Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

ಚಂದ್ರಮಾನ ಯುಗಾದಿ (Ugadi) ಹಿಂದೂಗಳ ಹೊಸ ವರ್ಷ ಅದರಲ್ಲೂ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುವುದು. ಯುಗಾದಿ ಎಂಬ ಪದ ಸಂಸ್ಕೃತ ಭಾಷೆಯಿಂದ ಬಂದಿದೆ. ಹೊಸ ಯುಗದ ಆರಂಭ ಇದರ ಅರ್ಥ.

First published:

  • 17

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ಯುಗಾದಿಯಲ್ಲಿನ ಪ್ರಮುಖ ಆಚರಣೆ ಮುಖ್ಯವಾದದ್ದು ಎಂದರೆ ಅಭ್ಯಂಜನ ಸ್ನಾನ. ಹಿಂದೂಗಳ ಹೊಸ ವರ್ಷಾಚರಣೆ ಈ ದಿನ ಎಣ್ಣೆ ಸ್ನಾನ ಮಾಡುವುದು ರೂಢಿ. ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ಈ ಹಬ್ಬ ಆಚರಣೆ ಮಾಡುತ್ತಾರೆ.

    MORE
    GALLERIES

  • 27

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ಮನೆಯ ಅಂದ ಹೆಚ್ಚಿಸುವ ರಂಗೋಲಿ : ಹಬ್ಬ ಹರಿದಿನ ಎಂದರೆ ಮನೆಯ ಮುಂದೆ ಚಿತ್ತಾಕರ್ಷಕ ರಂಗೋಲಿ ಗಮನ ಸೆಳೆಯುತ್ತವೆ. ವಿವಿಧ ಬಣ್ಣ ಬಣ್ಣದ ರಂಗೋಲಿ ಹಬ್ಬದ ಸಂಭ್ರಮ ತಿಳಿಸುತ್ತದೆ.

    MORE
    GALLERIES

  • 37

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ಹೊಸ ಬಟ್ಟೆ: ಹಬ್ಬ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಹೊಸ ಬಟ್ಟೆ ತೊಡುವ ಸಂಭ್ರಮ ಇರುತ್ತದೆ. ಹಾಕುವ ಹೊಸ ಬಟ್ಟೆಗಳಿಂದ ಮೂಡ್​ ಕೂಡ ಇನ್ನಷ್ಟು ಉಲ್ಲಾಸಗೊಳ್ಳುತ್ತದೆ.

    MORE
    GALLERIES

  • 47

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ಹಬ್ಬದೂಟ ಈ ಹಬ್ಬದ ಮತ್ತೊಂದು ವಿಶೇಷ. ಹೊಸ ವಸಂತ ಋತುವನ್ನು ಬರಮಾಡಿಕೊಳ್ಳುವ ಈ ಸಂಭ್ರಮದಲ್ಲಿ ಹಬ್ಬದೂಟ ಸವಿಯಲಾಗುವುದು ವಿಶೇಷವಾಗಿ ಬೆಲ್ಲದ ಒಬ್ಬಟ್ಟು, ಕೊಸಂಬರಿ, ಮಾವಿನ ಕಾಯಿ ಚಿತ್ರಾನ್ನ ಪ್ರಮುಖಾವಾಗಿ ಹಬ್ಬದೂಟದ ಸ್ಥಾನ ಪಡೆಯಲಿದೆ

    MORE
    GALLERIES

  • 57

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ಬೇವು- ಬೆಲ್ಲ: ಹಬ್ಬಗಳ ಹಿಂದಿನ ವೈಜ್ಞಾನಿಕ ಆಚರಣೆ ಹಿನ್ನಲೆ ಈ ಹಬ್ಬದಂದು ಬೇವು ಬೆಲ್ಲ ಸವಿಯಲಾಗುವುದು . ಬೆಲ್ಲ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದ್ದು, ಬೇವಿನ ಹೂವು ಹೊಟ್ಟೆಯಲ್ಲಿರುವ ಹುಳುಗಳನ್ನು ಕೊಲ್ಲುವ ಗುಣ ಹೊಂದಿದೆ. ಈ ದಿನ ಇವುಗಳನ್ನು ತಿನ್ನುವುದು ಮರೆಯದಿರಿ

    MORE
    GALLERIES

  • 67

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ದೇವರ ಪೂಜೆ: ಹಬ್ಬಗಳಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಮಾಡಿದ ಹಬ್ಬದ ಅಡುಗೆಯನ್ನು ದೇವರಿಗೆ ನೈವೇದ್ಯ ಮಾಡಿ, ಎಲ್ಲವೂ ಚೆನ್ನಾಗಿರುವಂತೆ ಪ್ರಾರ್ಥಿಸಲಾಗುವುದು. ಸಾಂಪ್ರದಾಯಿಕ ಆಚರಣೆಯಂತೆ ದೇವಸ್ಥಾನಗಳಿಗೆ ಭೇಟಿ ನೀಡಿ

    MORE
    GALLERIES

  • 77

    Ugadi 2022: ನೋಟದಿಂದ ಊಟದವರೆಗೆ ಯುಗಾದಿ ಸಂಭ್ರಮ ಹೀಗಿರಲಿ!

    ಕುಟುಂಬ, ಸ್ನೇಹಿತರೊಂದಿಗೆ ಸಂಭ್ರಮ: ಹಬ್ಬ ಎಂದರೆ ಅಲ್ಲಿ ಎಲ್ಲಿಲ್ಲದ ಸಂಭ್ರಮ ಇರುತ್ತದೆ. ಇನ್ನು ಹಿಂದೂಗಳ ಹೊಸ ವರ್ಷ ವರ್ಷವಿಡೀ ಸಂಭ್ರಮದಿಂದ ಇರುವಂತೆ ಆಪ್ತರೊಂದಿಗೆ ದಿನ ಕಳೆಯಿರಿ.

    MORE
    GALLERIES