Sade Sati Effect: ಅಬ್ಬಬ್ಬಾ ಈ ರಾಶಿಗೆ ಶನಿ ಕಾಟ, ಸಾಡೇಸಾತಿ ಎಫೆಕ್ಟ್ ಅಂದ್ರೆ ಸುಮ್ನೆನಾ?
Effect of Sade Sati on Your Zodiac Sign: ಸಾಡೇಸಾತಿ ಎಂದರೆ ಎಲ್ಲರ ಮನಸ್ಸಲ್ಲಿ ಭಯ ಮೂಡುತ್ತದೆ. ಶನಿ ಯಾವೆಲ್ಲಾ ರೀತಿಯಾಗಿ ಸಮಸ್ಯೆ ಉಂಟುಮಾಡಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ಒಂದೊಂದು ರಾಶಿಗೆ ಈ ಶನಿಯ ಕಾಟ ವಿಭಿನ್ನವಾಗಿರುತ್ತದೆ. ಯಾವ ರಾಶಿಯ ಮೇಲೆ ಶನಿಯ ಪ್ರಭಾವ ಹೇಗಿರುತ್ತದೆ ಎಂಬುದು ಇಲ್ಲಿದೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಸಾಡೇಸಾತಿಯ ಕಾರಣದಿಂದ ಹಣದ ಸಮಸ್ಯೆಗಳು ಉಂಟಾಗಬಹುದು. ಆರ್ಥಿಕವಾಗಿ ನಷ್ಟ ಸೇರಿದಂತೆ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗುತ್ತದೆ. ಈ ಸಮಯದಲ್ಲಿ ಯಶಸ್ಸು ಸಿಗುವುದು ಕಷ್ಟವಾಗುತ್ತದೆ.
2/ 12
ವೃಷಭ ರಾಶಿ: ವೃಷಭ ರಾಶಿಯವರಿಗೆ ಸಾಡೇಸಾತಿಯ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಜಾಸ್ತಿ ಆಗುತ್ತದೆ. ಖನ್ನತೆ, ಮಾನಸಿಕ ಒತ್ತಡ ಸೇರಿದಂತೆ ಅನೇಕ ರೀತಿಯ ಸಮಸ್ಯೆಯಿಂದ ಬಳಲುತ್ತಾರೆ. ಈ ಸಮಯದಲ್ಲಿ ಭಾವನಾತ್ಮಕವಾಗಿ ಕುಸಿಯುತ್ತಾರೆ.
3/ 12
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಸಾಡೇಸಾತಿ ಇದ್ದರೆ ಬಹಳ ಕಷ್ಟಪಡಬೇಕಾಗುತ್ತದೆ. ಈ ರಾಶಿಯವರು ಯಾವುದೇ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಮಾಡಿದ್ರೂ ಸಹ ಒಳ್ಳೆಯದು ಆಗುವುದಿಲ್ಲ.
4/ 12
ಕಟಕ ರಾಶಿ: ಕಟಕ ರಾಶಿಯವರಿಗೆ ಸಹ ಸಾಡೇಸಾತಿಯ ಕಾರಣದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಸಮಯದಲ್ಲಿ ಸಾಲು ಸಾಲು ಆರ್ಥಿಕ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳು ಕಾಡುತ್ತದೆ,
5/ 12
ಸಿಂಹ ರಾಶಿ: ಸಾಡೇಸಾತಿಯಿಂದ ಒಂದೆಲ್ಲಾ ಒಂದು ಸಮಸ್ಯೆಗಳು ಬರುವುದು ಸಹಜ. ಯಾವಾಗ, ಯಾವ ರೀತಿ ಸಮಸ್ಯೆ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ. ಸಿಂಹ ರಾಶಿಯವರಿಗೆ ಕಾನೂನು ಸಮಸ್ಯೆಗಳು ಹಿಂಸೆ ಮಾಡಬಹುದು.
6/ 12
ಕನ್ಯಾ: ಕನ್ಯಾ ರಾಶಿಯವರಿಗೆ ಸಾಡೇಸಾತಿಯ ಕಾರಣದಿಂದ ಶಿಕ್ಷಣ ಹಾಗೂ ವೃತ್ತಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡುವುದಿರಲಿ ಪಾಸ್ ಆಗಲು ಸಹ ಕಷ್ಟಪಡಬೇಕಾಗುತ್ತದೆ. ಹಾಗೆಯೇ ಕೆಲಸದ ಸ್ಥಳದಲ್ಲಿ ಸಹ ಒತ್ತಡ ಇರುತ್ತದೆ.
7/ 12
ತುಲಾ: ಈ ರಾಶಿಯವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ. ಅಂದರೆ ಕೋಪ ಜಾಸ್ತಿ ಆಗುತ್ತದೆ, ತಾಳ್ಮೆ ಎಂಬ ಪದದ ಅರ್ಥ ಮರೆತು ಹೋಗುತ್ತದೆ. ಇದರಿಂದ ಸಂಬಂಧಗಳಲ್ಲಿ ಸಹ ಸಮಸ್ಯೆ ಬರಬಹುದು.
8/ 12
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಎಲ್ಲಾ ರೀತಿಯಲ್ಲಿ ಸಾಡೇಸಾತಿ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯ, ಒತ್ತಡ ಹೆಚ್ಚಾಗುತ್ತದೆ. ಅದರ ಜೊತೆಗೆ ಆರ್ಥಿಕವಾಗಿ ಹಾಗೂ ಆರೋಗ್ಯದಲ್ಲಿ ಸಹ ಸಮಸ್ಯೆಗಳು ಉಂಟಾಗುತ್ತದೆ.
9/ 12
ಧನಸ್ಸು: ಈ ರಾಶಿಯವರು ಸಾಡೇಸಾತಿ ಸಮಯದಲ್ಲಿ ಮದುವೆ ಆದರೆ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಕುಟುಂದಲ್ಲಿ ವೈಮನಸ್ಸು ಮೂಡಿ, ದೂರ ಆಗುವ ಸಾಧ್ಯತೆ ಇರುತ್ತದೆ.
10/ 12
ಮಕರ: ಕಷ್ಟಪಟ್ಟು ದುಡಿದ ಹಣ ಉಳಿಯುವುದೇ ಇಲ್ಲ. ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಸಮಸ್ಯೆಗಳು ಮುಗಿಯುವುದರಲಿ, ಹೆಚ್ಚಾಗುತ್ತದೆ ಅಷ್ಟೇ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಸಹ ಕಾಡುತ್ತದೆ.
11/ 12
ಕುಂಭ ರಾಶಿ: ಸಾಡೇಸಾತಿ ಕುಂಬ ರಾಶಿಯವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ.
12/ 12
ಮೀನ: ಸಾಡೇಸಾತಿಯ ಕಾರಣದಿಂದ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ಹೆಚ್ಚಾಗುವುದು, ಅನಿರೀಕ್ಷಿತ ಘಟನೆಗಳು ನಡೆಯುವುದು ಹೀಗೆ ಊಹಿಸದ ರೀತಿ ಜೀವನದ ಬದಲಾಗುತ್ತದೆ,