Feng Shui: ಉದ್ಯೋಗದಲ್ಲಿ ಅಭಿವೃದ್ದಿ ಹೊಂದಬೇಕಾದ್ರೆ ಮನೆಗೆ ತನ್ನಿ ಒಂಟೆ ವಿಗ್ರಹ!
ಚೀನಿ ವಾಸ್ತು ಫೆಂಗ್ ಶೂಯಿಯಲ್ಲಿ (Feng Shui) ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಹಲವು ಮಾರ್ಗಗಳ ಬಗ್ಗೆ ಹೇಳಲಾಗಿದೆ. ಅಂದಹಾಗೆ, ಫೆಂಗ್ ಶೂಯಿಯ ಹೆಸರು ಕೇಳುತ್ತಿದ್ದಂತೆಯೇ ಆಮೆ, ಲಾಫಿಂಗ್ ಬುಧ, ಕ್ರಿಸ್ಟಲ್, ವಿಂಡ್ ಚೈಮ್ಸ್ ಇತ್ಯಾದಿ ಹೆಸರುಗಳು ಜನರ ಮನಸ್ಸಿನಲ್ಲಿ ಸುತ್ತಲು ಪ್ರಾರಂಭಿಸುತ್ತವೆ. ಆದರೆ, ಫೆಂಗ್ ಶೂಯಿಯಲ್ಲಿ ಆಮೆಯನ್ನು ಹೊರತುಪಡಿಸಿ ಇನ್ನೊಂದು ಪ್ರಾಣಿಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಅದುವೇ ಒಂಟೆ.
ಫೆಂಗ್ ಶೂಯಿಯಲ್ಲಿ ಒಂಟೆಯನ್ನು ಸಹ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ದೃಷ್ಟಿಯಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು, ಆರ್ಥಿಕ ಲಾಭದ ಸಂಕೇತ ಎಂದು ಪರಿಗಣಿಸಲಾಗಿದೆ
2/ 6
ಫೆಂಗ್ ಶೂಯಿ ಪ್ರಕಾರ, ಒಂಟೆಯ ಪ್ರತಿಮೆಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಆರ್ಥಿಕ ಲಾಭ ಕಾಣಬಹುದು. . ಈ ವಿಗ್ರಹವನ್ನು ಕಚೇರಿ ಅಥವಾ ವ್ಯಾಪಾರದ ಸ್ಥಳದಲ್ಲಿ ಇರಿಸಿದ ತಕ್ಷಣ ವ್ಯತ್ಯಾಸವು ಗೋಚರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
3/ 6
ಫೆಂಗ್ ಶೂಯಿಯಲ್ಲಿ ಒಂಟೆಯನ್ನು ವಿಶೇಷವಾಗಿ ವ್ಯಾಪಾರ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ವ್ಯಾಪಾರವನ್ನು ಹೆಚ್ಚಿಸಲು ಮತ್ತು ಉದ್ಯೋಗದಲ್ಲಿ ಬಡ್ತಿ ಪಡೆಯಲು ಸಹಕಾರಿ ಎಂದು ನಂಬಲಾಗಿದೆ
4/ 6
ವ್ಯಾಪಾರ ಸ್ಥಳದದಲ್ಲಿ ಒಂಟೆಯ ಪ್ರತಿಮೆಯನ್ನು ಇರಿಸಿದರೆ, ವ್ಯಾಪಾರ ಅಭಿವೃದ್ಧಿ ಹೊಂದುತ್ತದೆ ಹೇಳಲಾಗುತ್ತದೆ. ಮತ್ತೊಂದೆಡೆ, ವಿದ್ಯಾರ್ಥಿಗಳು ತಮ್ಮ ಅಧ್ಯಯನ ಕೊಠಡಿಯಲ್ಲಿ ಒಂಟೆಯ ಪ್ರತಿಮೆಯನ್ನು ಇಟ್ಟುಕೊಂಡರೆ, ಅವರಿಗೆ ಯಶಸ್ಸು ಲಭ್ಯವಾಗುತ್ತದೆ
5/ 6
ಫೆಂಗ್ ಶೂಯಿ ಪ್ರಕಾರ, ಒಂಟೆಯ ವಿಗ್ರಹವನ್ನು ಕಚೇರಿಯಲ್ಲಿ ಇಡುವುದರಿಂದ ಕೆಲಸದ ಮೇಲೆ ಗಮನ ಹೆಚ್ಚಾಗುತ್ತದೆ. ವೃತ್ತಿಜೀವನವು ಉತ್ತಮಗೊಳ್ಳುತ್ತದೆ. ಇಷ್ಟೇ ಅಲ್ಲ, ಮನೆಯಲ್ಲಿ ಒಂಟೆ ಜೋಡಿಯನ್ನು ಸಾಕುವುದರಿಂದ ಆದಾಯ ಹೆಚ್ಚುತ್ತದೆ. ಆರ್ಥಿಕ ಅಡಚಣೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗಿದೆ
6/ 6
ಮನೆಯಲ್ಲಿ ಸಂಪತ್ತು ಹೆಚ್ಚಬೇಕೆಂದರೆ ಒಂದೆರಡು ಒಂಟೆಗಳ ಚಿತ್ರ ಅಥವಾ ವಿಗ್ರಹವನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ. ಇದರಿಂದ ಮನೆಯಲ್ಲಿ ಸುಖ-ಶಾಂತಿ ವೃದ್ಧಿಯಾಗುತ್ತದೆ ಮತ್ತು ಕುಟುಂಬ ಸದಸ್ಯರ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.