Navaratri Special: ಕೊಲ್ಕತ್ತಾದಲ್ಲಿ ನವರಾತ್ರಿ ವೈಭವ, ವಿಭಿನ್ನ ಪೆಂಡಾಲ್- ಅದ್ಧೂರಿ ಆಚರಣೆ
Durga Pooje: ಪಶ್ಚಿಮ ಬಂಗಾಳದಲ್ಲಿ, ಮುಖ್ಯವಾಗಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಮತ್ತು ಅದರ ಪೆಂಡಲ್ಗಳಿಗೆ ಹೆಸರುವಾಸಿಯಾಗಿದೆ. ಇದು ಮಾನವ ಜೀವನದ ವಿವಿಧ ಅಂಶಗಳ ಚಿತ್ರಣವನ್ನು ನೀಡುತ್ತದೆ. ಸಧ್ಯ ಸಾರ್ವಜನಿಕರಿಗೆ ಪಂಡೆಲ್ಗಳ ಒಳಗೆ ಅವಕಾಶ ನೀಡದಿರುವ ಕಾರಣ, ಪ್ರವಾಸಿಗರಿಗೆ ರಸ್ತೆಯಿಂದ ವಿಗ್ರಹಗಳ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಈ ವರ್ಷದ ಕೋಲ್ಕತ್ತಾದಲ್ಲಿನ ಕೆಲವು ಪ್ರಸಿದ್ಧ ದುರ್ಗಾ ಪೂಜಾ ಪೆಂಡಲ್ಗಳು ಇಲ್ಲಿವೆ.
ಕೊಲ್ಕತ್ತಾದಲ್ಲಿ ದುರ್ಗಾಪೂಜೆಯು 1909ರಲ್ಲಿ ನದಿಯಾ ಎಂಬಲ್ಲಿ ಮಹಾರಾಜ ಶ್ರೀ ಕೃಷ್ಣಚಂದ್ರರಿಂದ ಆರಂಭವಾಯಿತು. ಭೋವಾನಿಪುರ 75 ಪ್ಯಾಲಿಯಲ್ಲಿ ಅಲಂಕಾರ ಮಾಡಿರುವ ದುರ್ಗಾ ಪೆಂಡಾಲ್.
2/ 10
ನಂತರ 1980ರಲ್ಲಿ ತುಂಬಾ ಚೆನ್ನಾಗಿ ಅಲಂಕಾರ ಮಾಡಿರುವ ಪ್ಯಾಂಡಲ್ ಗೆ ಪ್ರಶಸ್ತಿ ಕೊಡಲು ಪ್ರಾರಂಭಿಸಿದರು. ಆದ್ದರಿಂದ ವಿಭಿನ್ನ ರೀತಿಯ ಪೆಂಡಲ್ಗಳನ್ನು ಹಾಕುವ ಪ್ರವೃತ್ತಿ ಆರಂಭವಾಯಿತು.ಕೊಲ್ಕತ್ತಾದ ಬೀದಿಗಳಲ್ಲಿ ದುರ್ಗಾ ದೇವಿಯ ಮೂರ್ತಿ ಇದ್ದೇ ಇರುತ್ತದೆ.
3/ 10
ದುರ್ಗಾಪೂಜೆ ಪಶ್ಚಿಮ ಬಂಗಾಳದ ಮುಖ್ಯ ಹಬ್ಬ. ಮಹಾಲಯ ಅಮಾವಾಸ್ಯೆಯಂದು ನದಿ ಸ್ನಾನ ಮಾಡಿ ತರ್ಪಣ ಬಿಡುವುದರಿಂದಲೇ ಹಬ್ಬ ಆರಂಭವಾಗುತ್ತದೆ. ಇದು ನಗರದ 21 ಪ್ಯಾಲಿಯಲ್ಲಿ ಸ್ಥಾಪಿಸಲಾಗಿರುವ ಮೂರ್ತಿ.
4/ 10
ಪುರಾಣದ ಪ್ರಕಾರ ದುರ್ಗೆ ಮಹಿಷಾಸುರನ ವಧೆಗೆ ದೇವಿ ತಾಳಿದ ರೂಪ. ಎಲ್ಲಾ ದೇವತೆಗಳೂ ಒಟ್ಟಿಗೆ ಸೇರಿ ತಮ್ಮ ತಮ್ಮ ಶಕ್ತಿಯ ಅಂಶವನ್ನು ಸೇರಿಸಿ, ದುರ್ಗೆಯನ್ನು ಸೃಷ್ಟಿಸಿದ್ದರು ಎಂಬ ನಂಬಿಕೆ ಇದೆ. ಕೊಲ್ಕತ್ತಾದ ಕಾಶಿ ಬೋಸ್ ಲೇನ್ ಬಳಿ ಸ್ಥಾಪಿಸಿರುವ ತಾಯಿ ದುರ್ಗೆಯ ಮೂರ್ತಿ.
5/ 10
ಪ್ರತಿ ವರ್ಷ ಬೆಂಗಾಲಿಯ ಅಶ್ವಿನ್ ಮಾಸದಲ್ಲಿ ದೇವಿಯನ್ನು ಬರಮಾಡಿಕೊಂಡು ಪೂಜಿಸಲಾಗುತ್ತದೆ. ದೇವಿ ಕಾರ್ತೀಕ, ಗಣೇಶ, ಸರಸ್ವತಿ ಮತ್ತು ಲಕ್ಷ್ಮಿಯೊಂದಿಗೆ ಬಂದು ಹರಸುತ್ತಾಳೆ ನಂಬಿಕೆ ಇದೆ. ಬೋಸೆಪುಕೂರ್ ತಲ್ಬಗನ್ ಸರ್ಬೋಜೋನಿನ್ ಪ್ರದೇಶದಲ್ಲಿನ ದುರ್ಗಾ ಮೂರ್ತಿ.
6/ 10
ವಿಗ್ರಹಗಳನ್ನು ಕುಮಾರತುಲಿ ಎಂಬ ಜಾಗದಲ್ಲಿ ತಯಾರಿಸುತ್ತಾರೆ. ಒಂದು ತಂಡದ ಕಲಾವಿದರು ಪ್ರತಿಮೆಗಳನ್ನು ಮಾಡಿ ರೂಪ ಕೊಟ್ಟರೆ, ಇನ್ನೊಂದು ತಂಡ ಮಂಟಪ ಕಟ್ಟಿ ಅಲಂಕರಿಸುವ ಕೆಲಸ ಮಾಡುತ್ತದೆ. ಬೋಸೆಪುಕೂರು ಶೀತಲ ಮಂದಿರದಲ್ಲಿ ಸ್ಥಾಪನೆಯಾಗಿರುವ ಮೂರ್ತಿ.
7/ 10
ಕೆಲವು ಸಲ ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕಟ್ಟಡಗಳಂತೆ ಕೂಡ ಮಾಡುತ್ತಾರೆ. ಈ ಪ್ಯಾಂಡಾಲ್ ಗಳನ್ನು ನಿರ್ಮಿಸಲು ಒಬ್ಬರಿಂದೊಬ್ಬರಿಗೆ ಪೈಪೋಟಿ ಕೂಡ ಇರುತ್ತದೆ. ಇದು 95 ನೇ ಪ್ಯಾಲಿಯಲ್ಲಿ ನಿರ್ಮಿಸಲಾಗಿರುವ ದುರ್ಗಾ ಪೆಂಡಾಲ್ .
8/ 10
ಮಹಾಷಷ್ಠಿಯ ದಿನ ದುರ್ಗಾಪೂಜೆ ಆರಂಭವಾಗುತ್ತದೆ. ಮಹಾಸಪ್ತಮಿ, ಮಹಾನವಮಿ, ಮಹಾಷ್ಠಮಿ ದಿನಗಳಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಮುಡಿಯಾಲಿ ಕ್ಲಬ್ ಬಳಿಯ ದುರ್ಗಾ ದೇವಿಯ ಪೂಜೆ.
9/ 10
ದುರ್ಗಾಪೂಜೆಯ ಒಂದು ತಿಂಗಳ ಮೊದಲೇ ಹಬ್ಬದ ವಾತಾವರಣ ಸೃಷ್ಟಿಸಿಬಿಡುತ್ತದೆ. ಈ ಹಬ್ಬದ ದಿನಗಳಲ್ಲಿ ಅಲ್ಲಿನ ನಗರಗಳ ಅಲಂಕಾರ ನೋಡಲು ಅತಿ ಸುಂದರವಾಗಿರುತ್ತದೆ. ಬರೀಶ ಸರ್ಬೋಜೋನಿನ್ ಪ್ರದೇಶದ ತಾಯಿಯ ಮೂರ್ತಿ.
10/ 10
ಈ ಹಬ್ಬದ ಸಮಯದಲ್ಲಿ ಅತಿ ಹೆಚ್ಚು ಸಿಹಿ ತಿಂಡಿಗಳನ್ನು ಮಾಡುತ್ತಾರೆ. ಅದರಲ್ಲೂ ಸಂದೇಶ್ ಎನ್ನುವ ಬಂಗಾಳದ ಪ್ರಸಿದ್ಧ ಸಿಹಿತಿಂಡಿಯನ್ನು ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಕೊಲ್ಕತ್ತಾದ ಹಿಂದೂಸ್ತಾನ್ ಪಾರ್ಕ್ ಬಳಿ ಸ್ಥಾಪನೆಯಾಗಿರುವ ದುರ್ಗಾ ದೇವಿಯ ಮೂರ್ತಿ.