Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

Eagle Flying: ಭಾರತೀಯ ಸಂಪ್ರದಾಯದಲ್ಲಿ ವಿಭಿನ್ನವಾದ ನಂಬಿಕೆಗಳಿದೆ. ಕೇವಲ ಹಬ್ಬ-ಹರಿದಿನಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳ ವಿಚಾರದಲ್ಲಿ ಸಹ ಅನೇಕ ಪದ್ಧತಿಗಳಿದೆ. ಹಾಗೆಯೇ, ಮನೆಯ ಸುತ್ತ ಹದ್ದು ಹಾರಾಡುತ್ತಿದ್ದರೆ ಕೆಲವರಿಗೆ ಭಯ ಆಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಹದ್ದು ಹಾರಾಡುತ್ತಿದ್ದರೆ ಒಳ್ಳೆಯದಾ? ಕೆಟ್ಟದ್ದಾ? ಎಂಬುದು ಇಲ್ಲಿದೆ.

First published:

  • 18

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಸಾಮಾನ್ಯವಾಗಿ ಹದ್ದು ಮನೆಯ ಸುತ್ತ ಹಾರಾಡುತ್ತಿದ್ದರೆ ಅಥವಾ ಮನೆಯ ಮೇಲೆ ಬಂದು ಕುಳಿತರೆ ಭಯವಾಗುತ್ತದೆ. ಯಾವುದೋ ಕೆಟ್ಟ ಘಟನೆ ನಮ್ಮ ಜೀವನದಲ್ಲಿ ನಡೆಯುತ್ತದೆ ಎಂದೆಲ್ಲಾ ಅನಿಸುತ್ತದೆ. ಹಾಗಾದ್ರೆ ನಿಜಕ್ಕೂ ಹದ್ದು ಮನೆಯ ಬಳಿ ಇದ್ದರೆ ಏನಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 28

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಮುಖ್ಯವಾಗಿ ಹದ್ದು ಮನೆಯ ತುಳಸಿ ಗಿಡದ ಮೇಲೆ ಕುಳಿತರೆ ಬಹಳ ಒಳ್ಳೆಯದಂತೆ. ಅಲ್ಲದೇ, ಇದರಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿ ನಾಶವಾಗುತ್ತದೆ ಎಂದು ಅರ್ಥವಂತೆ. ಇಷ್ಟೇ ಅಲ್ಲದೇ ಮನೆಯಲ್ಲಿ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 38

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಮುಖ್ಯವಾಗಿ ಹದ್ದು ನಿಮ್ಮ ಮನೆಯ ಛಾವಣಿ ಮೇಲೆ ಹಾರಿದರೆ ಬಹಳ ಸಮಸ್ಯೆಯಂತೆ. ಇದು ದೊಡ್ಡ ಅಪಾಯವಾಗುವುದರ ಸೂಚನೆ ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಜಗಳ ಆಗುತ್ತದೆ. ಇಷ್ಟೇ ಅಲ್ಲದೇ, ಹದ್ದು ಮನೆಯ ಮೇಲೆ ಇಟ್ಟ ನೀರನ್ನು ಕುಡಿದರೆ ಆರೋಗ್ಯ ಸಮಸ್ಯೆಗಳು ಸಾಲಾಗಿ ಬರುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 48

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಆದರೆ ಅದೇ ಹದ್ದು ಮನೆಯ ಛಾವಣಿ ಮೇಲೆ ಕುಳಿತು ಶಬ್ಧ ಮಾಡಿದರೆ ಬಹಳ ಒಳ್ಳೆಯದಂತೆ. ಅದರಿಂದ ಜೀವನದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆಯೇ, ಆರ್ಥಿಕವಾಗಿ ಯಾವುದಾದರೂ ಸಮಸ್ಯೆಯಿದ್ದರೆ ಅದಕ್ಕೆ ಶಾಶ್ವತ ಮುಕ್ತಿ ದೊರೆಯುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 58

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಅಲ್ಲದೇ, ಈ ಹದ್ದು ನಿಮ್ಮ ಬಟ್ಟೆಯನ್ನು ಕುಕ್ಕಿದರೆ ಸಹ ಶ್ರೇಷ್ಠ ಎನ್ನಲಾಗುತ್ತದೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಅಲ್ಲದೇ, ಮನೆಯ ಯಾವುದಾದರೂ ಸಸ್ಯವನ್ನು ಹದ್ದು ಕುಕ್ಕಿದರೆ ಸಹ ನಿಮಗೆ ಒಳ್ಳೆಯದಾಗುತ್ತದೆ. ಇದರಿಂದ ಆಯಸ್ಸು ಹೆಚ್ಚಾಗುತ್ತದೆ.

    MORE
    GALLERIES

  • 68

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಇನ್ನು ನಾವು ಕಾಗೆ ಬಂದು ನಮ್ಮ ತಲೆಯನ್ನು ಮುಟ್ಟಿದರೆ ಯಾವುದೋ ಸಮಸ್ಯೆ ಆಗುತ್ತದೆ ಎಂದು ಅರ್ಥ ಮಾಡಿಕೊಳ್ಳುತ್ತೇವೆ. ಹಾಗೆಯೇ ಈ ಹದ್ದು ಬಂದು ನಮ್ಮ ತಲೆಯನ್ನು ಮುಟ್ಟಿದರೆ ಅಥವಾ ತಲೆಗೆ ಕುಕ್ಕಿದರೆ ನಿಜಕ್ಕೂ ಜೀವಕ್ಕೆ ಅಪಾಯವಿದೆ ಎಂದರ್ಥ. ಕೆಲವೊಮ್ಮೆ ಇದು ಶಾಶ್ವತ ಅನಾರೋಗ್ಯ ಸಂಕೇತ ಕೂಡ.

    MORE
    GALLERIES

  • 78

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಇಷ್ಟೆಲ್ಲಾ ಒಂದೆಡೆಯಾದರೆ ಇನ್ನೊಂದು ನಂಬಿಕೆಗಳ ಪ್ರಕಾರ ಯಾವ ಮನೆಯ ಮೇಲೆ ಈ ಹದ್ದು ಬಂದು ಕೂರುತ್ತದೆಯೋ ಆ ಮನೆಯಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲವಂತೆ. ಅಲ್ಲದೇ, ಕಷ್ಟಗಳು ಸಹ ಬಹಳ ಹೆಚ್ಚಾಗುತ್ತದೆ.

    MORE
    GALLERIES

  • 88

    Eagle Flying: ಮನೆ ಸುತ್ತ ಹದ್ದು ಹಾರಾಡ್ತಿದ್ರೆ ಕೆಟ್ಟದ್ದಾಗುತ್ತಾ? ಜ್ಯೋತಿಷ್ಯದಲ್ಲಿದೆ ನೋಡಿ ಅಚ್ಚರಿಯ ವಿಚಾರ

    ಈ ಹದ್ದು ಕೆಲವೊಮ್ಮೆ ಮಾತ್ರ ಶುಭ ಫಲಗಳನ್ನು ನೀಡುತ್ತದೆ. ಆದರೆ ಹೆಚ್ಚಿನ ಬಾರಿ ಇದು ಮನೆಯ ಬಳಿ ಬಂದಾಗ ಸಮಸ್ಯೆಗಳಾಗುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES