Feng Shui: ಫೆಂಗ್ ಶ್ವೆಯಲ್ಲಿ ಡ್ರ್ಯಾಗನ್ ಮನೆಯಲ್ಲಿ ಇಟ್ಟರೆ ಸುಖ-ಸಮೃದ್ಧಿ ಹೆಚ್ಚುತ್ತೆ
ಸಾಂಪ್ರದಾಯಿಕ ಫೆಂಗ್ ಶೂಯಿಯಲ್ಲಿ ಡ್ರ್ಯಾಗನ್ ಬಹಳ ಜನಪ್ರಿಯವಾಗಿದೆ. ಚೀನಾದ ಅನೇಕ ಬೀದಿ, ಮಂದಿರ, ಮನೆಗಳಲ್ಲಿ ಈ ಡ್ರ್ಯಾಗನ್ ಅನ್ನು ಕಾಣಬಹುದಾಗಿದೆ. ಡ್ರ್ಯಾಗನ್ ಮನೆಯ ಸದಸ್ಯರನ್ನು ರಕ್ಷಿಸುವ ಗುರಾಣಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಚೀನಿ ವಾಸ್ತುವಿನಲ್ಲಿ ಹೇಳಲಾಗುತ್ತದೆ.
ಚೀನಿ ವಾಸ್ತುಶಾಸ್ತ್ರ ಫೆಂಗ್ ಶೂಯಿಯಲ್ಲಿ ಯಶಸ್ಸನ್ನು ಪಡೆಯಲು ಹಲವು ಮಾರ್ಗಗಳಿವೆ. ಅದರಲ್ಲಿ ಒಂದು ಡ್ರ್ಯಾಗನ್. ಫೆಂಗ್ ಶೂಯಿಯಲ್ಲಿ, ಡ್ರ್ಯಾಗನ್ ಅನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಶಕ್ತಿ, ರಕ್ಷಣೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. (Photo: pixel)
2/ 7
ಡ್ರ್ಯಾಗನ್ ಮನೆಯ ಸಂಪತ್ತು ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ. ಮನೆಯಲ್ಲಿ ಒಂದು ವೇಳೆ ಈ ಪ್ರತಿಮೆ ಇಟ್ಟರೆ ಇದರ ಮುಖ ಕಿಟಕಿಯಿಂದ ಹೊರಗೆ ನೋಡಬಾರದಂತೆ ನೋಡಿಕೊಳ್ಳಬೇಕು. (Photo: pixel)
3/ 7
ಡ್ರ್ಯಾಗನ್ ಅನ್ನು ಎಂದಿಗೂ ಮುಚ್ಚಿದ ಕೋಣೆಯಲ್ಲಿ ಇರಿಸಬೇಡಿ ಅಥವಾ ಅದರ ಮುಖವನ್ನು ಗೋಡೆಯ ಕಡೆಗೆ ಇಟ್ಟುಕೊಳ್ಳಬೇಡಿ. ಡ್ರ್ಯಾಗನ್ ಅನ್ನು ಎಂದಿಗೂ ಮಲಗುವ ಕೋಣೆಯಲ್ಲಿ ಇಡಬಾರದು. ಅಲ್ಲದೆ, ಇದನ್ನು ಸ್ನಾನಗೃಹ, ಗ್ಯಾರೇಜ್ ಅಥವಾ ಸ್ಟೋರ್ ರೂಂನಲ್ಲಿ ಇಡಬಾರದು. (Photo: pixel)
4/ 7
ಡ್ರ್ಯಾಗನ್ ಪ್ರತಿಮೆಯನ್ನು ಕಚೇರಿಗಳು ಮತ್ತು ಕೆಲಸದ ಪ್ರದೇಶಗಳಲ್ಲಿ ಪೂರ್ವ ದಿಕ್ಕಿನಲ್ಲಿ ಇಡಬೇಕು. ಡ್ರ್ಯಾಗನ್ ಅನ್ನು ಕೆಲಸದಲ್ಲಿ ಇಟ್ಟುಕೊಳ್ಳುವುದು ನಿಮ್ಮ ಬಾಸ್ನಿಂದ ಪ್ರಶಂಸೆ ಮತ್ತು ಗೆಳೆಯರಿಂದ ಬೆಂಬಲವನ್ನು ತರುತ್ತದೆ. (Photo: pixel)
5/ 7
ಮನೆಯ ಪೂರ್ವ ದಿಕ್ಕಿನಲ್ಲಿ ಹಸಿರು ಡ್ರ್ಯಾಗನ್ ಇಡುವುದು ಕುಟುಂಬದ ಸದಸ್ಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗೋಲ್ಡನ್ ಬಣ್ಣದ ಡ್ರ್ಯಾಗನ್ ಅನ್ನು ಇಟ್ಟುಕೊಳ್ಳುವುದು ಹಣವನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.(Photo: pixel)
6/ 7
ಡ್ರ್ಯಾಗನ್ ವ್ಯಾಪಾರಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ವ್ಯಾಪಾರದ ಬೆಳವಣಿಗೆಯ ಸಂಕೇತವಾಗಿದೆ. ಮನೆಯ ಸಮೃದ್ಧಿಯನ್ನು ಹೆಚ್ಚಿಸಲು ಒಂದು ಜೋಡಿ ಡ್ರ್ಯಾಗನ್ ಅನ್ನು ಮನೆಯಲ್ಲಿ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ ((Photo: pixel)
7/ 7
ಮರದ ಡ್ರ್ಯಾಗನ್ ಅನ್ನು ಆಗ್ನೇಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಆಗ್ನೇಯ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಸ್ಫಟಿಕದ ಡ್ರ್ಯಾಗನ್ ಅನ್ನು ಇರಿಸಿ. ಜೋಡಿ ಡ್ರ್ಯಾಗನ್ಗಳನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಹೆಚ್ಚು ಪ್ರಯೋಜನವಾಗುತ್ತದೆ. (Photo: pixel)