ಸಿಂಹ ರಾಶಿ: ಸೂರ್ಯನ ಸಂಚಾರವು ಸಿಂಹ ರಾಶಿಯವರಿಗೆ ಸಮಸ್ಯೆ ಉಂಟು ಮಾಡುತ್ತದೆ. ಸೂರ್ಯನು ನಿಮ್ಮ ರಾಶಿಯಿಂದ ಆರನೇ ಮನೆಗೆ ಸಾಗಿದ್ದಾನೆ. ಇದು ರೋಗ ಮತ್ತು ಶತ್ರುವಿನ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಹಿತ ಶತ್ರುಗಳಿಂದ ಜಾಗರೂಕರಾಗಿರಬೇಕು. ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಅಲ್ಲದೇ, ನೀವು ನ್ಯಾಯಾಲಯದ ಪ್ರಕರಣಗಳಲ್ಲಿ ಸೋಲನ್ನು ಎದುರಿಸಬಹುದು.