ಈ ವರ್ಷ ಬುಧ ಮಂಗಳವಾರ ಫೆಬ್ರವರಿ 7, 2023 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತೊಂದೆಡೆ, ಸೂರ್ಯನು ಫೆಬ್ರವರಿ 13, 2023 ರಂದು ಬೆಳಗ್ಗೆ 9:21 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ಥಾನೆ. ಮಾರ್ಚ್ 15, 2023 ರಂದು ಬೆಳಗ್ಗೆ 6:13 ರವರೆಗೆ ಸೂರ್ಯನು ಕುಂಭ ರಾಶಿಯಲ್ಲಿದ್ದು ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರ ಫೆಬ್ರವರಿ 15, 2023 ರಂದು ರಾತ್ರಿ 7:43 ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಮಾರ್ಚ್ 12 ರವರೆಗೆ ಇರುತ್ತದೆ.
ಕರ್ಕಾಟಕ: ಈ ರಾಶಿಯವರು ಫೆಬ್ರವರಿ ಗ್ರಹಗಳ ಚಲನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ ಕುಟುಂಬದ ಆಸ್ತಿಯನ್ನು ಪಡೆಯುವ ಅವಕಾಶವಿದೆ. ಹೊಸ ವ್ಯಾಪಾರ ಅವಕಾಶಗಳು ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ, ಈ ಅವಧಿಯಲ್ಲಿ ವಹಿವಾಟುಗಳನ್ನು ಮಾಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಸೂರ್ಯನ ಪ್ರಭಾವದ ಕಾರಣ ಜೀವನದಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನವು ಹೆಚ್ಚಾಗುತ್ತದೆ.