Eye Twitching Causes: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜೀವನದಲ್ಲಿ ನಡೆಯುವ ಒಳ್ಳೆಯದು ಹಾಗೂ ಕೆಟ್ಟದ್ದನ್ನು ಸೂಚಿಸುವ ಹಲವಾರು ಚಿಹ್ನೆಗಳಿವೆ. ಅದರಲ್ಲಿ ಕಣ್ಣು ಬಡಿದುಕೊಳ್ಳುವುದು ಅಥವಾ ಅದರುವುದು. ಕಣ್ಣು ಅದರುವುದರ ಹಿಂದೆ ಒಂದೊಂದು ಅರ್ಥವಿದೆ. ಎಡಗಣ್ಣು ಪದೇ ಪದೇ ಅದರುತ್ತಿದ್ದರೆ ಅರ್ಥ ಏನು ಎಂಬುದು ಇಲ್ಲಿದೆ.
ಮಹಿಳೆಯರು ಎಡಗಣ್ಣು ಪಟಪಟನೆ ಬಡಿದರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ. ಈ ರೀತಿ ಎಡಗಣ್ಣು ಹೊಡೆದುಕೊಂಡರೆ ಮಹಿಳೆಯರಿಗೆ ಚಿನ್ನ –ಬೆಳ್ಳಿ ಸೇರಿದಂತೆ ಆಭರಣಗಳಿ ಸಿಗುತ್ತದೆ ಎನ್ನುವ ನಂಬಿಕೆ ಸಹ ಇದೆ.
2/ 8
ಆದರೆ ಪುರುಷರ ಎಡಗಣ್ಣು ಅದರುತ್ತಿದ್ದರೆ ಅದರಿಂದ ಅವರಿಗೆ ಸಮಸ್ಯೆ ಇದೆ ಎಂದರ್ಥ. ಈ ರೀತಿ ಎಡಗಣ್ಣು ಅದರುವುದು ಮುಂದಿನ ದಿನಗಳಲ್ಲಿ ಕಾಡುವ ಸಮಸ್ಯೆಯ ಸೂಚನೆಯಾಗಿದ್ದು, ಶತ್ರುಕಾಟ ಹೆಚ್ಚಾಗಬಹುದು ಎನ್ನಲಾಗುತ್ತದೆ,
3/ 8
ಇನ್ನು ಎಡಗಣ್ಣು ಯಾವ ಸಮಯದಲ್ಲಿ ಅದರುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ. ಒಂದೊಂದು ಸಮಯಕ್ಕೆ ಸಹ ಒಂದೊಂದು ಅರ್ಥವಿದೆ ಎನ್ನುತ್ತದೆ ಶಾಸ್ತ್ರ. ಬೆಳಗಿನ ಸಮಯ ಹಾಗೂ ರಾತ್ರಿ ಸಮಯದಲ್ಲಿ ಕಣ್ಣು ಅದರಿದರೆ ಏನಾಗುತ್ತದೆ ಎಂಬುದು ಇಲ್ಲಿದೆ.
4/ 8
ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ತನಕ: ಬೆಳಗ್ಗಿನಿಂದ ಸಂಜೆಯವರೆಗೆ ಈ ಸಮಯದಲ್ಲಿ ಕಣ್ಣು ಅದರುವುದು ಶುಭ ಸಂಕೇತ ಎನ್ನಲಾಗುತ್ತದೆ. ಈ ಸಮಯದಲ್ಲಿ ಕಣ್ಣು ಅದರಿದರೆ ನೀವು ತುಂಬಾ ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇರುತ್ತದೆ.
5/ 8
ಹಾಗೆಯೇ ಸಂಜೆ 5 ಗಂಟೆಯಿಂದ ಬೆಳಗ್ಗೆ 6ರವರೆಗೆ: ಈ ಸಮಯದಲ್ಲಿ ಎಡಗಣ್ಣು ಅದರುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಹೌದು, ಇದು ಪುರುಷರಿಗೆ ಹಾಗೂ ಮಹಿಳೆಯರಿಗೆ ಇಬ್ಬರಿಗೂ ಸಂಬಂಧಿಸಿದ್ದಾಗಿದ್ದು, ಕಹಿ ಘಟನೆಗಳು ನಡೆಯುವ ಸಂಕೇತ ಇದು.
6/ 8
ಕಣ್ಣಿನ ಕೆಳ ರೆಪ್ಪೆ ಬಡಿದುಕೊಂಡರೆ: ಎಡಗಣ್ಣಿನ ಕೆಳಗಿನ ರೆಪ್ಪೆಯ ಜಾಗದಲ್ಲಿ ಕಣ್ಣು ಬಡಿಯುತ್ತಿದ್ದರೆ ಇದು ಕೆಟ್ಟದರ ಸಂಕೇತ ಎನ್ನುವ ನಂಬಿಕೆ ಇದೆ. ಈ ರೀತಿ ಆದರೆ ನಿಮಗೆ ತುಂಬಾ ಬೇಸರವಾಗುವ ಸಾಧ್ಯತೆ ಇರುತ್ತದೆ ಹಾಗೂ ಅಳುವ ಸಾಧ್ಯತೆ ಸಹ.
7/ 8
ಕಣ್ಣಿನ ಮೇಲಿನ ರೆಪ್ಪೆ: ನಿಮ್ಮ ಎಡಗಣ್ಣಿನ ಮೇಲಿನ ರೆಪ್ಪೆ ಬಡಿದುಕೊಂಡರೆ ನಿಮಗೊಂದು ಸರ್ಪ್ರೈಸ್ ಕಾದಿರುತ್ತದೆ ಎಂದು ಅರ್ಥವಂತೆ. ಈ ರೀತಿ ಆದ ದಿನ ನಿಮ್ಮ ಜೀವನದಲ್ಲಿ ಬಹಳ ಸಂತೋಷ ತುಂಬಿರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)