ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಮುಷ್ಠಿಯನ್ನು ಕಟ್ಟಿದ ನಂತರ ತನ್ನ ಎಲ್ಲಾ ಬೆರಳುಗಳನ್ನು ಹೆಬ್ಬೆರಳಿನ ಕಡೆಗೆ ತೋರಿಸಿದರೆ, ಅಂತಹ ವ್ಯಕ್ತಿಯು ತುಂಬಾ ಸೃಜನಶೀಲ ಮತ್ತು ಬುದ್ಧಿವಂತ ಎಂದರ್ಥ. ಆ ವ್ಯಕ್ತಿಯು ತನ್ನ ಕೆಲಸವನ್ನು ಚೆನ್ನಾಗಿ ಪೂರ್ಣಗೊಳಿಸುತ್ತಾನೆ. ಅಂತಹ ವ್ಯಕ್ತಿಯು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ವೇಗವಾಗಿ ಎಲ್ಲರೊಂದಿಗೆ ಬೆರೆಯುತ್ತಾನೆ.
ಒಂದು ಬೆರಳಿನ ಮೇಲೆ ಹೆಬ್ಬೆರಳು: ಸಮುದ್ರಶಾಸ್ತ್ರದ ಪ್ರಕಾರ, ವ್ಯಕ್ತಿಯು ಮುಷ್ಠಿಯನ್ನು ಕಟ್ಟಿದ ನಂತರ ಒಂದು ಬೆರಳಿನ ಮೇಲೆ ಹೆಬ್ಬೆರಳು ಬಂದಿದ್ದರೆ, ಅಂತಹ ವ್ಯಕ್ತಿಯು ತುಂಬಾ ಕುತೂಹಲಕಾರಿ ಮತ್ತು ಸೃಜನಶೀಲತೆಯಿಂದ ಕೂಡಿರುತ್ತಾನೆ. ಅಂತಹ ವ್ಯಕ್ತಿಗೆ ಸಮಾಜದಲ್ಲಿ ಹೆಸರು ಮತ್ತು ಗೌರವವಿದೆ. ಜನರು ಅವರೊಂದಿಗೆ ಅಂಟಿಕೊಂಡಿರುತ್ತಾರೆ. ಅಂತಹ ವ್ಯಕ್ತಿಗಳು ಮಾತನಾಡುವ ರೀತಿಯನ್ನು ಜನರು ಇಷ್ಟಪಡುತ್ತಾರೆ. ಅಂತಹ ವ್ಯಕ್ತಿಯ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ ಎಂದು ತಿಳಿಸಲಾಗುತ್ತದೆ.
ಈ ರೀತಿಯಾಗಿ ಹಲವಾರು ರೀತಿಯಾಗಿ ಮುಷ್ಠಿಗಳನ್ನು ಕಟ್ಟುವ ವಿಧಾನಗಳು ಇರುತ್ತವೆ. ಮುಷ್ಠಿ ಕಟ್ಟುವಾಗ ಬೆರಳುಗಳನ್ನುಅರ್ಧಭಾಗ ಒಳಗೆ ಹಾಕಿದ್ದಲ್ಲಿ ಅಂತಹ ವ್ಯಕ್ತಿಯು ಉತ್ತಮ ಸ್ವಭಾವವನ್ನು ಹೊಂದಿರುತ್ತಾನೆ. ಪ್ರತಿಯೊಬ್ಬರೂ ಅವನ ವ್ಯಕ್ತಿತ್ವವನ್ನು ಪ್ರೀತಿಸುತ್ತಾರೆ. ಅಂತಹ ಜನರು ಇನ್ನೊಬ್ಬರಿಗೆ ಭಯಪಡುತ್ತಾರೆ ಮತ್ತು ಆತ ಕೆಲಸ ಮಾಡುವ ಮೊದಲು ಸಾಕಷ್ಟು ಯೋಚಿಸುತ್ತಾರೆ.