ದೇವಾಲಯದ ಪ್ರಧಾನ ಅರ್ಚಕ ನೀಲೇಶ್ ತಿವಾರಿ ಈ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದು, ಇದು ದೇಶದ ಅತ್ಯಂತ ಹಳೆಯ ಶನಿ ದೇವಾಲಯಗಳಲ್ಲಿ ಒಂದಾಗಿದೆ.ಶನಿಯನ್ನು ನ್ಯಾಯದ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ತಪ್ಪು ಮಾಡಿದರೆ ಶನಿ ಶಿಕ್ಷೆ ಕೊಡುತ್ತಾನೆ. ಆದ್ದರಿಂದಲೇ ಶನಿಯ ಕೋಪವನ್ನು ಶಮನಗೊಳಿಸಲು ಈ ದೇವಾಲಯದಲ್ಲಿ ಶನಿಗೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡುತ್ತಾರೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಫೋಟೋ)
ಅವರು ಹುಟ್ಟಿನಿಂದಲೇ ಅಂಧರಾಗಿದ್ದರು. ಆದರೆ ಒಂದು ದಿನ ಶನಿ ಅವರ ಕನಸಿನಲ್ಲಿ ಕಾಣಿಸಿಕೊಂಡು ಆ ಬೆಟ್ಟದ ಕೆಳಗೆ ನನ್ನ ವಿಗ್ರಹವಿದೆ ಎಂದು ಹೇಳುತ್ತಾನೆ. ಆಗ ಕನಸಿನಲ್ಲಿಯೇ ಗೋಪಾಲದಾಸ್ ಶನಿಗ 'ಓ ದೇವರೇ, ನನಗೆ ಕಣ್ಣು ಕಾಣುತ್ತಿಲ್ಲ. ನಿನ್ನ ಮೂರ್ತಿಯನ್ನು ನಾನು ಹೇಗೆ ನೋಡಲಿ ಎಂದು ಹೇಳುತ್ತಾರಂತೆ. ಆ ಮಾತನ್ನು ಮುಗಿಸುವ ಕ್ಷಣ ಮಾತ್ರದಲ್ಲಿ ಅವರಿಗೆ ದೃಷ್ಟಿ ಬರುತ್ತದೆ. (ಸಾಂದರ್ಭಿಕ ಫೋಟೋ)