Feng Shui Tips: ಮನೆಯಲ್ಲಿ ಮಾಡೋ ಈ ಬದಲಾವಣೆಗಳಿಂದ ಜಗಳಕ್ಕೆ ಬೀಳುತ್ತೆ ಫುಲ್ಸ್ಟಾಪ್!
Feng Shui Tips for Your Home: ಫೆಂಗ್ ಶೂಯಿ ವಿಧಾನವನ್ನು ಹಲವಾರು ವರ್ಷಗಳಿಂದ ಚೀನಾದಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಸಹ ಈ ವಿಧಾನವನ್ನು ಹಲವಾರು ಜನರು ಅನುಸರಿಸುತ್ತಾರೆ. ಮನೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಿರಲು ಫೆಂಗ್ ಶೂಯಿ ಸಹಾಯ ಮಾಡುತ್ತದೆ.
ಫೋಟೋಗಳು: ನಿಮ್ಮ ಮನೆಯ ಗೋಡೆಯ ಮೇಲೆ ವಿಭಿನ್ನ ರೀತಿಯ ಫೋಟೋ ಅಥವಾ ಕಲಾಕೃತಿಗಳು ಹಾಕುವುದು ಉತ್ತಮ. ಇದು ಮನೆಯಲ್ಲಿ ನೆಗೆಟಿವ್ ಎನರ್ಜಿ ಬರದಂತೆ ತಡೆಯುತ್ತದೆ. ಅಲ್ಲದೇ ನೀವು ಗೋಡೆಯ ಮೇಲೆ ಚಿತ್ರಗಳನ್ನು ಸಹ ಬಿಡಿಸಬಹುದು.
2/ 8
ಸರಿಯಾಗಿ ಜೋಡಿಸಿ ಇಡಿ: ನೀವು ನಿಮ್ಮ ಮನೆಯನ್ನು ಹೇಗೆ ಇಟ್ಟುಕೊಂಡಿರುತ್ತೀರಿ ಎಂಬುದು ಸಹ ಬಹಳ ಮುಖ್ಯವಾಗುತ್ತದೆ. ಎಲ್ಲಾ ವಸ್ತುಗಳನ್ನು ಸರಿಯಾಗಿ ಜೋಡಿಸಿ ಇಡುವುದು ಮನೆಯಲ್ಲಿ ಸಮಸ್ಯೆ ಬರದಂತೆ ತಡೆಯುತ್ತದೆ.
3/ 8
ಬಾಗಿಲು: ನಿಮ್ಮ ಮನೆಯ ಮೊದಲ ಬಾಗಿಲ ಸುತ್ತ ಮುತ್ತ ಹೆಚ್ಚು ಜಾಗ ಬಿಡುವುದು ಒಳ್ಳೆಯದು. ತಕ್ಷಣವೇ ಮತ್ತೊಂದು ಬಾಗಿಲು ಇಡುವುದು ಅಥವಾ ಕಾಲಿಗೆ ಸಿಗುವಂತೆ ವಸ್ತುಗಳನ್ನು ಇಡುವುದು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆ.
4/ 8
ಕನ್ನಡಿ ಹಾಕಿ: ನೀವು ನಿಮ್ಮ ಮನೆಯ ಮೊದಲ ಬಾಗಿಲು ತೆಗೆಯುತ್ತಿದ್ದ ಹಾಗೆ ಕನ್ನಡಿ ಕಾಣುವಂತೆ ಹಾಕಿದರೆ ಬಹಳ ಒಳ್ಳೆಯದು ಎನ್ನುತ್ತದೆ ಫೆಂಗ್ ಶೂಯಿ. ಇದರಿಂದ ಮನೆಯಲ್ಲಿ ಶಾಂತಿ ಸಿಗುತ್ತದೆ.
5/ 8
ಅಡುಗೆ ಮನೆ: ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನಿಮ್ಮ ಮನೆಗೆ ಬಂದ ಅತಿಥಿಗಳಿಗೆ ಅಡುಗೆ ಕೋಣೆ ನೇರವಾಗಿ ಕಾಣಬಾರದು. ಹಾಗೆಯೇ, ಮನೆಯಲ್ಲಿ ಮೆಟ್ಟಿಲು ಇರುವುದು ಸಹ ಆರೋಗ್ಯದ ದೃಷ್ಟಿಯಿಂದ ಉತ್ತಮವಂತೆ.
6/ 8
ಸ್ವಂತ ಮನೆ ಎಂಬುದು ಎಲ್ಲರ ಕನಸು, ಇದನ್ನು ಕಟ್ಟುವಾಗ ನಾವು ಸರಿಯಾದ ವಿಧಾನವನ್ನು ಮುಖ್ಯವಾಗಿ ಅನುಸರಿಸಬೇಕು. ಮನೆ ಕಟ್ಟಿದ ನಂತರ ಫೆಂಗ್ ಶೂಯಿ ಪ್ರಕಾರ ಮನೆಗೆ ಒಂದು ಕಲಾಕೃತಿ ತಂದು ಇಡಿ. ಇದರಿಂದ ಮನೆಯಲ್ಲಿ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಬರುವುದಿಲ್ಲ.
7/ 8
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನಿಮ್ಮ ಮನೆಯ ಯಾವುದೇ ಬಿಲ್ಗಳನ್ನು ಲೇಟ್ ಆಗಿ ಪಾವತಿ ಮಾಡಬೇಡಿ. ಇದು ಮನೆಗೆ ನೆಗೆಟಿವ್ ಎನರ್ಜಿ ಬರಲು ಮುಖ್ಯ ಕಾರಣ ಎನ್ನುತ್ತಾದೆ ಫೆಂಗ್ ಶೂಯಿ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)