ವೃಶ್ಚಿಕ ರಾಶಿ
ಮೇಲ್ನೋಟಕ್ಕೆ ಈ ರಾಶಿಯವರು ಬಹಳ ಪಾಪ, ಯಾವುದರ ಬಗ್ಗೆಯೂ ಯೋಚನೆ ಮಾಡುವುದಿಲ್ಲ ಅನಿಸುತ್ತದೆ, ಆದರೆ ಹೆಚ್ಚು ಸಾಮರ್ಥ್ಯವುಳ್ಳ ವ್ಯಕ್ತಿ ಇವರು ಎನ್ನಬಹುದು. ಅವರಿಗಿರುವ ಪ್ಲಸ್ ಪಾಯಿಂಟ್ ಏನೆಂದರೆ ಅವರು ಯಾವುದಾದರು ಒಂದು ಕಡೆ ದೃಷ್ಟಿ ನೆಟ್ಟರೆ ಅದನ್ನು ಸಾಧಿಸುವವರೆಗೂ ನಿಲ್ಲುವುದಿಲ್ಲ. ಸ್ವಾಭಾವಿಕವಾಗಿ, ಅವರು ಹಣವನ್ನು ಗಳಿಸುವ ಗುರಿಯನ್ನು ಹೊಂದಿದ್ದಾರೆ. ತಕ್ಷಣ ಈಡೇರದಿದ್ದರೂ ಗುರಿಯತ್ತ ಸಾಗುತ್ತಲೇ ಇರುತ್ತಾರೆ ಎಂದರೆ ತಪ್ಪಲ್ಲ.