Feng Shui: ಗಂಡ- ಹೆಂಡತಿ ಸಂಬಂಧ ಮಧುರವಾಗಬೇಕಾ; ಈ ಚೀನಿವಾಸ್ತು ನಿಯಮ ಪಾಲಿಸಿ
ವಾಸ್ತು ಶಾಸ್ತ್ರವೂ (Vastu Shastra) ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಅನೇಕ ವಾಸ್ತು ಕ್ರಮಗಳಿಂದ ಸಂಬಂಧಗಳು ಸುಧಾರಿಸುವ ಉದಾಹರಣೆ ಇದೆ. ಅದರಲ್ಲೂ ಚೀನಿ ವಾಸ್ತು ಶಾಸ್ತ್ರವಾದ ಫೆಂಗ್ ಶೂಹಿ (Feng Shui) ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೆಚ್ಚು ಒತ್ತು ನೀಡುತ್ತದೆ. ಇಂತಹ ಫೆಂಗ್ ಶೂಯಿ ಸಲಹೆ ಪಾಲಿಸಿದರೆ ವೈವಾಹಿಕ ಜೀವನದಲ್ಲಿ (Married life) ಅಥವಾ ಪ್ರೇಮ ಸಂಬಂಧದಲ್ಲಿ ಸಮಸ್ಯೆಯಿದ್ದರೆ ಪರಿಹಾರ ಕಾಣುತ್ತದೆ.
ಫೆಂಗ್ ಶೂಯಿ ಪ್ರಕಾರ ನಿಮ್ಮ ಮಲಗುವ ಕೋಣೆಯ ಹೆಡ್ಬೋರ್ಡ್ ಮತ್ತು ಬೆಡ್ ನ ಫ್ರೇಮ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದನ್ನು ಮರದ ತಲೆ ಹಲಗೆ ಮತ್ತು ಚೌಕಟ್ಟಿನಿಂದ ತಯಾರಿಸಿದ್ದರೆ ಉತ್ತಮ. ಕಾರಣ, ಮರದ ಅಂಶವು ದೇಹ ಮತ್ತು ಶಕ್ತಿಯನ್ನು ಬೆಂಬಲಿಸುವ ಸಾಂಕೇತಿಕ ಸ್ವಭಾವಕ್ಕೆ ಸಂಬಂಧಿಸಿದೆ.
2/ 6
ಫೆಂಗ್ ಶೂಯಿಯ ಪ್ರಕಾರ ಗಂಡ- ಹೆಂಡತಿ ರೂಮಿನಲ್ಲಿ ಜಲಮೂಲ ಇರಬಾರದು. ಅಂದರೆ, ಅಲಂಕಾರಿಕ ಸಣ್ಣ ಕಾರಂಜಿ ಅಥವಾ ಅಕ್ವೇರಿಯಂ ಇರಬಾರದು. ಇದು ಏಕೆಂದರೆ ನೀರು ನಿಮ್ಮ ಪ್ರೀತಿಯನ್ನು ದುರ್ಬಲಗೊಳಿಸುತ್ತದೆ.
3/ 6
ಮಲಗುವ ಕೋಣೆಯಲ್ಲಿ ಟೆಲಿವಿಷನ್ ಅಥವಾ ರೇಡಿಯೊ ಇರದಂತೆ ನೋಡಿಕೊಳ್ಳಿ. ಇವು ವಿಚ್ಛಿದ್ರಕಾರಕ ಶಕ್ತಿಯಾಗಿದೆ ಕೋಣೆಯಲ್ಲಿ ದೂರದರ್ಶನವನ್ನು ಇರುವುದು ನಿಮ್ಮ ಸಂಬಂಧಕ್ಕೆ ಬರಲು ಮೂರನೇ ವ್ಯಕ್ತಿಗೆ ಆಹ್ವಾನದಂತೆ ಎಂದು ಹೇಳುತ್ತದೆ ಫೆಂಗ್ ಶೂಹಿ
4/ 6
ಸಸ್ಯಗಳು ಮತ್ತು ಹೂವುಗಳು ಯಾವಾಗಲೂ ಪ್ರೀತಿ, ಸೌಂದರ್ಯ ಮತ್ತು ಜೀವನದ ಸಂಕೇತಗಳಾಗಿವೆ. ಕೋಣೆಯಲ್ಲಿ ಸ್ವಲ್ಪ ಹಸಿರು ಇದ್ದರೆ ಅದು ನಿಮ್ಮ ಸಂಬಂಧ ಸುಧಾರಿಸುತ್ತದೆ. ಇಂತಹ ವಸ್ತುವನ್ನು ಸಾಧ್ಯವಾದಷ್ಟು ನೈಋತ್ಯ ಮೂಲೆಯಲ್ಲಿ ಇರಿಸಿ
5/ 6
ಕೋಣೆಯನ್ನು ಹೆಚ್ಚು ರೊಮ್ಯಾಂಟಿಕ್ ಬಣ್ಣಗಳಿಂದ ಅಲಂಕರಿಸಿ. ಇವು ಸಂಬಂಧದಲ್ಲಿ ಪ್ರಣಯದ ಅಂಶವನ್ನು ಹೆಚ್ಚಿಸುತ್ತವೆ. ಗುಲಾಬಿ ಅಥವಾ ಕೆಂಪು ಗೋಡೆಗಳ ಬಣ್ಣಕ್ಕೆ ಉತ್ತಮ ಆಯ್ಕೆಗಳು. ಕಪ್ಪು, ಕಂದು ಮತ್ತು ಹಸಿರು ಬಳಕೆ ಮಾಡದಿರುವುದು ಉತ್ತಮ
6/ 6
ಕೋಣೆಯನ್ನು ಹೆಚ್ಚು ರೊಮ್ಯಾಂಟಿಕ್ ಬಣ್ಣಗಳಿಂದ ಅಲಂಕರಿಸಿ. ಇವು ಸಂಬಂಧದಲ್ಲಿ ಪ್ರಣಯದ ಅಂಶವನ್ನು ಹೆಚ್ಚಿಸುತ್ತವೆ. ಗುಲಾಬಿ ಅಥವಾ ಕೆಂಪು ಗೋಡೆಗಳ ಬಣ್ಣಕ್ಕೆ ಉತ್ತಮ ಆಯ್ಕೆಗಳು. ಕಪ್ಪು, ಕಂದು ಮತ್ತು ಹಸಿರು ಬಳಕೆ ಮಾಡದಿರುವುದು ಉತ್ತಮ