Feng Shui For Job: ಕೆಲಸ ಇಲ್ದೇ ಖಾಲಿ ಇದ್ರೆ ಈ ಫೆಂಗ್ ಶೂಯಿ ವಿಧಾನ ಅನುಸರಿಸಿ ಸಾಕು
Tips To Get Job: ಕೆಲಸ ಇಲ್ಲದೇ ಖಾಲಿ ಕೂರುವುದು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ಒಂದು ಹಂತದ ಶಿಕ್ಷಣ ಪಡೆದ ನಂತರ ಕೆಲಸ ಹುಡುಕಲು ಆರಂಭ ಮಾಡುತ್ತೇವೆ. ಕೆಲವೊಮ್ಮೆ ಬಹಳ ಕಷ್ಟಪಟ್ಟರೂ ಸಹ ಕೆಲಸ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಕೆಲ ಫೆಂಗ್ ಶೂಯಿ ವಿಧಾನ ಅನುಸರಿಸುವುದು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ರೂಂನ ಉತ್ತರ ಭಾಗದಲ್ಲಿ ವಿಶ್ವ ಭೂಪಟವನ್ನು ಹಾಕುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚಾಗುತ್ತದೆ. ಹಾಗೆಯೇ ಇದರಿಂದ ನಿಮಗೆ ಸುಲಭವಾಗಿ ಕೆಲಸ ಪಡೆಯಲು ಸಹಾಯವಾಗುತ್ತದೆ ಎನ್ನುತ್ತದೆ ಫೆಂಗ್ ಶೂಯಿ.
2/ 8
ನಿಮ್ಮ ಮನೆಯ ಉತ್ತರ ದಿಕ್ಕು ವೃತ್ತಿ ಬದುಕಿನಲ್ಲಿ ಬಹಳಷ್ಟು ಬದಲಾವಣೆ ಕಾರಣವಾಗುತ್ತದೆ. ಹಾಗಾಗಿ ಉತ್ತರ ದಿಕ್ಕಿನ ಗೋಡೆಯಲ್ಲಿ ಯಶಸ್ವಿ ವ್ಯಕ್ತಿಗಳ ಫೋಟೋ ಹಾಕುವುದು ನಿಮಗೆ ಸಹಾಯ ಮಾಡುತ್ತದೆ.
3/ 8
ಫೆಂಗ್ ಶೂಯಿಗೆ ಸಂಬಂಧ ಪಟ್ಟ ಮೆಟಲ್ ವಸ್ತುಗಳನ್ನು ನೀವು ನಿಮ್ಮ ಮನೆಯ ಮೂಲೆಗಳಲ್ಲಿ ಹಾಕುವುದು ಕೆಲಸ ಬೇಗ ಸಿಗಲು ಕಾರಣ ಎನ್ನಬಹುದು. ಈಶಾನ್ಯ ಭಾಗದಲ್ಲಿ ಈ ವಸ್ತುಗಳನ್ನು ತೂಗು ಹಾಕುವುದು ಪಾಸಿಟಿವ್ ಎನರ್ಜಿಯನ್ನು ಸೆಳೆಯುತ್ತದೆ.
4/ 8
ನಿಮ್ಮ ರೂಂನ ಗೋಡೆಯ ಬಣ್ಣ ಸಹ ಮುಖ್ಯವಾಗುತ್ತದೆ ಎಂದರೆ ಹಲವಾರು ಜನರು ನಂಬುವುದಿಲ್ಲ. ಆದರೆ ಕೆಲಸ ಸಿಗದೇ ಪರದಾಡುತ್ತಿದ್ದರೆ ರೂಂ ಗೋಡೆಯ ಬಣ್ಣ ನೀಲಿ ಮತ್ತು ಕಪ್ಪು ಇದ್ದರೆ ಸೂಕ್ತ.
5/ 8
ನಿಮ್ಮ ಮೊದಲ ಬಾಗಿಲ ಬಳಿ ಹೆಚ್ಚು ವಸ್ತುಗಳನ್ನು ಇಡಬೇಡಿ. ಸುತ್ತಲು ಅನೇಕ ವಸ್ತುಗಳು ಇದ್ದರೆ ಒಳ್ಳೆಯ ಎನರ್ಜಿ ಒಳಗೆ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಅದೃಷ್ಟಕ್ಕೆ ಅಡ್ಡಗಾಲು ಹಾಕಲಾಗುತ್ತದೆ.
6/ 8
ನಿಮ್ಮ ಮನೆಯ ಗೋಡೆಯಲ್ಲಿ ಇರುವ ಕನ್ನಡಿ ಸಹ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲಿ ನಿಮ್ಮ ಮನೆಯ ದೊಡ್ಡ ಬಾಗಿಲು ಕಾಣಿಸಬೇಕು ಎಂಬುದು ಒಂದಾದರೆ, ಅದರಲ್ಲಿ ನೀರಿನ ಅಂಶವಿರುವ ವಸ್ತು ಯಾವುದಾದರೂ ಸಹ ಕಾಣಬೇಕು ಎನ್ನುತ್ತದೆ ಫೆಂಗ್ ಶೂಯಿ.
7/ 8
ನೀವು ಮಲಗುವ ಕೋಣೆಯನ್ನು ಬಹಳ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ರೂಂ ತುಂಬೆಲ್ಲಾ ವಸ್ತುಗಳು ಇದ್ದರೆ ನೆಗೆಟಿವ್ ಎನರ್ಜಿ ತುಂಬಿರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಕ್ಲೀನ್ ಆಗಿ ಇಟ್ಟುಕೊಳ್ಳಿ. ಅಗತ್ಯ ವಸ್ತುಗಳನ್ನು ಮಾತ್ರ ಅಲ್ಲಿ ಇಡುವುದು ಉತ್ತಮ.
8/ 8
ಮನೆಯಲ್ಲಿ ಡ್ರೀಮ್ ಕ್ಯಾಚರ್ ಹಾಗೂ ವಿಂಡ್ ಚೈಮ್ ಹಾಕುವುದು ಬಹಳ ಉತ್ತಮ. ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆಯೇ ಕೆಲಸ ಕೂಡ ಬಹಳ ಬೇಗ ಸಿಗುತ್ತದೆ.