ತಲೆ ಮೇಲೆ ತಮ್ಮದೇ ಆದ ಸೂರೊಂದನ್ನು ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬರ ಆಸೆ, ಕನಸು. ಮನೆ ಎಲ್ಲರ ನೆಮ್ಮದಿಯ ನಿಲ್ದಾಣ. ಎಲ್ಲೇ ಹೋಗಿ ಬಂದರೂ, ಎಂತಹದ್ದೇ ಐಶಾರಾಮಿ ಹೋಟೆಲ್, ರೆಸಾರ್ಟ್ ಅಂತಾ ತಂಗಿದರೂ ಕೊನೆಗೆ ನಮ್ಮನ್ನು ಸೆಳೆಯುವುದು ನಮ್ಮ ಮನೆ. ಎಲ್ಲರಿಗೂ ಮನೆಯೇ ಕಟ್ಟಕಡೆಯ ನೆಮ್ಮದಿ ಮತ್ತು ಖುಷಿಯ ತಾಣ. ಇಷ್ಟೆಲ್ಲಾ ಪ್ರಾಮುಖ್ಯತೆ ಇರುವ ಮನೆಯ ನಿರ್ಮಾಣದಲ್ಲೂ ಕಾಳಜಿ ವಹಿಸಬೇಕು. ಕಾಳಜಿ ಅಂದರೆ ಅದರ ನಿರ್ಮಾಣ ಮಾಡುವ ಕ್ರಿಯೆ ಮತ್ತು ಮುಖ್ಯವಾದದ್ದು ವಾಸ್ತು ಶಾಸ್ತ್ರಗಳನ್ನು ಪಾಲಿಸುವುದು.
ಮನೆ ಮತ್ತು ವಾಸ್ತು: ಮನೆಯಲ್ಲಿ ದಿಕ್ಕುಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ಮನೆಯಲ್ಲಿ ಅದಕ್ಕೆ ಅಂತಾನೆ ಸಮರ್ಪಿತವಾದ ದಿಕ್ಕುಗಳು ಇವೆ. ಆಗ್ನೇಯ ದಿಕ್ಕಿನಲ್ಲಿ ಅಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಅಡುಗೆ ಮನೆ ಇರಬೇಕು. ಪೂರ್ವ ದಿಕ್ಕಿನಲ್ಲಿ ಮನೆಯ ಬಾಗಿಲು ಇರಬೇಕು. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಮನೆ ಕಟ್ಟಿದರೆ ತುಂಬಾ ಉತ್ತಮ ಎಂದು ಹೇಳಲಾಗುತ್ತದೆ. ಪೂರ್ವ ದಿಕ್ಕಿಗೆ ಸಾಕಷ್ಟು ಪ್ರಾಶಸ್ತ್ಯ ನೀಡಲಾಗುತ್ತದೆ.
ಪೂರ್ವ ದಿಕ್ಕಿನಲ್ಲಿನ ವಾಸ್ತು ದೋಷ.: ಹೌದು, ಪೂರ್ವ ದಿಕ್ಕಿನಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಇದು ಕುಟುಂಬದವರ ಮತ್ತು ಅವರ ಸ್ವಭಾವದ ಮೇಲೆ ಪರಿಣಾಮ ನೀರುತ್ತದೆ. ಗಾಳಿಯ ಅಂಶವು ಪೂರ್ವದಲ್ಲಿ ನೆಲೆಸಿದೆ ಎಂದು ನಂಬಲಾಗಿದೆ. ಗಾಳಿಯ ಅಂಶದ ಶಕ್ತಿಯು ಜೀವನದಲ್ಲಿ ತಾಜಾತನ, ನೆಮ್ಮದಿ ಮತ್ತು ಸಂತೋಷವನ್ನು ತರುತ್ತದೆ. ಆದ್ದರಿಂದ ಪೂರ್ವ ದಿಕ್ಕಿನಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದು ಮನೆಯ ಸದಸ್ಯರ ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮನೆಯ ಪೂರ್ವ ದಿಕ್ಕನ್ನು ಸಮತೋಲನದಲ್ಲಿ ಇಡಬೇಕು.
ಹಾಗಾದ್ರೆ ಪೂರ್ವ ದಿಕ್ಕಿಗೆ ಸಂಬಂಧಿಸಿದಂತೆ ಏನು ಮಾಡಬಾರದು ಮತ್ತು ಏನು ಮಾಡಬೇಕು?: ಭಾರವಾದ ವಸ್ತುಗಳನ್ನು ಮನೆಯ ಪೂರ್ವ ದಿಕ್ಕಿಗೆ ಇಡಬಾರದು ಮತ್ತು ಇಟ್ಟರೂ ಹೆಚ್ಚು ಲೆಕ್ಕ ಹಾಕಬಾರದು. ಹೀಗೆ ಭಾರವಾದ ವಸ್ತುಗಳು ಪೂರ್ವ ದಿಕ್ಕಿನಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇದು ನೇರವಾಗಿ ಮನೆಯ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಈಶಾನ್ಯ ದಿಕ್ಕಿಗೆ ವಾಸ್ತುಶಾಸ್ತ್ರದಲ್ಲಿ ಪ್ರಥಮ ಆದ್ಯತೆ ನೀಡುತ್ತಾರೆ. ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯ ಭಾಗ. ಈ ದಿಕ್ಕಿನಲ್ಲಿ ಭಾರ ಕಡಿಮೆ ಇರಬೇಕು.
ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರಬೇಕು. ಇದರಿಂದ ಮನೆಯ ಯಜಮಾನನಿಗೂ ಹಾಗೂ ಮನೆಯ ಗಂಡು ಮಕ್ಕಳಿಗೆ ಉತ್ತಮ ಲಾಭವಾಗುತ್ತದೆ. ಅದೇ ಇಲ್ಲಿ ದೋಷ ಕಂಡು ಬಂದರೆ ಮನೆಯ ಸದಸ್ಯರ ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕಿನಲ್ಲಿ, ಗಾಳಿಯ ಪ್ರಸರಣವು ಯಾವಾಗಲೂ ಮನೆಯೊಳಗೆ ಉಳಿಯುವಂತೆ ಅಂತಹ ವ್ಯವಸ್ಥೆಗಳನ್ನು ಯಾವಾಗಲೂ ಮಾಡಬೇಕು. ಅಲ್ಲದೆ, ಯಾವುದೇ ರೀತಿಯ ಸರಕುಗಳನ್ನು ಈ ದಿಕ್ಕಿನಲ್ಲಿ ಇಡಬೇಡಿ. ಆದಷ್ಟು ಸರಕು ಕಡಿಮೆ ಮಾಡಿ ಶುಭ್ರತೆ ಕಾಪಾಡಿ.
ಮನೆಯ ಪೂರ್ವ ದಿಕ್ಕನ್ನು ಆದಷ್ಟು ಸ್ವಚ್ಛವಾಗಿಡಿ ಮತ್ತು ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ ಮತ್ತು ಪೂರ್ವ ದಿಕ್ಕಿನಲ್ಲಿ ಕನಿಷ್ಠ ಒಂದು ಕಿಟಕಿ ಇರಿಸಿ. ಪೂರ್ವ ದಿಕ್ಕಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಚರ್ಚಿಸಲಾಗಿದೆ. ಪೂರ್ವ ದಿಕ್ಕಿಗೆ ಸಂಬಂಧಿಸಿದ ವಾಸ್ತು ಸಲಹೆಗಳನ್ನು ಪಾಲಿಸಿದಲ್ಲಿ ಮನೆಯಲ್ಲಿ ನೆಮ್ಮದಿ, ಸಂತೋಷ ಇರುತ್ತದೆ.