Vijayadashami Special; ಹಬ್ಬದ ದಿನ ಮೇಷ ರಾಶಿಯವರು ಹೀಗೆ ಪೂಜೆ ಮಾಡಿದರೆ ಯಶಸ್ಸು ಲಭಿಸುತ್ತದೆ
Astrology: ವಿಜಯದಶಮಿ ಹಬ್ಬ ಬಹಳ ಮುಖ್ಯವಾದ ಹಬ್ಬ. ಹಿಂದೂಗಳು ಈ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡುತ್ತಾರೆ. ನೀವು ಗಮನಿಸಿರಬಹುದು ಒಂದೊಂದು ದಿನ ದೇವಿಗೆ ಒಂದೊಂದು ಬಣ್ಣದ ವಸ್ತ್ರದಿಂದ ಅಲಂಕಾರ ಮಾಡಿದರೆ ಶ್ರೇಷ್ಠ ಎಂಬ ನಂಬಿಕೆ ಇದೆ. ಹಾಗೆಯೇ ವಿಜಯದಶಮಿಯಂದು ಒಂದೊಂದು ರಾಶಿಯಗಳು ಪೂಜೆ ಮಾಡುವ ವಿಧಗಳಿದೆ. ಹೀಗೆ ಪೂಜೆ ಮಾಡುವುದರಿಂದ ದೇವಿಯ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಯಾವ ರಾಶಿಯವರು ಹೇಗೆ ಪೂಜೆ ಮಾಡಬೇಕು ಎಂಬುದು ಇಲ್ಲಿದೆ.
ವಿಜಯದಶಮಿಯಂದು ದೇವಿಯನ್ನು ಸಾಮಾನ್ಯವಾಗಿ ಪ್ರಾರ್ಥಿಸಲಾಗುತ್ತದೆ. ಆದರೆ ಮೇಷ ರಾಶಿಯವರು ಈ ದಿನ ರಾಮನ ಆರಾಧನೆ ಮಾಡಿದರೆ ಉತ್ತಮ ಎಂಬ ನಂಬಿಕೆ ಇದೆ.
2/ 12
ಹೇಗೆ ಮೇಷ ರಾಶಿಯವರು ರಾಮನ ಆರಾಧನೆ ಮಾಡುತ್ತಾರೊ ಹಾಗೆ ಈ ದಿನ ವೃಷಭ ರಾಶಿಯವರು ರಾಮನ ಬಂಟ ಹನುಮಂತನ ಪೂಜಿಸುವುದು ಜೀವನದ ಕಷ್ಟಗಳ ನಿವಾರಣೆಗೆ ಸಹಕಾರಿ ಎಂದು ಹೇಳಲಾಗುತ್ತದೆ.
3/ 12
ಮಿಥುನ ರಾಶಿಯವರು ಸಹ ರಾಮನ ಆರಾಧನೆ ಮಾಡಬೇಕು ಎಂದು ಹೇಳಲಾಗುತ್ತದೆ. ಈ ದಿನ ಮಿಥುನಾ ರಾಶಿಯವರು ರಾಮನಿಗೆ ಕಡಲೇ ಲಡ್ಡುಗಳನ್ನು ನೈವೇದ್ಯ ಮಾಡುವುದು ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
4/ 12
ಕಟಕ ರಾಶಿಯವರು ರಾಮ ಮತ್ತು ಸೀತೆ ಈ ಇಬ್ಬರನ್ನು ಪೂಜಿಸಬೇಕು. ವಿಜಯದಶಮಿಯಂದು ರಾಮ ಮತ್ತು ಸೀತೆಯ ಆರಾಧನೆ ಮಾಡುವುದರಿಂದ ವೃತ್ತಿ ಜೀವನದಲ್ಲಿ ಶುಭವಾಗುತ್ತದೆ.
5/ 12
ಸಿಂಹ ರಾಶಿಯವರು ಓಂ ಜನಾರ್ದನಾಯ ನಮಃ ಎಂಬ ಮಂತ್ರವನ್ನು ಇಂದು ಶಪಿಸಬೇಕು. ಹೀಗೆ ಮಾಡುವುದರಿಂದ ಬದುಕಿನಲ್ಲಿ ಉತ್ತಮ ಬೆಳವಣಿಗೆಗಳು ಉಂಟಾಗುತ್ತದೆ.
6/ 12
ಈ ಹಬ್ಬದ ದಿನ ಕನ್ಯಾ ರಾಶಿಯವರು ಸಹ ಹನುಮಂತನ ಆರಾಧನೆ ಮಾಡಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
7/ 12
ತುಲಾ ರಾಶಿಯವರು ಈ ದಿನ ರಾಮನಿಗೆ ಜೇನುತುಪ್ಪ ಅರ್ಪಿಸುವುದು ಸೂಕ್ತ ಎಂದು ಹೇಳುತ್ತಾರೆ. ಮನೆಯಲ್ಲಿ ರಾಮನ ವಿಗ್ರಹ ಸ್ಥಾಪನೆ ಮಾಡಿ ಭಕ್ತಿಯಿಂದ ಪೂಜೆ ಮಾಡಬೇಕು.
8/ 12
ವೃಶ್ಚಿಕ ರಾಶಿಯವರು ಯಾವ ದೇವರ ಪೂಜೆ ಮಾಡುತ್ತಾರೆ ಎಂಬುದು ಮುಖ್ಯವಲ್ಲ ಆದರೆ ತಪ್ಪದೇ ಆಂಜನೇಯನಿಗೆ ಮಲ್ಲಿಗೆ ಹೂವನ್ನು ಅರ್ಪಿಸಬೇಕು.
9/ 12
ಧನು ರಾಶಿಯವರು ಸಹ ವಿಜಯದಶಮಿ ಪೂಜೆ ಮಾಡುವುದು ಮುಖ್ಯ ಅದರಲ್ಲೂ ತುಳಸಿ ಎಲೆಗಳನ್ನು ದೇವರಿಗೆ ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಿದರೆ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆ ಇದೆ.
10/ 12
ಮಕರ ರಾಶಿಯವರು ಸಹ ರಾಮ ಮತ್ತು ಸೀತೆ ದಂಪತಿಗಳನ್ನು ಆರಾಧಿಸಬೇಕು. ರಾಮನ ಜಪವನ್ನು ಈ ದಿನ ಮರೆಯದೆ ಮಾಡಬೇಕು.
11/ 12
ಕುಂಭ ರಾಶಿಯವರು ರಾಮನ ಜೊತೆ ಹನುಮಂತನ ಆರಾದನೆ ಮಾಡಬೇಕು ಎಂದು ಹೇಳುತ್ತಾರೆ. ಈ ದಿನ ರಾಮನ ದೇವಸ್ಥಾನಕ್ಕೆ ಭೇಟಿ ನೀಡಿ ವೀಳ್ಯದೆಲೆ ಅರ್ಪಣೆ ಮಾಡಬೇಕು.
12/ 12
ಮೀನಾ ರಾಶಿಯವರು ಈ ದಿನ ರಾಮನ ಆರಾಧನೆ ಮಾಡಬೇಕು. ಜೊತೆಗೆ ರಾಮ ಜಪವನ್ನು ಸಂಜೆಯ ಹೊತ್ತು ಮಾಡುವುದರಿಂದ ದೇವರ ಆಶೀರ್ವಾದ ಲಭಿಸುತ್ತದೆ.