಸುತ್ತದೆ. ಯಾವುದೇ ಸಮಸ್ಯೆ ಸಹ ನಿಮ್ಮ ಹತ್ತಿರ ಸುಳಿಯುವುದಿಲ್ಲ.

    MORE
    GALLERIES

  • 67

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    ಧನಸ್ಸು ರಾಶಿ: ಈ ಹಬ್ಬಗಳ ಸಮಯದಲ್ಲಿ ಧನಸ್ಸು ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ. ಸಂತೋಷ ಹಾಗೂ ಸಂಪತ್ತು ತುಂಬಿ ತುಳುಕುತ್ತದೆ. ಅಂದುಕೊಂಡ ಕೆಲಸಗಳೆಲ್ಲಾ ಕೈ ಹಿಡಿಯುತ್ತದೆ. ಹಣ ಗಳಿಸಲು ಉತ್ತಮ ಅವಕಾಶ ಸಿಗಲಿದೆ.

    MORE
    GALLERIES

  • 77

    Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳದ್ದೇ ದರ್ಬಾರ್

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES