DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

DK Shivakumar: ನಿನ್ನೆ ಚುನಾವಣಾ ಪ್ರಚಾರದ ನಿಮ್ಮಿತ್ತ ಪ್ರಯಾಣ ಮಾಡುತ್ತಿದ್ದ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಹೆಲಿಕಾಪ್ಟರ್​ಗೆ ಪಕ್ಷಿ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಡಿಕೆಶಿ ಸ್ವಲ್ಪದರಲ್ಲಿ ಪಾರಾಗದ್ದಾರೆನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರು ಡಿಕೆಶಿ ಅವರ ಗ್ರಹಗತಿಗಳ ಬಗ್ಗೆ ತಿಳಿಸಿದ್ದಾರೆ.

First published:

 • 17

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹುಮ್ಮಸ್ಸಿನಲ್ಲಿ ಒಂದಾದ ಬಳಿಕ ಮತ್ತೊಂದು ಜಿಲ್ಲೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ ಬೆಂಗಳೂರಿನಿಂದ ಕೋಲಾರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಪಕ್ಷಿಯೊಂದು ಬಂದು ಹೆಲಿಕಾಪ್ಟರ್​ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

  MORE
  GALLERIES

 • 27

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್​ನ ಗಾಜು ಪುಡಿಪುಡಿಯಾಗಿದೆ. ಇದರಿಂದಾಗಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದೆ. ಇನ್ನು ಹೆಲಿಕಾಪ್ಟರ್ ಅಪಘಾತದಲ್ಲಿ ಡಿಕೆಶಿ ಸ್ವಲ್ಪದರಲ್ಲಿ ಪಾರಾಗದ್ದಾರೆನ್ನಲಾಗಿದೆ

  MORE
  GALLERIES

 • 37

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ಸದ್ಯ ಈ ಅಪಘಾತದ ಬಗ್ಗೆ ಬಹಳ ಚರ್ಚೆಯಾಗಿದ್ದು, ಡಿಕೆಶಿ ಅವರಿಗೆ ಶನಿ ಬಲ ಹಾಗೂ ಗುರು ಬಲ ಯಾವುದೂ ಇಲ್ಲ ಎಂದು ಅವರ ಗುರುಗಳು ಹಾಗೂ ಖ್ಯಾತ ಜ್ಯೋತಿಷಿಗಳಾದ ರಾಜಗುರು ದ್ವಾರಕನಾಥ್ ಅವರು ತಿಳಿಸಿದ್ದಾರೆಂದು ವಿಜಯ ಕರ್ನಾಟಕ ವರದಿ ಮಾಡಿದೆ.

  MORE
  GALLERIES

 • 47

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ರಾಜಗುರುಗಳ ಪ್ರಕಾರ ಡಿಕೆಶಿಯವರ ಹೆಂಡತಿಯ ಗ್ರಹಗತಿ ಬಹಳ ಚೆನ್ನಾಗಿದೆ. ಈ ಕಾರಣದಿಂದಲೇ ಶಿವಕುಮಾರ್ ಅವರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಡಿಕ್ಕಿ ಹೊಡೆದ ಪಕ್ಷಿ ಮೃತ ಪಟ್ಟಿರುವ ಕಾರಣ, ವಿಶೇಷ ಪೂಜೆಗಳನ್ನು ಮಾಡಿಸಬೇಕು ಎಂದು ತಿಳಿಸಿದ್ದಾರೆ.

  MORE
  GALLERIES

 • 57

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ಅಲ್ಲದೇ, ಈ ದೋಷ ಪರಿಹಾರಕ್ಕಾಗಿ ಪಂಚ ಪಕ್ಷಿ ಶಾಸ್ತ್ರ ಪರಿಣಿತ ಗಜೇಂದ್ರ ಅವರನ್ನು ಸಹ ಸಂಪರ್ಕಿಸಲಾಗಿದೆಯಂತೆ. ಅವರ ಪ್ರಕಾರ 22 ದಿನಗಳ ಒಳಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಬೇಕು ಹಾಗೂ ಅಲಸೂರಿನಲ್ಲಿರುವ ಸಾವಿರ ವರ್ಷಗಳ ಹಳೆಯ ಸೋಮೇಶ್ವರ ದೇವಸ್ಥಾನದಲ್ಲಿ ರುದ್ರಾಭಿಚೇಕ ಮಾಡಿಸಬೇಕಂತೆ.

  MORE
  GALLERIES

 • 67

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ಇಷ್ಟೇ ಅಲ್ಲದೇ ಮಂಗಳವಾರ ನಡೆದ ಈ ಘಟನೆಯನ್ನು ಯಾವುದೇ ಕಾರಣಕ್ಕೂ ನಿಲರ್ಕ್ಷ್ಯ ಮಾಡಬಾರದು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ದ್ವಾರಕನಾಥ್ ಅವರು ತಿಳಿಸಿದ್ದು, ಗುರು ಬಲ ಹಾಗೂ ಶನಿ ಬಲ ಇಲ್ಲ ಎಂದಿದ್ದಾರೆ.

  MORE
  GALLERIES

 • 77

  DK Shivakumarಗಿಲ್ವಂತೆ ಗುರು ಬಲ, ಹೆಂಡತಿಯಿಂದಾಗಿ ಅಪಘಾತದಲ್ಲಿ ಬಚಾವ್ ಆಗಿದ್ದಂತೆ

  ಇಷ್ಟೇ ಅಲ್ಲದೇ, ರಾಜಕೀಯಕ್ಕೆ ಸಂಬಂಧಿಸಿದಂತೆ ಅವರಿಗೆ ಸಲಹೆಗಳನ್ನು ನೀಡಿದ್ದು, ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ಬಹಳ ಮುಖ್ಯ ಎಂದಿದ್ದಾರೆ.

  MORE
  GALLERIES